ತಮಿಳಿನ ಆಕ್ಷನ್ ಥ್ರಿಲ್ಲರ್ ಸಿನಿಮಾ ಡೀಸೆಲ್ (Tamil Action Thriller Movie Diesel) ಬಿಡುಗಡೆಗೆ ಸಜ್ಜಾಗಿದೆ. ಇದೇ ದೀಪಾವಳಿ ಹಬ್ಬಕ್ಕೆ ಬೆಳ್ಳಿತೆರೆಯಲ್ಲಿ ಈ ಚಿತ್ರ ಧಮಾಕ ಸೃಷ್ಟಿಸಲಿದೆ. ಕನ್ನಡದಲ್ಲಿಯೂ ಡಿಸೇಲ್ ಸಿನಿಮಾ (Diesel Movie) ತೆರೆಗೆ ಬರ್ತಿದೆ.

ಹೀಗಾಗಿ ಚಿತ್ರತಂಡ ನಿನ್ನೆ ಬೆಂಗಳೂರಿನಲ್ಲಿ ಪ್ರಚಾರ ನಡೆಸಿದೆ. ಎಂಎಂಬಿ ಲೆಗಸಿಯಲ್ಲಿ (MMB Legacy) ಚಿತ್ರದ ಸುದ್ದಿ ಗೋಷ್ಟಿ ನಡೆಯಿತು. ಈ ವೇಳೆ ನಿರ್ದೇಶಕ ಷಣ್ಮುಗಂ ಮುತ್ತುಸಾಮಿ(Shanmugam Muttusami), ನಾಯಕ ಹರೀಶ್ ಕಲ್ಯಾಣ್ (Harish Kalyan Hero)ಹಾಗೂ ನಾಯಕಿ ಅತುಲ್ಯ ರವಿ (Atulya Ravi Heroin) ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.
ನಿರ್ದೇಶಕ ಷಣ್ಮುಗಂ ಮುತ್ತುಸ್ವಾಮಿ ಮಾತನಾಡಿ, ಡೀಸೆಲ್(Diesel), ಪೆಟ್ರೋಲ್(Petrol) ನಮ್ಮ ದಿನನಿತ್ಯ ಬಳಸುವ ವಸ್ತುಗಳು. ಇದರಲ್ಲಿ ನಡೆಯುವ ಮಾಫಿಯಾವನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ನೈಜ ಘಟನೆ ಕುರಿತ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ ಎಂದರು.

ನಟಿ ಅತುಲ್ಯ ರವಿ ಮಾತನಾಡಿ, ಈ ಸಿನಿಮಾ ನನಗೆ ತುಂಬಾನೇ ಸ್ಪೆಷಲ್. ನಾವು ಕನ್ನಡದಲ್ಲಿಯೂ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಹೀಗಾಗಿ ಈ ಚಿತ್ರ ಮತ್ತಷ್ಟು ನನಗೆ ವಿಶೇಷ ಎನಿಸುತ್ತದೆ. ನಾನು ಲಾಯರ್ ಪಾತ್ರ ಮಾಡಿದ್ದೇನೆ. ಈ ಚಿತ್ರದ ಭಾಗವಾಗಿರುವುದು ನನಗೆ ಖುಷಿ ಕೊಟ್ಟಿದೆ ಎಂದರು.
ನಾಯಕ ಹರೀಶ್ ಕಲ್ಯಾಣ್ ಮಾತನಾಡಿ, ಸಿನಿಮಾದಲ್ಲಿ ಹಾಡುಗಳು ಐಡೆಂಟಿಟಿ ಇದ್ದಾಗೆ. ನಮ್ಮ ಚಿತ್ರದ ಎಮ್ಮಾಡಿ ಸಾಂಗ್ ಸೂಪರ್ ಹಿಟ್ ಆಗಿದೆ. ಈ ಹಿಂದೆ ಲವ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದೇನೆ. ಡೀಸೆಲ್ ಮೂಲಕ ಆಕ್ಷನ್ ಅವತಾರ ತಾಳಿದ್ದೇನೆ. ಪ್ರೇಕ್ಷಕರು ಇದ್ದನ್ನೂ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಚಿತ್ರದಲ್ಲಿ ಹರೀಶ್ ಕಲ್ಯಾಣ್, ಅತುಲ್ಯ ರವಿ, ವಿನಯ್ ರೈ ಮತ್ತು ಸಚಿನ್ ಕೇಧೇಕರ್ ಅವರಲ್ಲದೆ, ಸಾಯಿ ಕುಮಾರ್, ಅನನ್ಯ, ಕರುಣಾಸ್, ಬೋಸ್ ವೆಂಕಟ್, ರಮೇಶ್ ತಿಲಕ್, ಕಾಳಿ ವೆಂಕಟ್, ವಿವೇಕ್ ಪ್ರಸನ್ನ, ಜಾಕಿರ್ ಹುಸೇನ್, ತಂಗದುರೈ, ಮಾರನ್, ಕೆಪಿವೈ ಧೀನಾ ಮತ್ತು ಅಪೂರ್ವ ಸಿಂಗ್ ಇತರರು ನಟಿಸಿದ್ದಾರೆ.

ಷಣ್ಮುಗಂ ಮುತ್ತುಸಾಮಿ ಬರೆದು ನಿರ್ದೇಶಿಸಿರುವ ಡೀಸೆಲ್ ಚಿತ್ರವನ್ನು ಥರ್ಡ್ ಐ ಎಂಟರ್‌ಟೈನ್‌ಮೆಂಟ್ ಹಾಗೂ ಎಸ್ ಪಿ ಸಿನಿಮಾಸ್ ನಿರ್ಮಾಣ ಮಾಡಿದೆ. ಧಿಬು ನಿನಾನ್ ಥಾಮಸ್ ಸಂಗೀತ, ಎಂ.ಎಸ್.ಪ್ರಭು ಮತ್ತು ರಿಚರ್ಡ್ ಎಂ.ನಾಥನ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಚಿತ್ರಕ್ಕಿದೆ.