ಹಿಂದೂ ಕುಟುಂಬದ ವಿದ್ಯಾರ್ಥಿನಿಯರಿಗೆ ಶಾಲೆಗೆ ಸಿಂಧೂರ ಹಾಕಿಕೊಂಡು ಬಂದಿದ್ದಕ್ಕೆ ಶಿಕ್ಷಕ ಥಳಿಸಿದ ಘಟನೆ ಜಮ್ಮು ಕಾಶ್ಮೀರದ ರಚೌರಿ ಜಿಲ್ಲೆಯಲ್ಲಿ ನಡೆದಿದೆ.
ವಿದ್ಯಾರ್ಥಿನಿಯರು ಹಣೆಯ ಮೇಲೆ ಸಿಂಧೂರ ಹಾಕಿಕೊಂಡು ಬಂದಿದ್ದಕ್ಕೆ ಶಿಕ್ಷಕ ನಿಸಾರ್ ಅಹ್ಮದ್ ಥಳಿಸಿದ್ದಾನೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಹಾಯಕ ಜಿಲ್ಲಾಧಿಕಾರಿ ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಸಿಂಧೂರ ಅಥವಾ ತಿಲಕ ಧರಿಸಿ ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಶಿಕ್ಷಕ ಖದುರಿಯನ್ ಪಂಚಾಯತ್ ನ ಡ್ರಾಮಮ್ ನ ಶಾಲೆಯ ಮಧ್ಯದಲ್ಲಿ ನಿಲ್ಲಿಸಿ ಥಳಿಸಿದ್ದೂ ಅಲ್ಲದೇ ಅಶ್ಲೀಲವಾಗಿ ನಿಂದಿಸಿದ್ದಾನೆ.
ಕುಟುಂಬದವರು ಬಾಲಕಿಯರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಶಿಕ್ಷಕನ ವಿರುದ್ಧ ದೂರು ನೀಡಿದ್ದು, ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.