ಮಂಡ್ಯ ಹಿಲ್ಲೆ ಕೆ.ಆರ್.ಪೇಟ ತಾಲ್ಲೂಕಿನ ಶ್ರೀ ಕ್ಷೇತ್ರ ಸಾಸಲು ಗ್ರಾಮದ ಶ್ರೀ ಸೋಮೇಶ್ವರ ಮತ್ತು ಶ್ರೀ ಶಂಭುಲಿಂಗೇಶ್ವರ ದೇವಾಲಯದ ಹುಂಡಿ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ದೇವಸ್ಥಾನದ ಪ್ರಧಾನ ಅರ್ಚಕ ಸೋಮೇಶ್ ಆರಾಧ್ಯ ನಮ್ಮ ಏಳಿಗೆಯನ್ನು ಸಹಿಸಲಾರದೆ ಯಾರೋ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅರ್ಚಕ ಸೋಮೇಶ್ ನಮ್ಮ ಏಳಿಗೆಯನ್ನು ಸಹಿಸಲಾರದೆ ಹಳೆಯ ವೈಷಮ್ಯದಿಂದ ನಮ್ಮ ವಿರುದ್ದ ಸುಳ್ಳು ಆರೋಪ ಮಾಡಲಾಗಿದೆ. ಹಣ ಯಾರು ಕಳ್ಳತನ ಮಾಡಿದ್ದಾರೋ ಅವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ನಾವು ಈ ದೇವಾಲಯದಲ್ಲಿ ನಮ್ಮ ತಂದೆ ತಾತನ ಕಾಲದಿಂದನೂ ಅರ್ಚಕ ವೃತ್ತಿ ಮಾಡುತ್ತಾ ಬಂದಿದ್ದೇವೆ ಅಲ್ಲದೆ ನಮ್ಮಗೆ 400 ತೆಂಗಿನ ಮರಗಳ ಇದ್ದು ಅದರಿಂದ ವಾರ್ಷಿಕ 10 ಲಕ್ಷಕ್ಕೂ ಹೆಚ್ಚು ಆದಾಯ ಬರುವುದು ಅಲ್ಲದೆ ನಾನು ಮತ್ತು ನನ್ನ ಮಕ್ಕಳು ಶುಭ ಸಮಾರಂಭಗಳಲ್ಲಿ ಅರ್ಚಕರ ವೃತ್ತಿ ಮಾಡುತ್ತಾ ಬಂದಿದ್ದೇವೆ ಇದರಿಂದ ನಮ್ಮಗೆ ಸಾಕಷ್ಟ ಆದಾಯ ಬರುತ್ತಿದ್ದು. ಇಷ್ಟು ವರ್ಷ ಕಷ್ಟ ಪಟ್ಟು ಶೇಖರಣೆ ಮಾಡಿದ ಹಣದ ಜೊತೆಗೆ ಸಂಭಂದಿಕರ, ಸ್ನೇಹಿತರ ಬಳಿ ಕೈ ಸಾಲವನ್ನು ಪಡೆದು ಒಂದು ಮನೆ ನಿರ್ಮಾಣ ಮಾಡುತ್ತಾ ಇದ್ದೇವೆ ಅದನ್ನು ಸಹಿಸಲಾರದೆ ನಮ್ಮನ್ನು ದೇವಾಲಯಯದಿಂದ ಹೊರ ಹಾಕಬೇಕು ಎಂದು ಕೆಲವರು ವಂಚು ಹಾಕಿ ಸಂಚು ರೂಪಿಸಿ ನಮ್ಮ ಮೇಲೆ ಅಪರಾಧದ ದೂರು ನೀಡಿದ್ದಾರೆ.

ನನ್ನ ಮೇಲೆ ಆರೋಪ ಸುಳ್ಳು ಎಂದು ರುಜುವಾತು ಮಾಡಲು ಅಧಿಕಾರಿಗಳು ನನ್ನಗೆ ಅವಕಾಶವನ್ನೇ ನೀಡಲಿಲ್ಲ ಇದರಿಂದ ನನ್ನಗೆ ಮಾನಸಿಕವಾಗಿ ನೋವು ಉಂಟಾಗಿದೆ ಎಂದು ಬೇಸರಿಸಿದ್ದಾರೆ.
ದೇವಾಲಯದ ಕಾವಲುಗಾರನ್ನಾಗಿ ಕೆಲಸ ಮಾಡುವ ವೀರಪ್ಪ ಎಂಬುವರು ಸಣ್ಣ ಪುಟ್ಟ ವಿಚಾರಕ್ಕೆ ನಾಲ್ಕು ವರ್ಷಗಳ ಹಿಂದೆ ನಮ್ಮಿಬ್ಬರ ನಡುವೆ ಮನಸ್ಥಾಪ ಆಗಿತ್ತು ಇದನ್ನು ತಿಳಿದ ನಮ್ಮ ವಿರೋದಿಗಳು ನಮ್ಮ ಮೇಲೆ ಸುಳ್ಳು ಆರೋಪ ಬರುವಂತೆ ಸಂಚು ರೂಪಿಸಿದ್ದಾರೆ. ದೇವಾಲಯದಲ್ಲಿ ಸಿ.ಸಿ ಟಿವಿ ಕ್ಯಾಮರಗಳು ಇದ್ದು ಪ್ರತಿ ದಿನ ಮುಜರಾಯಿ ಇಲಾಖೆ ಸಂಭದಿಸಿದ ಅಧಿಕಾರಿಗಳು ಇರುತ್ತಾರೆ ಹುಂಡಿಯ ಜವಬ್ದಾರಿಯ ಸಹ ಅಧಿಕಾರಿಗಳು ಆಗಿದ್ದು ಭರ್ತಿಯಾದ ಹುಂಡಿ ಹಣ ಕಡಿಮೆ ಆಗಲು ಹೇಗೆ ಸಾಧ್ಯ ಮೊದಲು ಕಳ್ಳತನ ಮಾಡಿರೂದು ಯಾರು ಎಂಬುದನ್ನು ಕಂಡು ಹಿಡಿಯಲಿ.
ನಾವು ಆಗಲಿ ನಮ್ಮ ಕುಟುಂಬದವರಾಗಲಿ ಯಾತ್ರಾ ನಿವಾಸ ಮಾಡುತ್ತೇವೆ ಎಂದು ಯಾರ ಬಳಿಯ ಹಣ ಸಂಗ್ರಹ ಮಾಡಿಲ್ಲ ಈ ಆರೋಪದ ಸತ್ಯಕ್ಕೆ ದೂರವಾದ ವಿಷಯವಾಗಿದೆ ನಮ್ಮ ಹೆಸರನ್ನು ಹಾಳು ಮಾಡಲು ಬಾರಿ ಸಂಚು ರೂಪಿಸಿ ದೇವಾಲಯದ ಹುಂಡಿ ಹಣವನ್ನು ಯಾರು ಕಳ್ಳತನ ಮಾಡಿದರು ಯಾರು ಎಂಬುದನ್ನು ಸೂಕ್ತ ತನಿಖೆ ಕೈಗೊಂಡು ಯಾರೇ ಆಗಲಿ ತಪ್ಪು ಮಾಡಿದವರ ವಿರುದ್ದ ಸೂಕ್ತ ಕ್ರಮ ಕೈಕೊಂಡು ನಮ್ಮಗೆ ಸೂಕ್ತ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.







