ಶಿವರಾಜ್ಕುಮಾರ್ (Shivaraj Kumar) ಎಂದರೆ ಕರ್ನಾಟಕ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯಗಳ ಸೆಲೆಬ್ರಿಟಿಗಳು ಶಿವಣ್ಣ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಸಿನಿಮಾ ಲೋಕದಲ್ಲಿ 40 ವರ್ಷ ಪೂರೈಸುತ್ತಿರುವ ಶಿವಣ್ಣ ಅವರಿಗೆ ಕನ್ನಡ(Kannada), ತೆಲುಗು(Telugu), ತಮಿಳು(Tamil) ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ.

‘ಹ್ಯಾಟ್ರಿಕ್ ಹೀರೋ’ ಚಿತ್ರರಂಗಕ್ಕೆ ಬಂದು 40 ವರ್ಷ ಕಳೆಯುತ್ತಿದೆ. ಇಂದಿಗೂ ಬಹುಬೇಡಿಕೆಯ ನಟನಾಗಿ ಬ್ಯುಸಿ ಆಗಿದ್ದಾರೆ. ಸಿನಿಮಾ ಲೋಕದಲ್ಲಿ 40 ವರ್ಷದ ಮೈಲಿಗಲ್ಲು ತಲುಪಿರುವ ಶಿವರಾಜ್ಕುಮಾರ್ ಅವರಿಗೆ ಅನೇಕರು ಅಭಿನಂದನೆ ತಿಳಿಸುತ್ತಿದ್ದಾರೆ. ಪರಭಾಷೆಯ ಸ್ಟಾರ್ ಕಲಾವಿದರು, ನಿರ್ದೇಶಕರು ಶಿವಣ್ಣನ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದಾರೆ.

ಧ್ರುವ ಸರ್ಜಾ. (Dhruva Sarja)
“ಅಣ್ಣ ನನ್ನ ವಯಸ್ಸು 35. ನೀವು ಚಿತ್ರರಂಗಕ್ಕೆ ಬಂದು 40 ವರ್ಷ ಆಗಿದೆ. ನಿಜವಾಗಿಯೂ ನಾನು ನಿಮ್ಮ ಅಭಿಮಾನಿಯಾಗು ತುಂಬಾನೇ ಇಷ್ಟ ಪಡುತ್ತೇನೆ. ನಮ್ಮ ಕುಟುಂಬ ಹಾಗೂ ನನ್ನ ವಿಐಪಿಗಳ ಕಡೆಯಿಂದ ನಿಮಗೆ ಆಲ್ ದಿ ಬೆಸ್ಟ್. ಆ ಭಗವಂತ ನಿಮಗೆ ಆಯಸ್ಸು ಆರೋಗ್ಯ ಕೊಡಲಿ, ಈಗಾಗಲೇ ಎಜರ್ಜಿ ಭಯಂಕರ ಕೊಟ್ಟಿದ್ದಾರೆ. ನೀವು ಎಷ್ಟೋ ಜನಕ್ಕೆ ಪ್ರೇರಣೆ. ಸಾಕಷ್ಟು ಜನ ಹೊಸಬರಿಗೆ ಪ್ರೇರಣೆ ಎಂದರೆ ನೀವೇ. ಇನ್ನೂ ಜಾಸ್ತಿ ಜನಕ್ಕೆ ಮೋಟಿವೇಟ್ ಮಾಡಿ. ” ಎಂದು ಧ್ರುವ ಸರ್ಜಾ ವಿಶ್ ಮಾಡಿದ್ದಾರೆ.

