
ಈಗಂತೂ ಎಲ್ಲರಿಗೂ ಸುದ್ದಿಯಲ್ಲಿರಬೇಕು ಅನ್ನೋ ಖಯಾಲಿ. ಯೆಸ್, ಜಗತ್ತಿನಲ್ಲಿ ಈಗ ಅಂಗೈಯಲ್ಲೇ ಗುರುತಿಸಿಕೊಳ್ಳುವ ಮೊಬೈಲ್ ಅನ್ನೋ ಅಸ್ತ್ರವಿದೆ. ಇಂಟರ್ನೆಟ್ ಮೂಲಕ ಮೂಲೆ ಮೂಲೆ ತಲುಪ್ತೀವಿ ಅನ್ನೋ ಅಗಾದ ನಂಬಿಕೆಯೂ ಹಲವರಿಗಿದೆ. ಹಾಗಾಗಿಯೇ ಒಂದಷ್ಟು ಮಂದಿಗೆ ಕುಂತ್ರೂ, ನಿಂತ್ರೂ ಸುದ್ದಿಯಲ್ಲಿರಬೇಕೆಂಬ ಹಪಾಹಪಿ. ಅದರಲ್ಲೂ ಈ ಸೆಲಿಬ್ರಿಟೀಸ್ ವಿಷಯಕ್ಕೆ ಬಂದ್ರೆ, ಅವರೇ ಹೆಚ್ಚೆಚ್ಚು ಇಂತಹ ಹುಚ್ಚುತನಕ್ಕೆ ಅಂಟಿಕೊಂಡಿರೋದು.
ಸಿನಿಮಾ ತಾರೆಯರಿಗಂತೂ ತಾವು ಸದಾ ಸುದ್ದಿಯಲ್ಲಿರಬೇಕು ಅನ್ನೋ ತವಕ. ರಾತ್ರೋ ರಾತ್ರಿ ನಾನೂ ಸುದ್ದಿಯಾಗಬೇಕು, ಎಲ್ಲೆಡೆ ನನ್ನ ಮಾತು, ನನ್ನ ಸ್ಟೈಲ್ ಎಲ್ಲವೂ ವೈರಲ್ ಆಗಬೇಕು ಅನ್ನೋ ಆಸೆ. ಹಾಗೆ ಆಗಬೇಕು ಅಂದ್ರೆ ಹೇಗಿರಬೇಕು, ಏನು ಮಾಡಬೇಕು ಅನ್ನೋದು ಅವರಿಗೂ ಗೊತ್ತು ಬಿಡಿ. ಆ ಕಾರಣಕ್ಕೋ ಏನೋ, ಒಂದಷ್ಟು ನಟಿಮಣಿಗಳು ಈಗ ಸುದ್ದಿಯಾಗ್ತಾ ಇದ್ದಾರೆ. ಅದರಲ್ಲೂ ಬಾಲಿವುಡ್ ನಟಿಯರೆಂದರೆ ಕೇಳಬೇಕೇ ತುಸು ಜಾಸ್ತೀನೆ ಸುದ್ದಿಯಾಗೋದನ್ನು ಬಯಸ್ತಾರೆ. ಸುದ್ದಿ ಆಗಲಿ, ಆದರೆ, ಸಿಕ್ಕಾಪಟ್ಟೆ ವೈರಲ್ ಆಗಿ ಜನ ಬಾಯಿಗೆ ಬಂದಂಗೆ ಬೈದುಕೊಳ್ಳುವಂತೆ ವೈರಲ್ ಆಗಿಬಿಟ್ರೆ ಏನ್ಮಾಡೋದು?
