ಡಾನ್ಸಿಂಗ್ ಸ್ಟಾರ್ ಪ್ರಭುದೇವ್ ಅವರು ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ವುಲ್ಫ್ ಚಿಲನಚಿತ್ರದ ಟೀಸರ್ ಗುರುವಾರ (ಆಗಸ್ಟ್ 3) ಬಿಡುಗಡೆಯಾಗಿದೆ. ಸಿನಿಮಾ ತಮಿಳು ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.
ಈ ಸಿನಿಮಾ ಸಂದೇಶ ಪ್ರೊಡಕ್ಷನ್ ನಿರ್ಮಾಣದ 30ನೇನೇ ಚಿತ್ರವಾಗಿದೆ. ಇದು ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣುತ್ತಿದೆ. ಸಿನಿಮಾ ಈಗ ತಾಂತ್ರಿಕ ಕೆಲಸಗಳನ್ನು ಮುಗಿಸಿ ಟೀಸರ್ ಬಿಡುಗಡೆ ಮೂಲಕ ಪ್ರಚಾರ ಕಾರ್ಯ ಆರಂಭಿಸಿದೆ.
ವುಲ್ಫ್ ಸಿನಿಮಾ ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ವಿಭಿನ್ನವಾದ ಕಥಾ ಹಂದರನ ಹೊಂದಿದೆ ಎಂದು ಚಿತ್ರತಂಡ ಹೇಳಿದೆ. ಇದೇ 16 ರಂದು ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರ ಜನುಮದಿನದ ಪ್ರಯುಕ್ತ ತಮಿಳು ಜನಪ್ರಿಯ ನಟ ವಿಜಯ ಸೇತುಪತಿ ಹಾಡಿರುವ ಚಿತ್ರದ ಮೊದಲ ಲಿರಿಕಲ್ ವಿಡಿಯೊ ಸಹ ಬಿಡುಗಡೆಯಾಗುತ್ತಿದೆ.
ಸಿನಿಮಾ ಟೀಸರ್‌ನಲ್ಲಿ ನಟರಾದ ಪ್ರಭುದೇವ್, ವಸಿಷ್ಠ ಸಿಂಹ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತರ ಪಾತ್ರಗಳೂ ಟೀಸರ್‌ನಲ್ಲಿ ಗಂಭೀರವಾಗಿ ಕಾಣಿಸಿಕೊಂಡಿವೆ. ಸಿನಿಮಾ ಮಾಸ್ ಎಂಟರ್‌ಟೈನ್‌ಮೆಂಟ್ ಆಗಿರಲಿದೆ ಎಂಬುದನ್ನು ಟೀಸರ್ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಸಿನಿ ರಸಿಕರಲ್ಲಿ ಕುತೂಹಲ ಮೂಡಿಸಿದ ‘ಬ್ಯಾಂಗ್’ ಸಿನಿಮಾದ ಟ್ರೈಲರ್
ವುಲ್ಫ್ ಸಿನಿಮಾವನ್ನು ವಿನು ವೆಂಕಟೇಶ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ಛಾಯಾಗ್ರಾಹಕ ಅರುಳ್ ವಿನ್ಸೆಂಟ್ ಛಾಯಾಗ್ರಹಣ, ಖ್ಯಾತ ತಾರೆ ಜಯಸುಧಾ ಅವರ ಪುತ್ರ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಅಮರೀಶ್ ಸಂಗೀತ ಚಿತ್ರಕ್ಕಿದೆ. ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ ಪ್ರಸಾದ್ ಬಿ ಏನ್ ಮತ್ತು ಕಾಮರಾಜು ಕಾರ್ಯ ನಿರ್ವಹಿಸಿದ್ದು ಸಂದೇಶ ನಾಗರಾಜ್ ಅವರು ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.
ವುಲ್ಫ್ ಸಿನಿಮಾದಲ್ಲಿ ನಟ ಪ್ರಭುದೇವ, ಅನುಸೂಯ ಭಾರದ್ವಾಜ್,ಲಕ್ಷ್ಮಿ ರೈ,ವಸಿಷ್ಠ ಸಿಂಹ,ಅಂಜು ಕುರಿಯನ್ ಮೊದಲಾದ ಪ್ರಮುಖ ಕಲಾವಿದರಿದ್ದಾರೆ.