ರೇಣುಕಾಸ್ವಾಮಿ (Renuka swamy) ಕೊಲೆ ಕೇಸ್‌ನಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮನೆಯಿಂದ ಅಪೋಲೋ ಫಾರ್ಮಸಿಗೆ ಹೊರಟಿದ್ದ ರೇಣುಕಾಸ್ವಾಮಿಯನ್ನ ಬಾಲಾಜಿ ಬಾರ್ ಬಳಿ ಆಟೋದಲ್ಲಿ ಆರೋಪಿಗಳು ಕಿಡ್ನಾಪ್ ಮಾಡಿದ್ದಾರೆ.
ಕಿಡ್ನಾಪ್ (Kidnap) ಮಾಡಿ ಕುಂಚಿಗನಾಳ್ ಪೆಟ್ರೋಲ್ ಬಂಕ್ ಬಳಿ ಕರೆದೋಯ್ದ ಆರೋಪಿಗಳು ನಂತರ ರವಿ ಎಂಬಾತನ ಕಾರಿನಲ್ಲಿ ಬೆಂಗಳೂರಿಗೆ (Benagluru) ಕರೆದುಕೊಂಡು ಬಂದಿದ್ದಾರೆ.ಇನ್ನು, ಕಾರು ಚಾಲಕ ರವಿಗೆ ಬಾಡಿಗೆ ಇದೆ ಎಂದು ರಾಘವೇಂದ್ರ ಕರೆಸಿಕೊಂಡಿದ್ದ. ಚಾಲಕ ತುಮಕೂರು ಟೋಲ್ (Tumkur) ಬಳಿ ಎಲ್ಲರೂ ಊಟ ಮಾಡಿದ್ರು. ಈ ವೇಳೆ ರೇಣುಕಾಸ್ವಾಮಿಯೇ ಊಟದ ಬಿಲ್ ಕೂಡ ಪೇ ಮಾಡಿದ್ದ ಅನ್ನೋ ಮಾಹಿತಿ ಇದೆ.
ಈ ನಂತರ ನೈಸ್ ರೋಡ್ (Nie road) ಮೂಲಕ ನೇರವಾಗಿ ಪಟ್ಟಣಗೆರೆ ಶೆಡ್‌ಗೆ ಆಗಮಿಸಿದ್ದಾರೆ.. ಶೆಡ್ ಒಳಗೆ ರೇಣುಕಾ ಹೊರತು ಪಡೆಸಿದ್ರೆ ಬೇರಾರು ಒಳಗೆ ಹೋಗಿಲ್ಲ. ಎಲ್ಲರೂ ಕಾರಿನಲ್ಲೇ ಇದ್ರು ಅನ್ನೋ ಮಾಹಿತಿ ಇದೆ.