ಈಗ ಅಂಥದ್ದೊಂದು ವೈರಲ್ ವಿಡಿಯೋ ಮೂಲಕ ಸುದ್ದಿಯಾಗಿ, ಜನರ ಬಾಯಿಗೆ ಆಹಾರವಾದ ನಟಿ ಅಂದ್ರೆ ಥಟ್ಟನೆ ನೆನಪಾಗೋದು ಖುಷಿ ಮುಖರ್ಜಿ. ಅದಕ್ಕೆ ಕಾರಣ ಅವರು ಇತ್ತೀಚೆಗೆ ಧರಿಸಿದ್ದ ಡ್ರೆಸ್.
ಈ ಧರಿಸಿದ್ದ ಅನ್ನೋದ್ದಕ್ಕಿಂತ ದೇಹದ ಮೇಲೆ ಕಳಚಿದ್ದ ಡ್ರೆಸ್ ಅನ್ನೋಬಹುದೇನೋ? ನಿಜ, ಬಾಲಿವುಡ್ ನಟಿ ಖುಷಿ ಮುಖರ್ಜಿ ಬಗ್ಗೆ ಈಗ ಹೇಳುಕೊಳ್ಳುವ ಖುಷಿಯಂತೂ ಇಲ್ಲ ಬಿಡಿ. ಖುಷಿ ಅನ್ನೋದೇನಾದ್ರೂ ಇದ್ದರೆ ಅದು ಪಡ್ಡೆ ಹುಡುಗರದ್ದು. ಅವರು ಇತ್ತೀಚೆಗೆ ಒಳ ಉಡುಪು ಹಾಕದೇ ಮೇಲೆ ಧರಿಸಿದ್ದ ಬ್ಲಾಕ್ ಸ್ಕರ್ಟ್ ಅಂಥದ್ದೊಂದು ಮೋಡಿ ಮಾಡಿತ್ತು. ಆ ಕಾರಣಕ್ಕೆ ಅವರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಲವರು ಕಣ್ಣಗಲಿಸಿ ನೋಡಿದ್ರೆ, ಕೆಲವರು ಕೆಂಗಣ್ಣು ಬಿಟ್ಟಿದ್ದರು.
ಲೈಫ್ ಸ್ಟೈಲ್ ಓಕೆ ಆದರೆ, ಅದೇನೋ ಫ್ಯಾಷನ್ ಅನ್ನೋ ಹೆಸರಲ್ಲಿ ಲಂಗು ಲಗಾಮಿಲ್ಲದೆ ಕೆಲವರು ತಿಕ್ಕಲಿನಂತೆ ವರ್ತಿಸ್ತಿದ್ದಾರಾ ? ಖುಷಿ ಮುಖರ್ಜಿಯ ಈ ಅವತಾರ ಅದಕ್ಕೆ ಸಾಕ್ಷಿ ಅನ್ನೋವಂತಿದೆ.

ಸಿನಿಮಾ ನಟಿಯರು ಗ್ಲಾಮರಸ್ ಆಗಿದ್ದರೆ ಅದಕ್ಕೊಂದು ಅರ್ಥ. ತಮ್ಮ ಗ್ಲಾಮರ್ ಅನ್ನು ಪ್ರದರ್ಶಿಸುವುದು ಕೂಡ ಕಾಮನ್. ಆದರೆ, ಅದೇ ಗ್ಲಾಮರ್ ಒಮ್ಮೊಮ್ಮೆ ಅತಿಯಾದರೆ, ಸುಖಾಸುಮ್ಮನೆ ಟೀಕೆ ಮತ್ತು ಟ್ರೋಲಿಂಗ್ ಗೆ ಗುರಿಯಾಗಬೇಕಾಗುತ್ತೆ. ನೆಟ್ಟಿಗರಂತೂ ಬೈದು, ಉಗಿದು ಉಪ್ಪಿನಕಾಯಿ ಹಾಕುವಂತಾಗುತ್ತೆ. ಕೆಲವು ನಟಿಯರು ಹೆಸರು, ಖ್ಯಾತಿಗೆ ಸೌಂದರ್ಯ ಜೊತೆ ರಾಜಿಯಾಗದೆ ಆಗಾಗ ದೊಡ್ಡಎಡವಟ್ಟು ಮಾಡಿಕೊಳ್ತಾರೆ. ಆ ಸಾಲಿಗೆ ಬಾಲಿವುಡ್ ನಟಿಯರು ಮೊದಲ ಸಾಲಲ್ಲಿ ನಿಲ್ತಾರೆ. ಸಿನಿಮಾ ಮಾತ್ರವಲ್ಲ, ಅದರಾಚೆಯೂ ಅವರು ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡು ಸುದ್ದಿಯಲ್ಲಿರಬೇಕು ಅಂತ ಬಯಸ್ತಾರೆ.
