ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಗಳವಾರ ರಾತ್ರಿ 11 ಘಂಟೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆ.
ವಿಜಯ್ ಸೇತುಪತಿ ಜೊತೆ ಪ್ರಯಾಣಿಸಿದ್ದ ಸಹ ಪ್ರಯಾಣಿಕನಿಂದ ಕುಡಿದ ಮತ್ತಿನಲ್ಲಿ ಹಲ್ಲೆಗೆ ಯತ್ನ ನಡೆದಿದೆ. ಈ ವೇಳೆ ವಿಜಯ್ ಸೇತುಪತಿ ಆಪ್ತ ಸಹಾಯಕ ಮತ್ತು ಸಹ ಪ್ರಯಾಣಿಕನೊಂದಿಗೆ ಜಗಳ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಏರ್ಪೋರ್ಟ್ನಲ್ಲಿ ಇಳಿದು ಬರುವಾಗ ಗಲಾಟೆ ನಡೆದಿದ್ದು. ಘಟನೆ ಬಳಿಕ ಸುಮಾರು ಒಂದು ಘಂಟೆಗು ಅಧಿಕ ಕಾಲ ನಟ ವಿಜಯ್ ಸೇತುಪತಿ ಪೊಲೀಸ್ ಠಾಣೆ ಬಳಿ ಇದ್ದರು .
ಇಂದು ಪುನೀತ್ ನಿವಾಸಕ್ಕೆ ಭೇಟಿ ನೀಡಲು ವಿಜಯ್ ಸೇತುಪತಿ ನಿರ್ಧರಿಸಿದ್ದರು. ಸದ್ಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿರುವ ಮಾಸ್ಟರ್ ಚೆಫ್ ತಮಿಳು ಚಿತ್ರೀಕರಣದಲ್ಲಿ ವಿಜಯ್ ಸೇತುಪತಿ ಭಾಗಿಯಾದ್ದಾರೆ.