• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬೆಳೆ ಹಾಗೂ ಹಸು ಸಾಲ ಪಡೆದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ: ಡಿ.ಕೆ. ಸುರೇಶ್ ಕರೆ

ಪ್ರತಿಧ್ವನಿ by ಪ್ರತಿಧ್ವನಿ
September 12, 2025
in Top Story, ಕರ್ನಾಟಕ, ರಾಜಕೀಯ
0
ಬೆಳೆ ಹಾಗೂ ಹಸು ಸಾಲ ಪಡೆದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ: ಡಿ.ಕೆ. ಸುರೇಶ್ ಕರೆ
Share on WhatsAppShare on FacebookShare on Telegram

ಮನ್ನಾವಾಗುತ್ತದೆ ಎಂದು ಸಾಲ ಮಾಡದಿರಿ; ಭವಿಷ್ಯದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಸಾಲಮನ್ನಾ ಮಾಡುವುದಿಲ್ಲ

ADVERTISEMENT

ಆರ್ಥಿಕ ಶಕ್ತಿ ನೀಡಲು ಸಾಲ ಸೌಲಭ್ಯ ನೀಡಲಾಗುತ್ತಿದೆ

ಕನಕಪುರ, ಸೆ.12

“ಬೆಳೆಸಾಲ,‌ ಹಸು ಸಾಲ ಪಡೆದು ಆರ್ಥಿಕವಾಗಿ ಸಬಲರಾಗಿ.‌ ಬೆಂಗಳೂರಿಗೆ ವಲಸೆ ಹೋಗಿ ಸೆಕ್ಯುರಿಟಿ ಗಾರ್ಡ್ ಗಳಾಗಿ, ಹೋಟೆಲ್ ಕೆಲಸ ಮಾಡಿಕೊಂಡು ಕಷ್ಟದಲ್ಲಿ ಜೀವನ ತಳ್ಳಬೇಡಿ. ಸ್ವಂತ ಊರಿನಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ” ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ಕರೆ ನೀಡಿದರು.

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಕನಕಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕನಕಪುರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳೆಸಾಲ, ಸ್ತ್ರೀ ಶಕ್ತಿ ಸಹಾಯ ಸಂಘದ ಸಾಲ ಮತ್ತು ಸಾಕಾಣಿಕೆ ಸಾಲ ವಿತರಣಾ ಸಮಾರಂಭದಲ್ಲಿ ಡಿ.ಕೆ. ಸುರೇಶ್ ಅವರು ಮಾತನಾಡಿದರು.

Yatnal :  ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ ರಾಜಕೀಯ ಅಂತ್ಯವಾಗಲಿದೆ | #pratidhvani

“1.10 ಲಕ್ಷ ಜನರಿಗೆ ಬಿಡಿಸಿಸಿ ಬ್ಯಾಂಕ್ ಸಾಲ ನೀಡಿದೆ. ಅದರಲ್ಲಿ ನಮ್ಮ ಕ್ಷೇತ್ರದ ಜನರೇ 15,304 ಜನರಿದ್ದಾರೆ. ಇವರಿಗೆ 300 ಕೋಟಿಯಷ್ಟು ಬೆಳೆ ಹಾಗೂ ಜಾನುವಾರು ಸಾಲ ನೀಡಲಾಗಿದೆ. ಯಾರ ಬಳಿಯೂ ಕೈಯೊಡ್ಡಿ ಬದುಕಬೇಡಿ ಎಂದು ನಾವು ನಿಮಗೆ ಆಸರೆಯಾಗಿ ನಿಲ್ಲುತ್ತಿದ್ದೇವೆ. ಬೆಂಗಳೂರಿನಲ್ಲಿ ಮನೆಗೆಲಸಕ್ಕೆ ಹೋಗುವ ಬದಲು ತಾಯಂದಿರು ಎರಡು ಹಸು ಕಟ್ಟಿಕೊಂಡರೆ ಬದುಕು ಬಂಗಾರವಾಗುತ್ತದೆ. ಕನಕಪುರದಿಂದ ಎರಡುವರೆ ಲಕ್ಷ ಲೀಟರ್ ಹಾಲು ಬರುತ್ತಿದೆ. ಇದನ್ನು 4 ಲಕ್ಷ ಲೀಟರ್ ಗೆ ಏರಿಸ ಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದರು.

