• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಪಾಕ್‌ನಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿ: ಅಮೆರಿಕ, ಸೌದಿ ಸೇರಿ 4 ದೇಶಗಳ ಎಚ್ಚರಿಕೆ

ಪ್ರತಿಧ್ವನಿ by ಪ್ರತಿಧ್ವನಿ
December 28, 2022
in ವಿದೇಶ
0
ಪಾಕ್‌ನಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿ: ಅಮೆರಿಕ, ಸೌದಿ ಸೇರಿ 4 ದೇಶಗಳ ಎಚ್ಚರಿಕೆ
Share on WhatsAppShare on FacebookShare on Telegram

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಪ್ರಸಿದ್ಧ ಮ್ಯಾರಿಯೆಟ್ ಹೋಟೆಲ್‌ನ ಮೇಲೆ ಭಯೋತ್ಪಾದಕ ದಾಳಿ ಮಾಡುವ ಆತಂಕ ಇರುವ ಹಿನ್ನೆಲೆಯಲ್ಲಿ ಅಮೆರಿಕ ಸೇರಿದಂತೆ ಹಲವು ದೇಶಗಳು ತಮ್ಮ ನಾಗರಿಕರನ್ನು ಜಾಗರೂಕರಾಗಿರುವಂತೆ ಮುನ್ಸೂಚನೆ ನೀಡಿವೆ. ಅಮೆರಿಕದ ಜೊತೆಗೆ ಬ್ರಿಟನ್, ಆಸ್ಟ್ರೇಲಿಯಾ ಮತ್ತು ಸೌದಿ ಅರೇಬಿಯಾ ಕೂಡ ಈ ಎಚ್ಚರಿಕೆ ನೀಡಿವೆ.

ADVERTISEMENT

ಇಸ್ಲಾಮಾಬಾದ್‌ನಲ್ಲಿ ಪೊಲೀಸ್ ಭದ್ರತೆ


ಇಸ್ಲಾಮಾಬಾದ್‌ನ ಪಂಚತಾರಾ ಹೋಟೆಲ್‌ನಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ, ನಗರದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿದೆ. ಇಡೀ ರಾಜಧಾನಿಯನ್ನು ಹೈ ಅಲರ್ಟ್ ಮಾಡಲಾಗಿದೆ. ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ದೇಶಗಳ ಎಚ್ಚರಿಕೆಯ ನಂತರ ಇಸ್ಲಾಮಾಬಾದ್ ಪೊಲೀಸರು ಈ ಟೈಟ್ ಸೆಕ್ಯೂರಿಟಿಯನ್ನು ರೂಪಿಸಿದ್ದಾರೆ.
ತಾನೇ ಸೃಷ್ಟಿಸಿದ ಭಯೋತ್ಪಾದಕರಿಂದ ದಾಳಿಯ ಬೆದರಿಕೆ ಎದುರಿಸುತ್ತಿರುವ ಪಾಕಿಸ್ತಾನ, ರಾಜಧಾನಿಯ ಪ್ರತಿಯೊಂದು ಮೂಲೆ ಮೂಲೆ ಮೇಲೂ ತೀವ್ರ ನಿಗಾ ಇರಿಸುತ್ತಿದೆ. ಪೊಲೀಸರ ಪ್ರಕಾರ, ಇಸ್ಲಾಮಾಬಾದ್‌ನಲ್ಲಿ 25 ತಾತ್ಕಾಲಿಕ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ನಗರದಲ್ಲಿ ಅಳವಡಿಸಿರುವ ಕ್ಯಾಮೆರಾಗಳ ಸಹಾಯದಿಂದ ನಿಗಾ ಇರಿಸಲಾಗುತ್ತಿದೆ.
ಕಳೆದ ವಾರ ಡಿಸೆಂಬರ್ 23 ರಂದು ಇಸ್ಲಾಮಾಬಾದ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಂಚು ರೂಪಿಸಲಾಗಿತ್ತು. ಪೊಲೀಸರು ಅನುಮಾನದ ಹಿನ್ನೆಲೆಯಲ್ಲಿ ವಾಹನ ನಿಲ್ಲಿಸಲು ಹೇಳಿದಾಗ ಉಗ್ರ ಸ್ಪೋಟಿಸಿಕೊಂಡಿದ್ದಾನೆ. ಇದರೊಂದಿಗೆ ಇಸ್ಲಾಮಾಬಾದ್ ಓರ್ವ ಪೊಲೀಸ್ ಸಾವಿಗೀಡಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಆತ್ಮಾಹುತಿ ದಾಳಿಯಲ್ಲಿ ಇಬ್ಬರು ಸಾಮಾನ್ಯ ನಾಗರಿಕರೂ ಸಹ ಗಾಯಗೊಂಡಿದ್ದರು.
ಕಳೆದ ಎಂಟು ವರ್ಷಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಆತ್ಮಹತ್ಯಾ ದಾಳಿ ಇದಾಗಿತ್ತು. ದಾಳಿಯ ಮಾಹಿತಿ ಬಂದ ಕೂಡಲೇ ಅಲ್ಲೋಲಕಲ್ಲೋಲ ಉಂಟಾಗಿತ್ತು. ಈ ಆತ್ಮಹತ್ಯಾ ಸ್ಫೋಟ ನಡೆದ ಪ್ರದೇಶದಲ್ಲಿ ಪಾಕಿಸ್ತಾನಿ ಸಂಸತ್ತು ಸೇರಿದಂತೆ ಹಲವು ದೊಡ್ಡ ಸರ್ಕಾರಿ ಕಚೇರಿಗಳಿವೆ. ಈ ಆತ್ಮಾಹುತಿ ದಾಳಿಯ ಹೊಣೆಯನ್ನು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಹತ್ಯಾ ದಾಳಿಯ ನಂತರ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಸೌದಿ ಅರೇಬಿಯಾ ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಿವೆ. 2008 ರಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನದಲ್ಲಿರುವ ಯುಎಸ್ ರಾಯಭಾರ ಕಚೇರಿ ತನ್ನ ನಾಗರಿಕರಿಗಾಗಿ ಮೊದಲ ಎಚ್ಚರಿಕೆಯನ್ನು ನೀಡಿತ್ತು. ಪಾಕಿಸ್ತಾನದಲ್ಲಿರುವ ಅಮೆರಿಕನ್ ರಾಯಭಾರ ಕಚೇರಿ, ಇಸ್ಲಾಮಾಬಾದ್‌ನಲ್ಲಿರುವ ಐಷಾರಾಮಿ ಹೋಟೆಲ್‌ಗೆ ಹೋಗದಂತೆ ತನ್ನ ಎಲ್ಲಾ ನಾಗರಿಕರಿಗೆ ಸೂಚಿಸಿದೆ.

