ಹಲ್ಲುಗಳು ಹುಳುಕಾಗುವುದು, ಈ ಸಮಸ್ಯೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಗೂ ಕೂಡ ಕಾಡ್ತಾ ಇರುತ್ತೆ. ಹಲ್ಲು ಹುಡುಕಾದಾಗ ಯಾವುದೇ ರೀತಿಯ ಆಹಾರವನ್ನ ತಿನ್ನೋದಕ್ಕೆ ಆಗಲ್ಲ ,ಅದ್ರಲ್ಲೂ ಕೂಡ ಸಿಹಿ ಪದಾರ್ಥವನ್ನು ತಿಂದ್ರೆ ಇಡೀ ರಾತ್ರಿ ಹಲ್ಲು ನೋವು ಅನುಭವಿಸುವುದು ಪಕ್ಕ,ಮಾತ್ರವಲ್ಲದೇ ತಣ್ಣಗಿನ ನೀರನ್ನು ಸೇವಿಸಿದಾಗ ಹಲ್ಲು ಜುಮ್ ಎನ್ನುತ್ತದೆ..

ಅದರಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವಂತಹ ಆಹಾರದಿಂದಾಗಿಯೂ ಕೂಡ ಹಲ್ಲು ನೋವಿನ ಕೊರತೆ ಅಥವಾ ಹುಳುಕಿನ ಕೊರತೆ ಉಂಟಾಗುತ್ತದೆ. ಹಲ್ಲು ಹುಳುಕಾಗುವುದನ್ನು ತಪ್ಪಿಸಲು ನಾವು ಏನನ್ನ ಮಾಡಬೇಕು ಅನ್ನೋದರ ಮಾಹಿತಿ ಹೇಗಿದೆ..

- ನಾವು ಚಿಕ್ಕವರಂತಾಗಿಂದಲೂ ನಮ್ಮ ತಂದೆ ತಾಯಿ ಹೇಳಿಕೊಟ್ಟಿರುವ ಒಂದು ಅಭ್ಯಾಸ ಎಂದರೆ ಬೆಳಿಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವುದಕ್ಕೆ ಮುನ್ನ ಹಲ್ಲು ಉಜ್ಜುವುದು.ಹೀಗೆ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದರಿಂದ ಹುಳುಕನ್ನ ತಪ್ಪಿಸಬಹುದು.. ಪ್ರತಿದಿನ ಪಾಲಿಸುವುದು ಉತ್ತಮ.
- ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇವನೆ ಮಾಡುವುದು ನಮ್ಮ ಮೂಲೆಗಳಿಗೆ ಹಾಗೂ ಹಲ್ಲಿಗೆ ಒಳ್ಳೆಯದು.ಕ್ಯಾಲ್ಸಿಯಂ ಯುಕ್ತ ಆಹಾರದಿಂದ ಗಟ್ಟಿಯಾದ ಹಲ್ಲುಗಳು ನಿಮ್ಮದಾಗುತ್ತವೆ ಹಾಗಾಗಿ ಪ್ರತಿದಿನ ಒಂದು ಲೋಟ ಹಾಲು ಹಾಗೂ ಮೊಟ್ಟೆಯನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಅಧಿಕ ಕ್ಯಾಲ್ಸಿಯಂ ದೊರೆಯುತ್ತದೆ.
- ಪ್ರತಿದಿನ ಆಹಾರವನ್ನು ಸೇವಿಸಿದ ತಕ್ಷಣವೇ ಒಂದು ಲೋಟ ಬೆಚ್ಚಗಿನ ನೀರಿನಿಂದ ಬಾಯಿಯನ್ನ ಮುಕ್ಕಳಿಸುವುದು.. ಉತ್ತಮ ಇದರಿಂದ ಹಲ್ಲಿನಲ್ಲಿ ಸಿಕ್ಕಿಕೊಂಡಿರುವ ಆಹಾರವಾಗಲಿ ಸ್ವಚಗೊಳ್ಳುತ್ತದೆ..ಹಾಗೂ ಹುಳುಕನ್ನು ತಪ್ಪಿಸುವುದಕ್ಕೆ ಉತ್ತಮ ಮಾರ್ಗ.
- ಹಲ್ಲು ಉಜ್ಜುವ ಕ್ರಮ, ಕೆಲವೊಬ್ಬರು ಎರಡೇ ನಿಮಿಷದಲ್ಲಿ ಹಲ್ಲು ಉಜ್ಜಿ ಮುಗಿಸುತ್ತಾರೆ, ಆದರೆ ಹೀಗೆ ಮಾಡುವುದರಿಂದ ಹಲ್ಲು ಸ್ವಚ್ಛಗೊಳ್ಳುವುದಿಲ್ಲ, ಹಾಗಾಗಿ ಚೆನ್ನಾಗಿ ಉಜ್ಜಿ ನಂತರ ಬಾಯಿಯನ್ನ ಮುಕ್ಕಳಿಸುವುದರಿಂದ ಹಲ್ಲುಗಳು ಸ್ವಚ್ಛವಾಗುತ್ತವೆ.