ಈಗ ವಿಷಯಕ್ಕೆ ಬರೋದಾದ್ರೆ, ಬಾಲಿವುಡ್ ನಟಿ ಖುಷಿ ಮುಖರ್ಜಿ ಸದ್ಯ ಹಾಟ್ ನ್ಯೂಸ್ ನಲ್ಲಿ ಟ್ರೆಂಡ್ ಆಗಿದ್ದಾರೆ. ಕಿರುತೆರೆಯ ಹಲವು ರಿಯಾಲಿಟಿ ಶೋ ಮತ್ತು ಧಾರಾವಾಹಿಗಳ ಮೂಲಕ ಪರಿಚಿತವಾಗಿರುವ ಖುಷಿ ಮುಖರ್ಜಿ, ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಫ್ಯಾನ್ಸ್ ಹೊಂದಿದ್ದಾರೆ. ಆಗಾಗ ತಮ್ಮ ಹಾಟ್ ಫೋಟೋ ಶೂಟ್ ಮತ್ತು ವಿಚಿತ್ರ ಡ್ರೆಸ್ ಹಾಕುವುದರಿಂದ ಪಡ್ಡೆಗಳಿಗೆ ಇನ್ನಷ್ಟು ಫೇವರ್ ಆಗಿದ್ದಾರೆ. ಆ ಮೂಲಕ ಟ್ರೆಂಡ್ ಆಗಿದ್ದಾರೆ.

ಅದೇನೋ ಗೊತ್ತಿಲ್ಲ, ಕೆಲವು ನಟಿಯರಿಗೆ ಶೋಕಿ ಅನ್ನೋದು ಕಾಮನ್. ಈ ಶೋಕಿಗೆ ಖುಷಿ ಮುಖರ್ಜಿ ಧರಿಸಿದ್ದ ಉಡುಗೆ ಭಾರೀ ಸದ್ದು ಮಾಡಿದೆ. ತುಂಡುಡುಗೆಯಾಗಿದ್ದರೆ ಏನೂ ಆಗ್ತಾ ಇರಲಿಲ್ಲ. ಇಷ್ಟೊಂದು ಹೇಳುವ ಸುದ್ದಿಯೂ ಆಗುತ್ತಿರಲಿಲ್ಲ.
ಆದರೆ, ಒಳ ಉಡುಪು ಇಲ್ಲದೆ, ಕೇವಲ ಒಂದು ಬ್ಲಾಕ್ ಡ್ರೆಸ್ ನೇತಾಕಿಕೊಂಡು ಸಾರ್ವಜನಿಕವಾಗಿ ಅಸಹ್ಯ ಎನಿಸುವಷ್ಟು ಮಟ್ಟಿಗೆ ನಡೆದಾಡಿದರೆ ನೋಡೋರಿಗೆ ಹೇಗಾಗಬೇಡ? ಸದ್ಯ ಅವರ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಮನಬಂದಂತೆ ಬೈಯುತ್ತಿದ್ದಾರೆ.
