ಯುಎಸ್ ಮೂಲದ ಎಲೆಟ್ರಿಕ್ ವಾಹನ ತಯಾರಕ ಕಂಪನಿ ಟೆಸ್ಲಾ ಭಾರತದಲ್ಲಿ ತನ್ನ ಉದ್ಯಮವನ್ನು ಶುರು ಮಾಡುವುದಾದರೆ ಅದು ಸ್ವಾಗತಾರ್ಹ. ದೇಶದಲ್ಲಿ ಕಾರುಗಳನ್ನು ಮಾರಾಟ ಮಾಡಲು ಅಮದು ಹಾಗೂ ರಫ್ತು ಮಾಡಿಕೊಳ್ಳಲು ಮುಕ್ತ ಅವಕಾಶವಿದೆ ಆದರೆ ಚೀನಾದಿಂದ ಮಾತ್ರ ಅಮದು ಮಾಡಿಕೊಳ್ಳಬಾರದು ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಚೀನಾದಲ್ಲಿ ನಿರ್ಮಿಸುವುದು ಭಾರತದಲ್ಲಿ ಮಾರಾಟ ಮಾಡುವುದು ಇದು ಒಳ್ಳೆಯ ಕ್ರಮವಲ್ಲ ಎಂದು ಹೇಳಿದ್ದಾರೆ. ಮುಂದುವರೆದು, ಸುಮಾರು ಒಂದು ವರ್ಷಗಳ ಕಾಲ ಟೆಸ್ಲಾ ಕಂಪನಿಯು ಸುಂಕ ಕಡಿತಕ್ಕಾಗಿ ಅಧಿಕಾರಿಗಳ ಬಳಿ ಲಾಬಿ ನಡೆಸಿದೆ. ಕಂಪನಿಯ ಮುಖ್ಯಸ್ಥ ಎಲೋನ್ ಮಸ್ಕ್ ವಿಶ್ವ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರು ಎಂದು ಹೇಳುತ್ತಾರೆ ಆದರೆ ಅವರಿಗೆ ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿಯಿಲ್ಲದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಟೆಸ್ಲಾ ಭಾರತದಲ್ಲಿ ಹೂಡಿಕೆ ಮಾಡುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದ ಕಾರಣ ಇದು ಹಾಗೆಯೇ ಉಳಿದಿದೆ. ಒಂದು ವೇಳೆ ಇದು ಕಾರ್ಯಗತವಾದರೆ ಪ್ರಧಾನಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷೆ ಯೋಜನೆ ಮೇಕ್ ಇನ್ ಇಂಡಿಯಾ ಯೋಜನೆಗೆ ಪುಷ್ಠಿ ನೀಡುತ್ತದೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.