ಬಸವಕಲ್ಯಾಣ :ತಾಲೂಕಿನ ಗಾಂಧಿ ವೃತ್ತದಿಂದ ತ್ರಿಪುರಾಂತನ ವಾಲ್ಮೀಕಿ ವೃತ್ತದವರಿಗೆ ಕು.ಭಾಗ್ಯಶ್ರೀ ಭೀಕರ ಹತ್ಯೆ ಖಂಡಿಸಿ, ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕಾಗಿ ಆಗ್ರಹಿಸಿ ಮಂಗಳವಾರ ಬೃಹತ್ ಪ್ರತಿಭಟನೆ ಜರುಗಿತು.
ತಾಲೂಕು ಟೋಕರೆ ಕೋಳಿ ಸಮಾಜ ಹಾಗೂ ವಿವಿಧ ಸಂಘಟನೆಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದು, ಕು.ಭಾಗ್ಯಶ್ರೀ ಅವರನ್ನು ಅಪಹರಿಸಿ ಹತ್ಯೆ ಗೈದ ಆರೋಪಿಯನ್ನ ಎನ್ಕೌಂಟರ್ ಮಾಡಬೇಕಾಗಿ ಉಪವಿಭಾಗ ಅಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಿಗೆ ಪತ್ರ ನೀಡಿ ಒತ್ತಾಯಿಸಿದರು.
ಗಾಂಧಿ ವೃತ್ತದಿಂದ ಪ್ರಾರಂಭವಾದ ಯಾರ್ಲಿ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ವಾಲ್ಮೀಕಿ ವೃತ್ತದ ವರೆಗೆ ಜರುಗಿದ್ದು, ರ್ಯಾಲಿ ಉದ್ದಕ್ಕೂ ಭಾಗ್ಯಶ್ರೀ ಹತ್ಯೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಘೋಷಣೆಗಳು ಕೇಳಿ ಬಂದವು.
ಪ್ರಕರಣದ ಹಿನ್ನೆಲೆ :ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದ ಭಾಗ್ಯಶ್ರೀ, ಆಗಸ್ಟ್ 29ರಂದು ರಾತ್ರಿ ಮನೆಯಿಂದ ಹೊರಗೆ ಹೋದ ನಂತರ ನಾಪತ್ತೆಯಾಗಿದ್ದಳು. ಮನೆಗೆ ಬಾರದಿದ್ದಕ್ಕೆ ಹೆತ್ತವರು ಚಿಂತಾಕ್ರಾಂತರಾಗಿದ್ರು. ಮಗಳಿಗಾಗಿ ಊರೆಲ್ಲಾ ಹುಡುಕಿದ್ರು, ನೆಂಟರೆಲ್ಲರನ್ನೂ ವಿಚಾರಿಸಿದ್ರು. ಆದ್ರೂ, ಯಾವುದೇ ಪ್ರಯೋಜವಾಗಿರಲಿಲ್ಲ.ಎರಡು ದಿನಗಳಾದ ಬಳಿಕ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 31ರಂದು ಮಿಸ್ಸಿಂಗ್ ಕಂಪ್ಲೆಂಟ್ ಕೂಡಾ ದಾಖಲಿಸಿದ್ರು.ಬಸವಕಲ್ಯಾಣ ಪೊಲೀಸರು ಭಾಗ್ಯಶ್ರೀ ಪತ್ತೆಗಾಗಿ ಹುಡುಕಾಟ ನಡೆಸಿದ್ರು. ಪೊಲೀಸರು, ಹೆತ್ತವರು ಅಷ್ಟೆಲ್ಲಾ ಹುಡುಕಿದ್ರೂ ಭಾಗ್ಯಶ್ರೀಯ ಸಣ್ಣ ಸುಳಿವು ಸಿಕ್ಕಿರಲಿಲ್ಲ. ನಾಪತ್ತೆಯಾದ ಬಳಿಕ ಮೂರ್ನಾಲ್ಕು ದಿನ ಅಂದ್ರೆ ಸೆಪ್ಪಂಬರ್ 1ರಂದು ಗುಣತೀರ್ಥವಾಡಿ ಗ್ರಾಮದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಭೀಕರವಾಗಿ ಕೊಲೆ ಮಾಡಿ ಯಾರಿಗೂ ಕಾಣದಂತೆ ಗುಣತೀರ್ಥವಾಡಿ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದಲ್ಲಿರೋ ಮುಳ್ಳು ಕಂಟಿಯಲ್ಲಿ ಎಸೆದು ಹೋಗಿದ್ದು, ಕೊಳೆತ ಸ್ಥಿತಿಯಲ್ಲಿ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ.ಯುವತಿಯ ಶವ ಬಹುತೇಕ ವಿವಸ್ತ್ರವಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಅಲ್ಲದೇ, ಕೊಲೆಯಾದ ಯುವತಿಯ ಕುಟುಂಬಸ್ಥರಿಗೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್ ಸಾಂತ್ವನ ಹೇಳಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದು, ಆರೋಪಿಗಳನ್ನ ಎನ್ಕೌಂಟರ್ ಮಾಡುವಂತೆ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಮುಖಂಡ ಹಣಮಂತ ಬೊಕ್ಕೆ, ರಾಮಣ್ಣ ಮಂಠಾಳೆ, ಶ್ರೀನಿವಾಸ್ ರೆಡ್ಡಿ, ರೇಖಾ ರಾಜಕುಮಾರ್, ಮಲ್ಲಿಕಾರ್ಜುನ್ ಬೊಕ್ಕೆ, ಪೋಪಟ್ ಜಮಾದಾರ್, ಶಂಕರ್ ಜಮಾದಾರ್, ಆಕಾಶ್ ಖಂಡಾಳೆ, ರವಿ ಕೊಳಕೂರ್, ಪಿಂಟು ಕಾಂಬಳೆ, ಯುವರಾಜ್ ಬೆಂಡೆ, ಪ್ರಕಾಶ ನಾಗುರೆ, ಸೇರಿದಂತೆ ಪ್ರಮುಖರು ಗಣ್ಯರು ಉಪಸ್ಥಿತರಿದ್ದರು