ಮೇ ಮೇಲೆ ಬಟ್ಟೆಯೇ ಇಲ್ಲ. ನಿಮಗೆ ನಾಚಿಕೆ ಇಲ್ಲವೇ? ಇದು ನಿಮ್ಮ ಫ್ಯಾಷನ್ನಾ? ಇದು ಅಸಹ್ಯ ತರಿಸುವಂಥದ್ದು, ಅಸಭ್ಯ ವರ್ತನೆಯೂ ಹೌದು, ತೆರೆ ಮೇಲೆ ನಿಮ್ಮನ್ನು ನೋಡಿದ ಮಂದಿ ಖುಷಿಪಡುವಂತಿರಬೇಕು. ಆದರೆ ತೆರೆಹಿಂದೆ ನೋಡಿ ಸಿಟ್ಟಾಗುವಂತಿರಬಾರದು ಅಂತ ಕಾಮೆಂಟ್ ಮಾಡ್ತಾ ಇದ್ದಾರೆ.

ಅಂದಹಾಗೆ, ಖುಷಿ ಕಪ್ಪು ಬಣ್ಣದ ಡಿಸೈನರ್ ಕ್ರಾಪ್ ಟಾಪ್ ಧರಿಸಿದ್ದೇನೋ ಓಕೆ, ಆದರೆ ಅದರ ಜೊತೆ ಪ್ಯಾಂಟ್ ಧರಿಸಿಲ್ಲ. ಹೋಗಲಿ ಅವರು ಒಳ ಉಡುಪು ಧರಿಸಿದ್ದರಾ? ಅದೂ ಇಲ್ಲ!
ಹಾಗೆಯೇ ಸಾರ್ವಜನಿಕವಾಗಿ ಹೊರಬಂದ ಖುಷಿಯನ್ನು ಕಂಡ ಕ್ಯಾಮೆರಾ ಕಣ್ಣು ಅವರ ದೇಹದ ಮೇಲೆ ಬಿದ್ದಿದೆ. ಆ ವೀಡಿಯೊದಲ್ಲಿ ತನ್ನ ಬಟ್ಟೆಯಿಂದ ಮೈ ಮುಚ್ಚಲು ಖುಷಿ ತಿಣುಕಾಡುವುದು ಸ್ಪಷ್ಟವಾಗಿ ಕಾಣುತ್ತಿದೆ. ಎರಡೂ ಕೈಗಳಿಂದ ತಮ್ಮ ಖಾಸಗಿ ಭಾಗಗಳನ್ನು ಮುಚ್ಚುತ್ತಿದ್ದರು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವುದನ್ನು ನೋಡಿ, ನೆಟಿಜನ್‌ಗಳು “ಇದು ಯಾವ ರೀತಿಯ ಡ್ರೆಸ್ ಸೆನ್ಸ್? ಇಷ್ಟೊಂದು ತೊಂದರೆಗಳನ್ನು ಎದುರಿಸುವುದಾದರೆ ಅವರ ಕೈಗಳಿಂದ ಮುಚ್ಚುವುದಾದರೆ ಅಂಥಹ ಬಟ್ಟೆ ಧರಿಸೋದ್ಯಾಕೆ ಎಂದು ಪ್ರಶ್ನಿಸಿದ್ದಾರೆ. ಒಳ ಉಡುಪು ಇಲ್ಲದೆ ಹೊರಬರೋದು ಎಷ್ಟು ಸರಿ? ಅಂತ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ಈ ಎಲ್ಲಾ ಟ್ರೋಲ್ ಗಳಿಗೆ ಕಾಮೆಂಟ್ ಗಳಿಗೆ ನಟಿ ಖುಷಿ ಪ್ರತಿಕ್ರಿಯಿಸಿದ್ದಾರೆ. ನಾನು ಒಳ ಉಡುಪು ಧರಿಸಿದ್ದೆ. ಕೆಳಗೆ ಟ್ರಾನ್ಸ್ ಪರೆಂಟ್ ಪ್ಯಾಂಟ್ ಕೂಡ ಧರಿಸಿದ್ದೆ. ಅದು ಕಾಣಿಸಿಲ್ಲವಷ್ಟೇ. ಅದನ್ನೂ ನಾನು ನಿಮಗೆ ತೋರಿಸಬೇಕೇ? ಎಂದು ಉಡಾಫೆಯಾಗಿ ಪ್ರಶ್ನಿಸಿದ್ದಾರೆ.
