ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಾದ ಪಠ್ಯ ಪರಿಷ್ಕರಣೆ ಹಲವು ದಿನಗಳಿಂದ ವಿವಾದಕ್ಕೀಡಾಗಿದೆ. ಪಠ್ಯದಲ್ಲಿ ಕೋಮು ರಾಜಕೀಯ, ಬ್ರಾಹ್ಮಣಿಕರಣವಾಗಿದೆ ಎಂದೇಳಿ ಹಲವು ದಿನಗಳಿಂದ ನಾಡಿನ ಅನೇಕ ಜನರು ವಿರೋಧ ವ್ಯಕ್ತಪಡಿಸಿ ಹಲವು ಸಾಹಿತಿಗಳು ಪಠ್ಯದಲ್ಲಿ ತಮ್ಮ ಲೇಖನವನ್ನು ಹಿಂಪಡೆದಿರುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈಗ ಈ ಸಾಲಿಗೆ ಕವಿ, ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಕೂಡ ಸೇಪಡೆಯಾಗಿದ್ದು ಪಠ್ಯ ಪುಸ್ತಕದಿಂದ ತಮ್ಮ ಕವಿತೆಯನ್ನು ಹಿಂಪಡೆದಿದ್ದೇನೆ ಎಂದು ಬಿಸಿ ನಾಗೇಶ್ ಅವರಿಗೆ ಇಂದು ಮಂಗಳವಾರ ಪತ್ರ ಬರೆದಿದ್ದಾರೆ.
ಹೌದು, ಮಕ್ಕಳಿಗೆ ಜ್ಞಾನ ನೀಡುವ ಶಿಕ್ಷಣ ಕ್ಷೇತ್ರ ಈಗ ಕೇಸರಿಕರಣವಾಗುತ್ತಿರುವ ಕಾರಣನೀಡಿ ಪತ್ರ ಬರೆದಿರುವ ಅವರು, ಕರ್ನಾಟದ ಘನ ಸರ್ಕಾರವು ಪ್ರಥಾಮಿಕ ಮತತು ಪ್ರೌಢ ಶಿಕ್ಷಣ ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ಸಮಿತಿಯನ್ನು ನೇಮಿಸಿ ಶಾಲಾ ಪಠ್ಯವನ್ನು ಕೇಸರಿಕರಣಗೊಳಿಸುತ್ತಿರುವ ಬಗ್ಗೆ ಕನ್ನಡ ಸಾಋಸ್ವತ ಲೋಕ ವಿಚಲಿತಗೊಂಡಿದೆ.
ಮುಂದುವರೆದು, ಬಸವಣ್ಣನ ಕುರಿತು ತಪ್ಪು ಮಾಹಿತಿ ನೀಡುವುದು, ಮಹಾನ್ ದಾರ್ಶನಿಕ ಕವಿ ಕುವೆಂಪು ಅವರನ್ನು ಅವಮಾನಿಸುವುದು ಕನ್ನಡ ಸಾಂಸ್ಕೃತಿಕ ಲೀಕಕ್ಕೆ ಮಾಡುವ ಅಪಚಾರ. ಜಾತಿ ವ್ಯವಸ್ಥೆಯಿಂದ ಕಲುಷಿತಗೊಂಡಿರುವ ನಮ್ಮ ಸಮಾಜವನ್ನು ಜಾತ್ಯಾತೀತತೆಯಿಂದ ಮಾತ್ರ ಸರಿಪಡಿಸಲು ಸಾಧ್ಯ. ಸ್ವಸ್ಥ ಸಮಾಜಕ್ಕೆ ಮುಂದಿನ ಪೀಳಿಗೆಯನ್ನು ತಯಾರು ಮಾಡುವ ಪ್ರಾಥಾಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರ ಅನವಶ್ಯಕ ವಿದ್ಯಾಮಾನಗಳಿಂದ ದಾಳಿಗೊಳಗಾಗಿರುವುದು ವಿಷಾದನೀಯ. ಪ್ರಗತಿಪರತೆಯನ್ನು ಪ್ರತಿಪಾದಿಸುವವರನ್ನು ಎಡೊಂಥಿಯರು ಎಂದು ದೂರುವುದು, ದೂರ ಮಾಡುವುದು ಅರೋಗ್ಯಕರ ಸಮಾಜದ ಲಕ್ಷಣವಲ್ಲ.
ಈ ಹಿನ್ನೆಲೆಲ್ಲಿ ಐದನೇ ತರಗತಿಗೆ ಪಠ್ಯವಾಗಿರುವ ನನ್ನಕವಿತೆಗೆ ಎಂಬ ಕವಿತೆಗೆ ನೀರುವ ಅನುಮತಿಯನ್ನು ಈ ಮೂಲಕ ಹಿಂಪಡೆಯುತ್ತಿದ್ದೇನ ಎಂದು ಪತ್ರ ಬರೆದಿದ್ದಾರೆ.
