ಸಂಸದ ಪ್ರತಾಪ್ ಸಿಂಹ(PrathapSimha) ಹಾಗೂ ಮಾಜಿ ಶಾಸಕ ಪ್ರೀತಮ್ ಗೌಡ(Preetham Gowda) ಪರಸ್ಪರ ಕಿತ್ತಾಡಿಕೊಂಡ ಪ್ರಸಂಗ ನಡೆದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ(Amith Shah) ಆಗಮನ ವೇಳೆ ಇಬ್ಬರು ಬಿಜೆಪಿ ನಾಯಕರು ಪರಸ್ಪರ ಜಗಳ ಆಡಿಕೊಂಡಿದ್ದಾರೆ. ಮೈಸೂರಿನ(Mysore) ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ(airport) ಈ ಘಟನೆ ನಡೆದಿದ್ದು, ಕೇಂದ್ರ ಗೃಹ ಸಚಿವರ ಸ್ವಾಗತಕ್ಕೆ ಲೈನಪ್ ಬಗ್ಗೆ ಸೂಚನೆ ನೀಡದ ಸಂದರ್ಭದಲ್ಲಿ ಪೊಲೀಸರ ಅನುಮತಿಯನ್ವಯ ನಿಲ್ಲುವಂತೆ ಮನವಿ. ಆದರೆ ಮಾಜಿ ಶಾಸಕ ಪ್ರೀತಂ ಗೌಡ ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದರಿಂದ ಕುಪಿತಗೊಂಡು ತಿರುಗೇಟು ನೀಡಿದ ಪ್ರತಾಪ್‌ಸಿಂಹ, ಇದೆಲ್ಲವನ್ನೂ ಹಾಸನದಲ್ಲಿ ಇಟ್ಕೋ, ನಮ್ಮಲ್ಲಿ ನಡೆಯಲ್ಲ ಎಂದಿದ್ದಾರೆ ಎನ್ನಲಾಗಿದ್ದು, ಸಂಸದ ಪ್ರತಾಪ್‌ಸಿಂಹ ಮಾತಿನಿಂದ ಪ್ರೀತಂ ಗೌಡ
ಸಿಟ್ಟಾಗಿದ್ದು, ಈ ವೇಳೆ ಸ್ಥಳದಲ್ಲಿದ್ದ ಇತರ ನಾಯಕರುಇಬ್ಬರ ನಡುವಿನ ಮಾತಿನ ಚಕಮಕಿ ಸುಮ್ಮನಾಗಿಸಿದ್ದಾರೆ.
#PrathapSimha #PreethamGowda #MPmysore #ExMLA #AmithShah