ಜನಪ್ರಿಯತೆಗಾಗಿ ನಾನು ಹೀಗೆ ತಪ್ಪು ಮಾಡುತ್ತಿದ್ದೇನೆ ಅಂತ ಅನೇಕರು ಹೇಳುತ್ತಿದ್ದಾರೆ. ಅದರ ಅಗತ್ಯ ನನಗಿಲ್ಲ. ನನ್ನ ದೇಹದ ಎಷ್ಟು ಭಾಗವನ್ನು ತೋರಿಸಬೇಕೆಂದು ನನಗೆ ಗೊತ್ತು. ನನಗೆ ಯಾರೂ ಪಾಠ ಕಲಿಸೋ ಅಗತ್ಯವಿಲ್ಲ” ಅಂತ ಕಟುವಾಗಿಯೇ ಖುಷಿ ಹೇಳಿದ್ದಾರೆ.
ಅದೇನೆ ಇದ್ದರೂ, ಅಂತಹ ಡ್ರೆಸ್ ಹಾಕಿ ಕಾರಿನಿಂದ ಇಳಿಯುತ್ತಿದ್ದಂತೆ ಬೀಸಿದ ಗಾಳಿಗೆ ಅವರು ಮುಜುಗರಕ್ಕೆ ಒಳಗಾಗಿದ್ದು ಸುಳ್ಳಲ್ಲ. ಅದರಿಂದ ಹಲವರ ಕಣ್ಣು ತಂಪಾಗಿದೆ. ಆದರೆ, ಆವಿಡಿಯೋ ಈಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಹಲವರು ಸೂಪರ್ ಎಂದರೆ, ಕೆಲ ಸೆಲೆಬ್ರೆಟಿಗಳೆ ಅವರಿಗೆ ದಂಡ ಹಾಕಿ ಅಂದಿದ್ದಾರೆ.

ಇಷ್ಟಲ್ಲಾ ಟ್ರೋಲ್ ಆಗಿದ್ದರೂ, ಖುಷಿ ಮಾತ್ರ ತಮ್ಮ ಪ್ರತಿಕ್ರಿಯೆ ಮೂಲಕ ಸಮುಜಾಯಿಸುತ್ತಿದ್ದಾರೆ. ಬೋಲ್ಡ್ ಅವತಾರದಲ್ಲಿ ಅಶ್ಲೀಲ ಉಡುಪು ಧರಿಸಿ ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದೂ ಅಲ್ಲದೆ, ತಾವೂ ಒಂದು ವಿಡಿಯೋ ಮಾಡಿ ಆ ಮೂಲಕ ಮಾತಾಡಿದವರಿಗೆ ತಿರುಗೇಟು ನೀಡಿದ್ದಾರೆ.
ನನ್ನ ಈ ಲುಕ್ ಹಾಲಿವುಡ್ ಸೆಲೆಬ್ರಿಟಿಗಳಾದ ಜೆನ್ನಿಫರ್ ಲೋಪೆಜ್, ಪ್ಯಾರಿಸ್ ಹಿಲ್ಟನ್, ಮಾಡೆಲ್ ಐರಿನಾ ಶೇಕ್ ಹಾಗು ಇತರರಿಂದ ಪ್ರೇರಿತವಾಗಿದೆ ಅಂದಿದ್ದರು. ಆಗಲೂ ಟೀಕೆ ಬಂದವರು. ನಿಮ್ಮ ಖಾಸಗಿ ಭಾಗ ಪ್ರದರ್ಶನ ಭಾರತೀಯ ಸಂಸ್ಕೃತಿಯೇ? ಎಂದು ಪ್ರಶ್ನಿಸಿದ್ದರು. ಅದಕ್ಕೂ ಬಗ್ಗದ ಖುಷಿ, ಮಾತಿನ ಚಾಟಿ ಬೀಸಿದ್ದಾರೆ.