“ರೈತರು ಭವಿಷ್ಯದ ಚಿಂತನೆ ಮಾಡುತ್ತಿಲ್ಲ. ಕೇವಲ ನಗರದ ಬದುಕಿನ ಮೊರೆ ಹೋಗುತ್ತಿದ್ದೀರಿ. ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ಆದರೆ ಬದುಕಿನ ದಾರಿಯನ್ನು ತೋರಿಸಬಹುದು. ರೇಷ್ಮೆಗೆ ಬೆಲೆ ಇಲ್ಲ ಎಂದರು.‌ ನಾನು ಕಾರ್ಖಾನೆ ಮಾಡಿದ ನಂತರ ಬೆಲೆ ಹೆಚ್ಚಾಗಿದೆ. ಅನೇಕರಿಗೆ ನಾನು ಕಾರ್ಖಾನೆ ಮಾಡಿ ಎಂದು ಹೇಳಿದೆ ಕೇಳಲಿಲ್ಲ.‌ ಕೊನೆಗೆ ನಾನೇ ಅನೇಕ ದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ ಸ್ಥಾಪನೆ ಮಾಡಿದೆ.‌ ಇಂದು ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಲೇ ಇದೆ” ಎಂದರು.

“ಕ್ಷೇತ್ರದಲ್ಲಿ ಸುಮಾರು 12 ಸಾವಿರ ಜನರಿಗೆ ಕೃಷಿ ಭೂಮಿ ಹಂಚಿಕೆ ಮಾಡಲಾಗಿದೆ. ನಾನೇ 1 ಸಾವಿರ ಜನರಿಗೆ ಭೂಮಿ ಹಂಚಿಕೆ ಮಾಡಿದ್ದೇನೆ. ಇನ್ನೂ 500- 600 ಜನರಿಗೆ ಭೂಮಿಯನ್ನು ಹಂಚಲು ಬಾಕಿಯಿದೆ. ಅದಕ್ಕೆ ಜಾಗ ಹುಡುಕಲಾಗುತ್ತಿದೆ. 30-40 ಲಕ್ಷ‌ ಮೌಲ್ಯದ ಜಮೀನನ್ನು ಒಂದೇ ಒಂದು ರೂಪಾಯಿ ಪಡೆಯದೇ ಹಂಚಿಕೆ ಮಾಡಲಾಗುತ್ತಿದೆ” ಎಂದರು.

“ಕನಕಪುರ ತಾಲ್ಲೂಕು ಒಂದರಲ್ಲೇ ಸುಮಾರು 77,600 ಕುಟುಂಬದ ಮಹಿಳೆಯರಿಗೆ 2 ಸಾವಿರ ದೊರೆಯುತ್ತಿದೆ. ಈ ರಾಜ್ಯದ ಬಡವರು, ಕೂಲಿ ಕಾರ್ಮಿಕರ ಏಳಿಗೆಗಾಗಿ 50 ರಿಂದ‌ 55 ಸಾವಿರ ಕೋಟಿ ವ್ಯಯ ಮಾಡಲಾಗುತ್ತಿದೆ. ಜನರು ಆರ್ಥಿಕವಾಗಿ ಶಕ್ತಿ ಹೊಂದಬೇಕು ಎಂದು ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್ ಅವರು ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.

“ಯಾರೂ ಸಹ ಕೇಳದೇ ಇದ್ದರೂ ಶೂನ್ಯ ಬಡ್ಡಿ ದರದಲ್ಲಿ ನಾವೇ ಮನೆ ಬಾಗಿಲಿಗೆ ಬಂದು ಬೆಳೆ, ಜಾನುವಾರ‌‌ ಸಾಲ ನೀಡುತ್ತಿದ್ದೇವೆ. ಹಾಲಿನ ಖರೀದಿ ದರ ಹೆಚ್ಚಳ ಮಾಡಿ ನಿಮ್ಮ ಪರವಾಗಿ ನಿಂತಿದ್ದೇವೆ. 5 ರೂಪಾಯಿ ಸಬ್ಸಿಡಿ ನೀಡುತ್ತಿದ್ದೇವೆ. ನಿಮ್ಮ ಏಳಿಗೆಯೇ ನಮ್ಮ ಏಳಿಗೆ ಎಂದು ಕೆಲಸ ಮಾಡುತ್ತಿದ್ದೇವೆ” ಎಂದರು.

