
ಸೆಪ್ಟೆಂಬರ್ 18 ರ ಗುರುವಾರದಂದು ದೆಹಲಿ ನ್ಯಾಯಾಲಯ (Delhi court), ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ಬಗ್ಗೆ ಮಾನಹಾನಿಕರ ವರದಿಗಳನ್ನು ಪ್ರಕಟಿಸುವುದನ್ನು ಅಥವಾ ಪ್ರಸಾರ ಮಾಡದಂತೆ ಪತ್ರಕರ್ತರಿಗೆ (Journalist) ನಿರ್ಬಂಧಿಸಿ ಸೆಪ್ಟೆಂಬರ್ 6 ರಂದು ಕೆಳ ನ್ಯಾಯಾಲಯವು ಹೊರಡಿಸಿದ್ದ ಎಕ್ಸ್-ಪಾರ್ಟೆ ಗ್ಯಾಗ್ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ.
ಅದಾನಿ (Gowtham Adani) ಹಾಗೂ ಅವರ ಸಂಸ್ಥೆಯ ಕುರಿತು ಪ್ರಕಟಿಸಲಾದ ಹಲವಾರು ಲೇಖನಗಳು ಮತ್ತು ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ನಿರ್ದೇಶಿಸಿದ್ದ ಕೆಳ ಹಂತದ ನ್ಯಾಯಾಲಯದ ಸ್ವೀಪಿಂಗ್ ಆದೇಶ ಸಮರ್ಥನೀಯವಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಹಿರಿಯ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅವರ ಸೆಪ್ಟೆಂಬರ್ 6 ರ ಗ್ಯಾಗ್ ಆದೇಶ AEL ವಿರುದ್ಧದ ಮಾನಹಾನಿಕರ ವಿಷಯವನ್ನು ತೆಗೆದುಹಾಕುವಂತೆ ನಿರ್ದೇಶಿಸಿತ್ತು ಮತ್ತು ಪರಂಜಯ್ ಗುಹಾ ಠಾಕುರ್ತಾ ಸೇರಿದಂತೆ ಹಲವಾರು ಪತ್ರಕರ್ತರು ಅಂತಹ ವಿಷಯವನ್ನು ಮತ್ತಷ್ಟು ಪ್ರಕಟಿಸದಂತೆ ನಿರ್ಬಂಧಿಸಿತ್ತು. ಈ ಆದೇಶದ ನಂತರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇದನ್ನು ನೋಟಿಸ್‌ಗಳನ್ನು ನೀಡಿತು. ಇದರಿಂದಾಗಿ 138 ಯೂಟ್ಯೂಬ್ ವೀಡಿಯೊಗಳು ಮತ್ತು 83 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ತೆಗೆದುಹಾಕಲು ಸೂಚಿಸಲಾಗಿತ್ತು.

ಅದಾನಿ ಎಂಟರ್‌ಪ್ರೈಸಸ್ ಪರವಾಗಿ ವಕೀಲ ವಿಜಯ್ ಅಗರ್ವಾಲ್, ಪತ್ರಕರ್ತರು ದುರುದ್ದೇಶಪೂರಿತ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ವಾದಿಸಿದ್ದರು, ಆಗಸ್ಟ್‌ನಲ್ಲಿ ಆನ್‌ಲೈನ್‌ನಲ್ಲಿ ಪ್ರಸಾರವಾದ ಪಾಡ್‌ಕ್ಯಾಸ್ಟ್ ಅನ್ನು ಉಲ್ಲೇಖಿಸಲಾಗಿತ್ತು.
ಅದಾನಿ ಪರವಾಗಿ ಹಾಜರಾದ ಹಿರಿಯ ವಕೀಲ ಜಗದೀಪ್ ಶರ್ಮಾ, ನಾನು ಉದ್ಯಮಿಯಾಗಿರುವುದರಿಂದ ಮತ್ತು ರಾಷ್ಟ್ರಕ್ಕಾಗಿ ಕೆಲಸ ಮಾಡುವುದರಿಂದ ನನಗೆ ಕಳಂಕ ತರಲಾಗುತ್ತಿದೆ. ಅದಾನಿ ಅಥವಾ ಅಂಬಾನಿಯಂತಹ ಉದ್ಯಮಿಗಳು ರಾತ್ರೋರಾತ್ರಿ ಹುಟ್ಟಿಕೊಳ್ಳುವುದಿಲ್ಲ. ನಾವು ರಾಷ್ಟ್ರವನ್ನು ನಿರ್ಮಿಸುತ್ತಿದ್ದೇವೆ. ನಾನು 27,000 ಜನರನ್ನು ನೇಮಿಸಿಕೊಳ್ಳುತ್ತೇನೆ” ಎಂದು ಬಾರ್ ಮತ್ತು ಬೆಂಚ್ ಪ್ರಕಾರ ಹೇಳುವ ಮೂಲಕ ಕಂಪನಿಯ ನಿಲುವನ್ನು ಸಮರ್ಥಿಸಿಕೊಂಡಿದ್ದರು.

ಆದ್ರೆ ಅಂತಿಮವಾಗಿ ಸೆಪ್ಟೆಂಬರ್ 6 ರ ಗ್ಯಾಗ್ ಆದೇಶವನ್ನು ರದ್ದುಗೊಳಿಸುವಾಗ, ಜಿಲ್ಲಾ ನ್ಯಾಯಾಧೀಶ ಅಗರ್ವಾಲ್ ತಮ್ಮ ತೀರ್ಪು ತಮ್ಮ ಮುಂದೆ ಇದ್ದ ನಾಲ್ವರು ಮೇಲ್ಮನವಿದಾರರಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಹಿರಿಯ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ ಸಲ್ಲಿಸಿದ ಪ್ರತ್ಯೇಕ ಮೇಲ್ಮನವಿಯನ್ನು ಉಲ್ಲೇಖಿಸಲಿಲ್ಲ, ಅದರ ಬಗ್ಗೆ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿದೆ ಎಂದು ಸ್ಪಷ್ಟಪಡಿಸಿದರು.ಅದಾನಿ ಎಂಟರ್‌ಪ್ರೈಸಸ್‌ನ ಮಾನನಷ್ಟ ಮೊಕದ್ದಮೆ ವಿಚಾರಣಾ ನ್ಯಾಯಾಲಯದಲ್ಲಿ ಮುಂದುವರೆದಿದೆ.