‘ಮೆಗಾ ಸ್ಟಾರ್’ ಚಿರಂಜೀವಿ(Megastar Chiranjeevi)
ಟಾಲಿವುಡ್ ನಟ ಚಿರಂಜೀವಿ ವಿಡಿಯೋ ಮೂಲಕ ಹಾರೈಸಿದ್ದಾರೆ. ‘ಡಾ. ರಾಜ್‌ಕುಮಾರ್ (Dr. Rajkumar) ಜೊತೆ ನನಗೆ ಯಾವಾಗಲೂ ವಿಶೇಷ ಬಾಂಧವ್ಯ ಇತ್ತು. ನನಗೆ ಅವರು ತಂದೆ ಸಮಾನರು. ಅವರಿಂದ ಶಿವಣ್ಣ, ಅಪ್ಪು ಮತ್ತು ರಾಘವೇಂದ್ರ ಬಗ್ಗೆ ತಿಳಿಯಿತು. ಅವರೆಲ್ಲ ನಮ್ಮ ಕುಟುಂಬದವರೇ ಅನಿಸಿದರು. ಶಿವಣ್ಣ ಸ್ಟಾರ್ ಆಗಿ ಬೆಳೆದಿದ್ದನ್ನು ನೋಡಲು ಖುಷಿ ಆಗುತ್ತದೆ. ತಂದೆಯ ದಾರಿಯಲ್ಲಿ ನಡೆದು ಬಂದಿದ್ದು ಮಾತ್ರವಲ್ಲದೇ, ಅವರು ತಮ್ಮದೇ ಛಾಪು ಮೂಡಿಸಿ, ಜನಮನ ಗೆದ್ದರು. ಚಿತ್ರರಂಗದಲ್ಲಿ ಅವರು 40 ವರ್ಷ ಪೂರೈಸಿದರು ಎಂದರೆ ನಂಬೋಕೆ ಆಗಲ್ಲ. ಎಂತಹ ಅದ್ಭುತ ಜರ್ನಿ. ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ’ ಎಂದು ಚಿರಂಜೀವಿ ವಿಶ್ ಮಾಡಿದ್ದಾರೆ.

ನಾನಿ (Nani)
ನಟ ನಾನಿ ಮಾತನಾಡಿ, ‘ಶಿವಣ್ಣ ಅವರ 40 ವರ್ಷಗಳ ಜರ್ನಿಯನ್ನು ನಾವೆಲ್ಲರೂ ಸೆಲೆಬ್ರೇಟ್ ಮಾಡಬೇಕು. ಅವರು ಚಿತ್ರರಂಗಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾದವರಿಗೂ ಅವರು ಸಹಾಯ ಮಾಡಿದ್ದಾರೆ. ನಾನು ಬೆಂಗಳೂರಿಗೆ ಬಂದಾಗ ಮನೆ ರೀತಿಯ ಫೀಲ್ ನೀಡಿದರು. ಪ್ರತಿ ಬಾರಿ ಅಲ್ಲಿಗೆ ಹೋದಾಗ ಭೇಟಿ ಆಗುತ್ತೇನೆ’ ಎಂದಿದ್ದಾರೆ.

ನಾಗಾರ್ಜುನ (Nagarjun)
‘ಚಿತ್ರರಂಗದಲ್ಲಿ 40 ವರ್ಷ ಕಳೆಯುವುದು ಸುಲಭ ಅಲ್ಲ’ ಎಂದು ನಾಗಾರ್ಜುನ ಹೇಳಿದ್ದಾರೆ. ‘ಸಿನಿಮಾದಲ್ಲಿ 40 ವರ್ಷ ಪೂರೈಸುವುದು ಸಾಕಷ್ಟು ನಟರ ಕನಸು. ಒಬ್ಬ ವ್ಯಕ್ತಿಯಾಗಿ ನಿಮ್ಮನ್ನು ನಾನು ತುಂಬ ಇಷ್ಟಪಡುತ್ತೇನೆ. ಹಲವು ಬಾರಿ ನಿಮ್ಮ ಜೊತೆ ಮಾತನಾಡಿದ್ದೇನೆ. ಪಾಸಿಟಿವ್ ವೈಬ್ ನೀಡುತ್ತೀರ. ನಾವು ಜೊತೆಯಾಗಿ ಕೆಲಸ ಮಾಡಿಲ್ಲ. ಆದರೆ ಜಾಹೀರಾತುಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇನೆ. ಅದು ಸವಿ ನೆನಪುಗಳು. ಶೀಘ್ರದಲ್ಲೇ ನಿಮ್ಮ ಜೊತೆ ಸಿನಿಮಾ ಮಾಡಲು ಬಯಸುತ್ತೇನೆ’ ಎಂದು ವಿಶ್ ಮಾಡಿದ್ದಾರೆ