Tags: ಅಮೆರಿಕಇಸ್ಲಾಮಾಬಾದ್ಪಾಕಿಸ್ತಾನಭಯೋತ್ಪಾದಕ ದಾಳಿಸೌದಿ ಅರೇಬಿಯಾ
Previous Post

ಭರವಸೆ ಮೂಡಿಸುತ್ತಿದೆ ಹೊಸಬರ ಚಿತ್ರ ಕಾಕ್‌ಟೇಲ್‌

Next Post

ಗಡಿ ವಿವಾದ; ಅಮಿತ್ ಷಾ ಮಧ್ಯಪ್ರವೇಶಕ್ಕೆ ಡಿಕೆಶಿ ಆಗ್ರಹ

Related Posts

ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?
ವಿದೇಶ

ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?

by ಪ್ರತಿಧ್ವನಿ
April 15, 2026
0

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷಕ್ಕೆ ಅಂತ್ಯ ತರಲು ಅಮೇರಿಕಾ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಪ್ರಯತ್ನಗಳು ಮತ್ತೆ ಚುರುಕುಗೊಳ್ಳುತ್ತಿರುವ ಸೂಚನೆಗಳು ಗೋಚರಿಸುತ್ತಿವೆ. ಇತ್ತೀಚೆಗೆ ನಡೆದ ಮಾತುಕತೆಗಳು ಸ್ಪಷ್ಟ...

Read moreDetails
ಟ್ರಂಪ್ ವಿರುದ್ಧ ಪೋಪ್ ಲಿಯೋ ಕಟು ಟೀಕೆ:ಯುದ್ಧೋನ್ಮಾದಕ್ಕೆ ‘ಹುಚ್ಚುತನ’ ಎಚ್ಚರಿಕೆ

ಟ್ರಂಪ್ ವಿರುದ್ಧ ಪೋಪ್ ಲಿಯೋ ಕಟು ಟೀಕೆ:ಯುದ್ಧೋನ್ಮಾದಕ್ಕೆ ‘ಹುಚ್ಚುತನ’ ಎಚ್ಚರಿಕೆ

April 13, 2026
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಭಾರತ ಸಮುದ್ರ ಮಾರ್ಗಗಳಿಗೆ ತೆರಿಗೆ ವಿಧಿಸಲು ಸಾಧ್ಯವೇ? UNCLOS ನಿಯಮಗಳು ಏನು ಹೇಳುತ್ತವೆ?

ಭಾರತ ಸಮುದ್ರ ಮಾರ್ಗಗಳಿಗೆ ತೆರಿಗೆ ವಿಧಿಸಲು ಸಾಧ್ಯವೇ? UNCLOS ನಿಯಮಗಳು ಏನು ಹೇಳುತ್ತವೆ?

April 12, 2026
ಆಕ್ರಮಣಕಾರಿ ಆಳ್ವಿಕೆಯತ್ತ ಟ್ರಂಪ್ 2.0

ಭಾರತ-ಪಾಕಿಸ್ತಾನ ಯುದ್ಧ ತಡೆದದ್ದು ನನ್ನಿಂದಲೇ: ಟ್ರಂಪ್ ಪುನಃ ಹೇಳಿದ್ದೇನು ?

April 7, 2026
Next Post
ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆಗೆ ನೀಡಿ ಸಿಎಂ ತಮ್ಮ ಧಮ್ಮು, ತಾಕತ್ತು ತೋರಿಸಲಿ : ಡಿ.ಕೆ.ಶಿವಕುಮಾರ್‌

ಗಡಿ ವಿವಾದ; ಅಮಿತ್ ಷಾ ಮಧ್ಯಪ್ರವೇಶಕ್ಕೆ ಡಿಕೆಶಿ ಆಗ್ರಹ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada