ಪಠ್ಯ ಪರಿಷ್ಕರಣೆ ಬಗ್ಗೆ ಎದ್ದಿದ್ದ ವಿವಾದಕ್ಕೆ ಇದೀಗ ಸಿಎಂ ಬೊಮ್ಮಾಯಿ ಮಧ್ಯಪ್ರವೇಶ ಮಾಡಿ ಮಹತ್ವದ ಆದೇಶ ಮಾಡಿದ್ದಾರೆ. ಹಲವು ಚರ್ಚೆಗೆ ಗ್ರಾಸವಾಗಿದ್ದ ಪಠ್ಯ ಪರಿಷ್ಕರಣಾ ಸಮಿತಿಯನ್ನು ಈ ಕೂಡಲೇ ವಿಸರ್ಜಿಸುವಂತೆ ಆದೇಶ ಮಾಡಿದ್ದಾರೆ. ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ಸಂಬಂಧಿಸಿದಂತೆ ಹಲವು ಮಠಾಧೀಶರು, ಹಿರಿಯ ಸಾಹಿತಿಗಳು ಹಾಗೂ ಚಿಂತಕರು ಅಸಮಾಧಾನ ಹೊರ ಹಾಕಿದ್ದರು. ಇದೀಗ ಕೆಲವು ಆದೇಶ ಮಾಡುವ ಮೂಲಕ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಲು ಸರ್ಕಾರ ಮುಂದಾಗಿದೆ.

ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಸರ್ಕಾರದ ನಿರ್ಣಯಗಳು !
- ಪಠ್ಯಪುಸ್ತಕ ಸಮಿತಿ ಕಾರ್ಯ ಮುಗಿದಿರುವುದರಿಂದ ಸಮಿತಿ ವಿಸರ್ಜನೆ.
- ಪ್ರಸ್ತುತ ಪಠ್ಯದಲ್ಲಿ ಮತ್ತೆ ಪರಿಷ್ಕರಣೆ ಇದ್ದರೆ ಮುಕ್ತ ಮನಸ್ಸನ್ನು ಸರ್ಕಾರ ಹೊಂದಿದೆ. ಬಸವಣ್ಣ ಪಠ್ಯ ಪರಿಷ್ಕರಣೆ ನಿರ್ಧಾರ.
- ಕುವೆಂಪು ನಾಡಗೀತೆ ಆಕ್ಷೇಪಾರ್ಹ ವಿಕೃತಗೊಳಿಸಿದ ಪಠ್ಯ ಉಲ್ಲೇಖವಾಗಿಲ್ಲ. ಇದರ ಮೂಲ ಕವನ ಬರೆದ ವ್ಯಕ್ತಿಗಳ ಬಗ್ಗೆ ಸರ್ಕಾರ ಕ್ರಮ.
- ಬರಗೂರು ಸಮಿತಿಗಿಂತ ಈಗಿನ ಸಮಿತಿ ಕುವೆಂಪು ಅವರ ಗದ್ಯ, ಪದ್ಯವನ್ನು ಇನ್ನೂ ಮೂರು ಏರಿಕೆ ಮಾಡಿದೆ. ಮೊದಲು ಏಳು ಇತ್ತು. ಈಗ 10ಕ್ಕೆ ಏರಿಕೆ.
- ನಾಡಪ್ರಭು ಕೆಂಪೇಗೌಡ ಪಠ್ಯವನ್ನು ಸೇರ್ಪಡೆ
- ಇಸ್ಲಾಂ, ಕ್ರೈಸ್ತ ಧರ್ಮದ ಪರಿಚಯದ ಜೊತೆ ಹಿಂದೂ ಧರ್ಮ ವಿಷಯ ಸೇರ್ಪಡೆ
ಉಳಿದಂತೆ ನಾಡಗೀತೆ ಬಗ್ಗೆ ಅವಹೇಳಕಾರಿಯಾಗಿ ಬರೆದವರ ಬಗ್ಗೆ ತನಿಖೆಗಾಗಿ ಸೈಬರ್ ಕ್ರೈಂ ತಿಳಿಸಲಾಗಿದೆ.

ನಾರಾಯಣ ಗುರು, ಭಗತ್ ಸಿಂಗ್ ಪಾಠ ಕೈ ಬಿಟ್ಟಿಲ್ಲ.
ರಾಷ್ಟ್ರ ಕವಿ ಕುವೆಂಪಯರವರ ಪಠ್ಯದಲ್ಲಿ ಹಿಂದರ 8 ಇದ್ದನ್ನ 7 ಮಾಡಲಾಗಿತ್ತು. ನಾವು 7 ರಿಂದ 10 ಮಾಡಿದ್ದೇವೆ. ನಾಡಪ್ರಭು ಕೆಂಪೆಗೌಡರ ಪಠ್ಯ ಸೇರಿಸಲಾಗಿದೆ. ಪ್ರಸಕ್ತ ಪಠ್ಯ ಪರಿಷ್ಕರಣೆ ಮುಗಿದಿರುವದರಿಂದ ಪ್ರಸ್ತುತ ಸಮಿತಿಯನ್ನ ವಿಸರ್ಜಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ರಾಜ್ಯದಲ್ಲಿ ಅನೇಕ ಬಾರಿ ಪಠ್ಯ ಪರಿಷ್ಕರಣೆ ಆಗಿದೆ. ಆಗೆಲ್ಲ ವಿರೋಧ ವ್ಯಕ್ತವಾಗಿದೆ. ಬರಗೂರು ಸಮಿತಿ ಬಗ್ಗೆ ಆಕ್ಷೇಪ ಬಂದಾಗ ಹೊಸ ಸಮಿತಿ ರಚನೆ ಮಾಡಲಾಯಿತು. ಸರ್ಕಾರ ವರದಿಯನ್ನ ಪಡೆದು ಪುಸ್ತಕ ಪ್ರಿಂಟ್ ಮಾಡಿ ಹಲವು ಜಿಲ್ಲೆಗಳಿಗೆ ಈಗಾಗಲೇ ಕಳುಹಿಸಲಾಗಿದೆ. ಹಿಂದಿನ ಸರ್ಕಾರದ ಬರಗೂರು ರಾಮಚಂದ್ರ ಸಮಿತಿಯಲ್ಲಿ ಬಸವಣ್ಣ ಪಾಠ ಪರಿಷ್ಕರಣೆಯಾಗಿತ್ತು. ಇಂದಿನ ಸಮಿತಿ ಕೂಡ ಅದನ್ನ ಮುಂದುವರೆಸಿತ್ತು. ಆದರೆ ಪಂಡಿತಾರಾಧ್ಯ ಸ್ವಾಮೀಜಿ ಸೇರಿದಂತೆ ಕೆಲ ಸ್ವಾಮೀಜಿಗಳ ಬಸವಣ್ಣನ ಪಠ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಸವಣ್ಣನ ಪಠ್ಯವನ್ನ ಯಾರ ಭಾವನೆಗೂ ದಕ್ಕೆಯಾಗದಂತೆ ಪರಿಷ್ಕರಣೆ ಮಾಡಲಾಗುವುದು ಎಂದಿದ್ದಾರೆ.