ದೇವರಕೊಂಡ (Devarakonda)
ವಿಜಯ್ ದೇವರಕೊಂಡ ಮಾತನಾಡಿ, ‘ನಮಸ್ಕಾರ ಶಿವಣ್ಣ, ನೀವು 40 ವರ್ಷದಿಂದ ಚಿತ್ರರಂಗದಲ್ಲಿ ಇದ್ದೀರಿ. ಕಳೆದ 7 ವರ್ಷದಿಂದ ನಾನು ನಿಮಗೆ ಪರಿಚಯ. 7 ವರ್ಷದ ಹಿಂದೆ ನೀವು ನನ್ನನ್ನು ಬಹಳ ಪ್ರೀತಿಯಿಂದ ನಿಮ್ಮ ಮನೆಗೆ ಸ್ವಾಗತಿಸಿದಿರಿ. ಭಾರತೀಯ ಚಿತ್ರರಂಗಕ್ಕೆ, ಕನ್ನಡ ಚಿತ್ರರಂಗಕ್ಕೆ ನೀವು ಸಾಕಷ್ಟು ಕೊಡುಗೆ ನೀಡಿದ್ದೀರಿ. ನನ್ನಂತಹ ಹೊಸ ನಟರಿಗೆ ನೀಡುವ ಸಹಕಾರಕ್ಕೂ ಧನ್ಯವಾದಗಳು’ ಎಂದು ವಿಶ್ ಮಾಡಿದ್ದಾರೆ

ಕಮಲ್ ಹಾಸನ್ (Kamal Hassan)
“ನಮಸ್ಕಾರ, ತಮ್ಮ, ಮಗ ಏನು ಬೇಕಾದರೂ ಹೇಳಬಹುದು. ಯಾವಾಗ ಸಿಕ್ಕದರೂ ಅವರು ನನಗೆ ಮಗನಿದ್ದಂತೆ. ನಾನು ಅವರಿಗೆ ಚಿಕ್ಕಪ್ಪನಿದ್ದಂತೆ. ಇದನ್ನು ಈಗಾಗಲೇ ನಾನು ಹೇಳಿದ್ದೇನೆ. ಇದನ್ನು ಸುಮ್ಮನೆ ವಿಡಿಯೋ ಮಾಡುತ್ತಿದ್ದಾರೆ ಅದಕ್ಕೆ ಹೇಳಿದ್ದಾರೆ ಅಂತ ಅಂದುಕೊಳ್ಳಬೇಡಿ. 40- 45 ವರ್ಷ ಅಂದುಕೊಳ್ಳಿ, 50 ವರ್ಷ ಅಂತಾನೂ ಹೇಳಬಹುದು. ರಾಜ್‌ಕುಮಾರ್ ಅಣ್ಣ ನನಗೆ ತೋರಿಸಿರುವ ಪ್ರೀತಿ, ಅದು ನಾನು ನಿರೀಕ್ಷೆ ಮಾಡದೇ ಇರುವ ಪ್ರೀತಿ. ನಾವಿಬ್ಬರೂ ಒಂದೇ ಸ್ಟುಡಿಯೋದಿಂದ ಬಂದವರು. ಅವರ ಬೇಡರ ಕಣ್ಣಪ್ಪ ಎವಿಎಂ ಸ್ಟುಡಿಯೋ ನಿರ್ಮಾಣ ಮಾಡಿದ್ದು, ಅದು ಮುಗಿದು ತುಂಬಾ ದಿನ ಆಗಿದೆ. ಆಗ ಸಣ್ಣ ಹುಡುಗ. ಅಲ್ಲಿಂದ ಶುರುವಾಗಿದ್ದ ನಮ್ಮ ಸಂಬಂಧ ಇನ್ನೂ ಮುಂದುವರೆದಿದೆ. ಶಿವಣ್ಣ ಅವರ ಸಿನಿಮಾ ಜರ್ನಿ ಹೇಗೆ ಹೋಯ್ತು ಅಂತಾನೇ ಗೊತ್ತಿಲ್ಲ. ಶಿವಣ್ಣ ಅವರನ್ನು ಆಕ್ಟರ್ ಆಗಿ, ಫ್ಯಾನ್ಸ್ ಆಗಿ ನಾನು ಪರಿಚಯ ಮಾಡಿಕೊಂಡಿದ್ದೇನೆ. ಶಿವಣ್ಣಾ ಅವರ ಅಪ್ಪನ ಹಾದಿಯಲ್ಲಿಯೇ ಬರುತ್ತಿದ್ದಾರೆ. ಅದು ನನಗೆ ತುಂಬಾ ಖುಷಿ ಕೊಟ್ಟಿದೆ.”