ಬಹು ನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಳಿಗೆ ದಿನಗಣನೆ ಆರಂಭವಾಗಿದೆ ನಿರೀಕ್ಷೆಯಂತೆ ಏಕದಿನ ವಿಶ್ವಕಪ್ಗೆ(ICC World Cup) ಆತಿಥೇಯ ಭಾರತ ತನ್ನ 15 ಮಂದಿ ಸಂಭಾವ್ಯ(icc world cup india squad) ಆಟಗಾರರ ಪಟ್ಟಿಯನ್ನು ಇಂದು (ಮಂಗಳವಾರ) ಬಿಡುಗಡೆಗೊಳಿಸಿದೆ. ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಈ ತಂಡವನ್ನು ಪ್ರಕಟಿಸಿದ್ದು, ಬಲಿಷ್ಠ ಭಾರತ ತಂಡವನ್ನು ಕ್ರೀಡಾ ಪ್ರೇಮಿಗಳ ಮುಂದೆ ನಿಲ್ಲಿಸಿದೆ
ಕಳೆದ ಕೆಲ ದಿನಗಳ ಹಿಂದಷ್ಟೇ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಮ್ಮ ಸಂಭಾವ್ಯ ತಂಡಗಳ ಪಟ್ಟಿಯನ್ನು ಪ್ರಕಟಿಸಿತ್ತು. ಇದೀಗ ಭಾರತವೂ ಸಂಭಾವ್ಯ ತಂಡದ ಪಟ್ಟಿಯನ್ನು ಪ್ರಕಟಿಸಿರುವುದು ಕ್ರೀಡಾ ಪ್ರೇಮಿಗಳಲ್ಲಿ ವಿಶ್ವಕಪ್ ಜ್ವರ ಹೆಚ್ಚಾಗುವಂತೆ ಮಾಡಿದೆ
ಇನ್ನು ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್(ICC World Cup) ಟೂರ್ನಿ ಆರಂಭಕ್ಕೆ ಇನ್ನು ಭರ್ತಿ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಟೂರ್ನಿ ಅಕ್ಟೋಬರ್ 5 ರಿಂದ ಆಂಭವಾಗಿ ನವೆಂಬರ್ 19ರ ತನಕ ನಡೆಯಲಿದೆ. ಉದ್ಘಾಟನ ಮತ್ತು ಫೈನಲ್ ಪಂದ್ಯಗಳು ಅಹಮದಾಬಾದ್ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಪಂದ್ಯ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ನಡೆಯಲಿದೆ. ಆತಿಥೇಯ ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ಎದುರು ಆಡಲಿದೆ. ಈ ಪಂದ್ಯ ಚೆನ್ನೈಯಲ್ಲಿ ನಡೆಯಲಿದೆ.
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಸೂರ್ಯಕುಮಾರ್.