
ಬ್ಯಾಂಕಾಕ್: ಸೆಂಟ್ರಲ್ ಬ್ಯಾಂಕಾಕ್ ನ ಐಷಾರಾಮಿ ಹೋಟೆಲ್ನಲ್ಲಿ ಶವವಾಗಿ ಪತ್ತೆಯಾದ ಆರು ಜನರ ಕಾಫಿ ಕಪ್ ಗಳಲ್ಲಿ ಸೈನೈಡ್ ಕುರುಹುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಥಾಯ್ ಪೊಲೀಸ್ ಫೋರೆನ್ಸಿಕ್ ವಿಭಾಗದ ಮುಖ್ಯಸ್ಥರು ಗುರುವಾರ ಹೇಳಿದ್ದಾರೆ.
ಬ್ಯಾಂಕಾಕ್ನ ಡೌನ್ಟೌನ್ನಲ್ಲಿರುವ ಗ್ರ್ಯಾಂಡ್ ಹಯಾಟ್ ಎರಾವಾನ್ ಹೋಟೆಲ್ನಲ್ಲಿ ಮೃತದೇಹಗಳು ಮಂಗಳವಾರ ಪತ್ತೆಯಾಗಿದ್ದವು . ಹೋಟೆಲ್ ದಾಖಲೆಗಳನ್ನು ಪರಿಶೀಲಿಸಿದಾಗ, ಆರು ಮಂದಿಯನ್ನು ಹೊರತುಪಡಿಸಿ ಕೊಠಡಿಗೆ ಬೇರೆ ಯಾವುದೇ ಸಂದರ್ಶಕರು ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಮಧ್ಯಾಹ್ನ ಕೊಠಡಿಗೆ ಆಹಾರವನ್ನು ತಲುಪಿಸಿದಾಗ ಅವರು ಕೊನೆಯದಾಗಿ ಜೀವಂತವಾಗಿ ಕಾಣಿಸಿಕೊಂಡಿದ್ದಾರೆ. ಥಾಯ್ ಪೋಲೀಸ್ ಪಡೆಯ ಫೋರೆನ್ಸಿಕ್ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಟ್ರೈರಾಂಗ್ ಪಿವ್ಪಾನ್, ಪೊಲೀಸರಿಗೆ ಕೋಣೆಯಲ್ಲಿ ದೊರೆತ ಖಾಲಿ ಕಪ್ಗಳಲ್ಲಿ ಸೈನೈಡ್ ಕುರುಹುಗಳು ಕಂಡುಬಂದಿವೆ, ಆದರೆ ಶವಪರೀಕ್ಷೆಯ ಆರಂಭಿಕ ಫಲಿತಾಂಶಗಳನ್ನು ಶುಕ್ರವಾರ ನಿರೀಕ್ಷಿಸಲಾಗಿದೆ ಎಂದು ಹೇಳಿದ

ಮೃತರನ್ನು ಇಬ್ಬರು ವಿಯೆಟ್ನಾಂ ಅಮೆರಿಕನ್ನರು ಮತ್ತು ನಾಲ್ವರು ವಿಯೆಟ್ನಾಂ ಪ್ರಜೆಗಳು ಎಂದು ಬ್ಯಾಂಕಾಕ್ ಪೊಲೀಸ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಥಿತಿ ಸಾಂಗ್ಸವಾಂಗ್ ಗುರುತಿಸಿದ್ದಾರೆ ಮತ್ತು ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಇದ್ದಾರೆ ಎಂದು ಹೇಳಿದರು. ಈ ಮಾರಣಾಂತಿಕ ಕೃತ್ಯದ ಉದ್ದೇಶವು ಪತಿ-ಪತ್ನಿಯರು ತಾವು ಒಬ್ಬರ ಬಳಿ ಹೂಡಿಕೆ ಮಾಡಿದ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಹಿನ್ನೆಲೆಯೇ ಕಾರಣ ಎನ್ನಲಾಗಿದೆ ಎಂದು ಸಂತ್ರಸ್ತರ ಸಂಬಂಧಿಕರಿಂದ ಪಡೆದ ಮಾಹಿತಿಯನ್ನು ಉಲ್ಲೇಖಿಸಿ ಬ್ಯಾಂಕಾಕ್ ಉಪ ಪೊಲೀಸ್ ಮುಖ್ಯಸ್ಥ ನೋಪ್ಪಸಿನ್ ಪುನ್ಸಾವತ್ ಹೇಳಿದ್ದಾರೆ.

ಸಾವಿನ ಕುರಿತು ವಿಯೆಟ್ನಾಂ ಮತ್ತು ಯುನೈಟೆಡ್ ಸ್ಟೇಟ್ಸ್ ರಾಯಭಾರ ಕಚೇರಿಗಳನ್ನು ಸಂಪರ್ಕಿಸಲಾಗಿದೆ ಮತ್ತು ಅಮೆರಿಕದ ಎಫ್ಬಿಐ ತನಿಖೆಯಲ್ಲಿ ತೊಡಗಿದೆ ಎಂದು ನೋಪ್ಪಾಸಿನ್ ಹೇಳಿದರು. “ಈ ಪ್ರಕರಣವು ವೈಯಕ್ತಿಕವಾಗಿದೆ ಮತ್ತು ಪ್ರವಾಸಿಗರ ಸುರಕ್ಷತೆಯ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಅವರು ಹೇಳಿದರು.
ಕೆಲವು ಸಂತ್ರಸ್ಥರು ತಮ್ಮ ಪ್ರವಾಸಕ್ಕಾಗಿ ಮಾರ್ಗದರ್ಶಿಗಳು ಮತ್ತು ಚಾಲಕರಂತಹ ಅನೇಕ ವ್ಯವಸ್ಥೆಗೊಳಿಸಿದ್ದರಿಂದ ಸಾಮೂಹಿಕ ಆತ್ಮಹತ್ಯೆ ಅಸಂಭವವಾಗಿದೆ ಎಂದು ಟ್ರೈರಾಂಗ್ ಹೇಳಿದರು. ದೇಹಗಳು ಒಂದೇ ಸ್ಥಳದಲ್ಲಿ ಇರಲಿಲ್ಲ ಕೆಲವು ಮಲಗುವ ಕೋಣೆಯಲ್ಲಿ, ಕೆಲವು ಲಿವಿಂಗ್ ರೂಮಿನಲ್ಲಿ ಪತ್ತೆಯಾಗಿವೆ – ಅವರು ಉದ್ದೇಶಪೂರ್ವಕವಾಗಿ ವಿಷವನ್ನು ಸೇವಿಸಿಲ್ಲ ಮತ್ತು ಅವರ ಸಾವು ಒಟ್ಟಿಗೆ ಸಂಭವಿಸಿಲ್ಲ ಎಂದು ಅವರು ಹೇಳಿದರು.
