ಬಳ್ಳಾರಿ: ತುಂಗಭದ್ರಾ ಜಲಾಶಯದ (TB Dam) ಹಿನ್ನೀರಿನ ಕಂದಕಕ್ಕೆ ಬೈಕ್ ಬಿದ್ದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿ, ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
![](https://pratidhvani.com/wp-content/uploads/2024/05/Bike-falls-into-TB-Dam-backwater-Youth-dies-one-seriously-injured-Hosapete-1-1.jpg)
ಈ ಘಟನೆ ಹೊಸಪೇಟೆ (Hosapete) ಹೊರ ವಲಯದಲ್ಲಿ ನಡೆದಿದೆ. ಇಳಕಲ್ ಮೂಲದ ಜಗದೀಶ್ (28) ಸಾವನ್ನಪ್ಪಿದ್ದರೆ, ಶಶಾಂಕ್ ಪಾಟೀಲ್ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರೂ ಯುವಕರು ಬೆಂಗಳೂರಿನಿಂದ (Bengaluru) ಇಳಕಲ್ಗೆ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
![](https://pratidhvani.com/wp-content/uploads/2024/05/Bike-falls-into-TB-Dam-backwater-Youth-dies-one-seriously-injured-Hosapete-1.jpg)
ಬೈಕ್ ವೇಗವಾಗಿ ಬಂದು ತುಂಗಭದ್ರಾ ಜಲಾಶಯದ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನೊಂದಿಗೆ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಓರ್ವ ಸಾವನ್ನಪ್ಪಿದ್ದಾನೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.