ಏಷ್ಯಾಕಪ್ ನಲ್ಲಿ (Women’s Asia Cup) ಸತತ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ವನಿತೆಯರ ತಂಡ (India Women vs Bangladesh Women) ಅದೇ ಅಜೇಯ ಓಟವನ್ನು ಮುಂದುವರಿಸಿ ಫೈನಲ್ ಪ್ರವೇಶಿಸಿದೆ. ಮೊದಲ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶವನ್ನು 10 ವಿಕೆಟ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. ಬಾಂಗ್ಲಾದೇಶ ನೀಡಿದ 81 ರನ್ಗಳ ಅಲ್ಪ ಗುರಿಯನ್ನ ಟೀಮ್ ಇಂಡಿಯಾ ವಿಕೆಟ್ ನಷ್ಟವಿಲ್ಲದೇ, ಕೇವಲ 11 ಓವರ್ಗಳಲ್ಲಿ ತಲುಪುವ ಮೂಲಕ ಎಲ್ಲಾ ಏಷ್ಯಾಕಪ್ ಆವೃತ್ತಿಗಳಲ್ಲೂ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶದ ಬ್ಯಾಟರ್ಗಳು ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದರು. ಪವರ್ ಪ್ಲೇನಲ್ಲೇ ರೇಣುಕಾ ಸಿಂಗ್ ಬಾಂಗ್ಲಾದೇಶದ 3 ವಿಕೆಟ್ ಉಡಾಯಿಸಿದರು. ಅಲ್ಲಿಂದ ಚೇತರಿಸಿಕೊಳ್ಳದ ಬಾಂಗ್ಲಾ ತಂಡ 20 ಓವರ್ಗೆ ಕೇವಲ 80ರನ್ ಸೇರಿಸಿತು. ತಂಡದ ನಾಯಕಿ ನಿಗರ್ ಸುಲ್ತಾನಾ ಕೊಂಚ ಹೋರಾಟ ನಡೆಸಿ 32 ರನ್ ಗಳಿಸಿ ಕೊನೆಯಲ್ಲಿ ಬಂದ ಶೋರ್ನಾ 19 ರನ್ ಗಳಿಸಿದರು. ಇತರ ಯಾವುದೇ ಬ್ಯಾಟರ್ಗಳು ಎರಡಂಕಿ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.
ಬಾಂಗ್ಲಾ ನೀಡಿದ್ದ 81 ರನ್ಗಳ ಅಲ್ಪ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 11 ಓವರ್ಗಳಲ್ಲಿ ಪಂದ್ಯವನ್ನ ಮುಗಿಸಿತು. ಶೆಫಾಲಿ ವರ್ಮಾ (Sheffali Varma) 28 ಎಸೆತಗಳಲ್ಲಿ 26 ರನ್ಗಳಿಸಿದರೆ, ಸ್ಮೃತಿ ಮಂಧಾನ (Smirthi Mandana) 39 ಎಸೆತಗಳಲ್ಲಿ 9 ಬೌಂಡರಿ, ಒಂದು ಸಿಕ್ಸರ್ ಸೇರಿ ಅಜೇಯ 55 ರನ್ ಸಿಡಿಸಿ ಭಾರತಕ್ಕೆ ಜಯ ತಂದುಕೊಟ್ಟರು. ಬಾಂಗ್ಲಾ ನೀಡಿದ್ದ 81 ರನ್ಗಳ ಅಲ್ಪ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 11 ಓವರ್ಗಳಲ್ಲಿ ಪಂದ್ಯವನ್ನ ಮುಗಿಸಿತು. ಶೆಫಾಲಿ ವರ್ಮಾ 28 ಎಸೆತಗಳಲ್ಲಿ 26 ರನ್ಗಳಿಸಿದರೆ, ಸ್ಮೃತಿ ಮಂಧಾನ 39 ಎಸೆತಗಳಲ್ಲಿ 9 ಬೌಂಡರಿ, ಒಂದು ಸಿಕ್ಸರ್ ಸೇರಿ ಅಜೇಯ 55 ರನ್ ಸಿಡಿಸಿ ಭಾರತಕ್ಕೆ ಜಯ ತಂದುಕೊಟ್ಟರು.
ಇಂದು ನೆಲಮಂಗಲದ (Nelamangala) ಬಳಿಯಿರೋ ನಗರೂರಿನಲ್ಲಿ ಸಿದ್ಧಗೊಂಡಿರುವ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಭಾಗಿಯಾಗಿದ್ದಾರೆ. ನಗರೂರಿನಲ್ಲಿ ಆರಂಭಿಸಿರುವ ಬಿಜಿಎಸ್ ಎಂಸಿಎಚ್...