
ಮಕ್ಕಳ ಈ ಭಯವನ್ನು ಹೋಗಲಾಡಿಸಲು ಮೇಷ್ಟ್ರು ರಾತ್ರಿಯಿಡಿ ಶಾಲೆಯ ಕೊಠಡಿಯಲ್ಲಿಯೇ ಮಲಗಿದ್ದು, ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.ದೆವ್ವ ಭೂತಗಳು ನಿಜವಾಗಿಯೂ ಇದೆಯೇ ಎಂಬುದು ಯಾರಿಗೂ ಗೊತ್ತಿಲ್ಲ. ಕೆಲವರು ದೆವ್ವಗಳು ಇದೆಯೆಂದು ನಂಬಿದರೆ ಇನ್ನೂ ಕೆಲವರು ಇದೆಲ್ಲಾ ಕಟ್ಟುಕಥೆ ಪ್ರಪಂಚದಲ್ಲಿ ದೆವ್ವಭೂತ ಎಂಬುದು ಇಲ್ಲವೇ ಇಲ್ಲ ಎಂದು ಹೇಳುತ್ತಾರೆ. ಹೀಗಿದ್ದರೂ ಹೆಚ್ಚಿನವರು ದೆವ್ವ ಎಂಬ ಹೆಸರು ಕೇಳಿದ್ರೆ ಭಯಪಟ್ಟುಕೊಳ್ಳುತ್ತಾರೆ. ಅದರಲ್ಲೂ ಮಕ್ಕಳಿಗೆ ದೆವ್ವ ಭೂತದ ಭಯ ಸ್ವಲ್ಪ ಜಾಸ್ತಿಯೇ.

ಇಲ್ಲೊಂದು ಶಾಲೆಯ ಮಕ್ಕಳೂ ಕೂಡಾ ತಮ್ಮ ಶಾಲೆಯಲ್ಲಿ ದೆವ್ವಗಳಿವೆ ಎಂದು ಹೆದರಿದ್ದು, ಈ ಮಕ್ಕಳ ಭಯವನ್ನು ಹೋಗಲಾಡಿಸಲು ಶಿಕ್ಷಕರೊಬ್ಬರು ರಾತ್ರಿಯಿಡಿ ಶಾಲೆಯ ಕೊಠಡಿಯಲ್ಲಿಯೇ ಮಲಗಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
https://twitter.com/sudhakarudumula/status/1810607916061442330?t=d1M0oJSD3J2MGTDETvUIVA&s=19. https://twitter.com/sudhakarudumula/status/1810607916061442330?t=Fa3_tgysaxpGdc_O57F8MQ&s=19
ಈ ಘಟನೆ ತೆಲಂಗಾಣದ ಅದಿಲ್‌ಬಾದ್ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಆನಂದಪುರದ ಸರ್ಕಾರಿ ಶಾಲೆಯೊಂದರಲ್ಲಿ ಕೆಲ ದಿನಗಳಿಂದ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ದೆವ್ವದ ಸಂಚಾರವಿದೆಯೆಂದು ಸಿಕ್ಕಾಪಟ್ಟೆ ಭಯಪಟ್ಟಿದ್ದು, ಶಾಲೆಯ ಶಿಕ್ಷಕರಾದ ರವೀಂದರ್ ಅಮವಾಸ್ಯೆಯ ರಾತ್ರಿ ಶಾಲೆಯಲ್ಲಿ ಒಬ್ಬರೇ ಮಲಗುವ ಮೂಲಕ ವಿದ್ಯಾರ್ಥಿಗಳ ಭಯವನ್ನು ಹೋಗಲಾಡಿಸಿದ್ದಾರೆ.ಈ ಕುರಿತ ಪೋಸ್ಟ್ ಒಂದನ್ನು ಸುಧಾಕರ್ (sudhakarudumula) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.