ವಿಡಿಯೋ ಮೂಲಕ ತಿರುಗೇಟು ನೀಡಿರುವ ಖುಷಿ, ಹನುಮಾನ್ ಚಾಲೀಸಾ ಪಠಿಸುತ್ತಿರುವ ವೀಡಿಯೊ ಹಂಚಿಕೊಂಡು. ನಾನು ಹೆಮ್ಮೆಯ ಬಂಗಾಳಿ ಬ್ರಾಹ್ಮಣ ಕುಟುಂಬದವಳು. ನನ್ನ ಸಾಂಸ್ಕೃತಿಕ ಬೇರುಗಳ ಬಗ್ಗೆ ನನಗೆ ಗೊತ್ತು. ನನ್ನ ಬೆಂಬಲಿಗರಿಗಾಗಿ ಈ ವೀಡಿಯೊ ಎಂದಿದ್ದಾರೆ.

ಹೀಗೆ ಮಾಡುವುದರಿಂದ ನಾನು ಯಾರಿಗೂ ಏನನ್ನೂ ಸಾಬೀತುಪಡಿಸಲು ಬಯಸುತ್ತಿಲ್ಲ. ಜನರು ಇನ್ನೂ ನನ್ನ ಬಗ್ಗೆ ಬಹಳಷ್ಟು ಕೆಟ್ಟ ವಿಷಯಗಳನ್ನು ಹೇಳುತ್ತಾರೆ. ನನ್ನನ್ನು ಟ್ರೋಲ್ ಮಾಡುತ್ತಾರೆ ಎಂದು ನನಗೆ ಗೊತ್ತಿದೆ. ನಾನು ಅಂತಹ ಬಟ್ಟೆಗಳನ್ನು ಧರಿಸುತ್ತೇನೆ ಎಂದ ಮಾತ್ರಕ್ಕೆ ನಾನು ಭಾರತೀಯ ಸಂಸ್ಕೃತಿಯನ್ನು ಮರೆತಿದ್ದೇನೆ ಎಂದರ್ಥವಲ್ಲ ಅಂತ ಹೇಳಿದ್ದಾರೆ.
ಅದೇನೆ ಇರಲಿ, ಖುಷಿ ಮಾಡಿದ್ದು ಸರಿನಾ ತಪ್ಪಾ ಅನ್ನೋ ಚರ್ಚೆ ಹೆಚ್ಚಾಗಿದೆ. ಅವರ ಡ್ರೆಸ್ ಅವರಿಷ್ಟ. ಆದರೆ, ನಾಗರಿಕ ಸಮಾಜದಲ್ಲಿ ಇಷ್ಟೊಂದು ಅಸಹ್ಯ ಎನಿಸುವ ಉಡುಗೆ ತೊಟ್ಟು ಬೀದಿಗೆ ಇಳಿಯೋದು ಎಷ್ಟು ಸರಿ ಅನ್ನೋದೇ ಈಗ ಹರಿದಾಡುತ್ತಿರುವ ಸುದ್ದಿ. ಇವರನ್ನು ನೋಡಿ ನಾವೂ ಸುದ್ದಿಯಾಗೋಣ ಅಂತ ಇನ್ನಷ್ಟು ಜನ ಇಂತಹ ಡ್ರೆಸ್ ಹಾಕಿಕೊಂಡು ಬೀದಿಗಿಳಿದರೆ ಪಡ್ಡೆಗಳ ಪಾಡೇನು ಅನ್ನೋದೇ ಟ್ರೋಲ್ ಆಗ್ತಾ ಇರೋ ವಿಷಯ.