“ಗ್ಯಾರಂಟಿಯಿಂದ ಅಭಿವೃದ್ಧಿಯಾಗುತ್ತಿಲ್ಲ ಎನ್ನುತ್ತಿದ್ದಾರೆ. ಅಭಿವೃದ್ಧಿ ಅದರ ಪಾಡಿಗೆ‌ ಅದು ಆಗುತ್ತಿದೆ. ನಾವು ಅದನ್ನು ಪ್ರಚಾರ ಮಾಡಿಕೊಳ್ಳುತ್ತಿಲ್ಲ ಅಷ್ಟೇ. ಆರ್ಥಿಕವಾಗಿ ಶಕ್ತಿ ನೀಡಲು ಸಾಲ ನೀಡುತ್ತಿದ್ದೇವೆ. ಹಾಲಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ನಾವು ಮೊದಲನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ನೀವುಗಳು ಶ್ರಮಿಸಬೇಕು” ಎಂದರು.

“ಸರ್ಕಾರಗಳು ಸಾಲಮನ್ನಾ ಮಾಡುತ್ತವೆ ಎಂದು ಜನರು ಬ್ಯಾಂಕ್ ನಲ್ಲಿ ಬೆಳೆ ಸಾಲ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಸಾಲಮನ್ನಾ ಮಾಡಲು ಸಾಧ್ಯವಾಗುವುದಿಲ್ಲ. ಸಾಲಮನ್ನಾಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಐದು ಗ್ಯಾರಂಟಿಗಳನ್ನು ಪ್ರತಿಯೊಬ್ಬರಿಗೂ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ” ಎಂದು ಹೇಳಿದರು.

“ಎಲ್ಲಾ ಕಡೆ ಸಾಲ ಮಾಡಿ ಕೇವಲ ಬಡ್ಡಿ ಕಟ್ಟುವುದಕ್ಕೆ ಜೀವನ ಹಾಳು ಮಾಡಿಕೊಳ್ಳಬೇಡಿ. ಸಾಲವನ್ನು ಪಡೆದು ಉತ್ತಮ‌ ಕೆಲಸಗಳಿಗೆ ಬಳಸಿಕೊಳ್ಳಿ. ಬಿಡಿಸಿಸಿ ಬ್ಯಾಂಕ್ ಅಲ್ಲಿ ನಿಗದಿತ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ 10 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.‌ ನೀವು ಉಳಿಯಬೇಕು ಜೊತೆಗೆ ಬ್ಯಾಂಕ್ ಸಹ ಉಳಿಯಬೇಕು” ಎಂದರು.

S/O Muthanna Movie Public Review  :Young age ನಲ್ಲಿ ಬರಿ ದುಡ್ಡು ಅಂತೀವಿ ಸಂಬಂಧ ಹೇಗಿರಬೇಕು ಗೊತ್ತಾ..?

“ಮಕ್ಕಳಿಗೆ ಆಸ್ತಿ ಮಾಡಲು ಆಗುತ್ತದೋ‌ ಇಲ್ಲವೋ ಎಂದು ಚೆನ್ನಾಗಿ ಓದಿಸುತ್ತಿದ್ದಾರೆ. ಅನೇಕರು ಎಂಜಿನಿಯರಿಂಗ್, ಡಾಕ್ಟರ್ ಗಳಾಗುತ್ತಿದ್ದಾರೆ. ನೀವು ಉನ್ನತ ಶಿಕ್ಷಣ ಪಡೆದ ತಕ್ಷಣ ಕೆಲಸ ಸಿಗುತ್ತದೆ ಎಂದುಕೊಳ್ಳಬೇಡಿ. ಶಿಕ್ಷಣ ಇರುವುದು ನಿಮ್ಮ ಅರಿವನ್ನು, ಜ್ಞಾನವನ್ನು ಹೆಚ್ಚು ಮಾಡಲು. ನೀವು ವಿದ್ಯೆ ಪಡೆಯುವುದು ಉದ್ಯೋಗ ಸೃಷ್ಟಿಸಲು ಹೊರತು ಕೆಲಸ ಮಾಡಲು ಅಲ್ಲ” ಎಂದರು.

“ಬೆಂಗಳೂರು ದಕ್ಷಿಣ ಜಿಲ್ಲೆಯಾದ ತಕ್ಷಣ ಏಕೆ ಜಮೀನುಗಳ ಬೆಲೆ ಹತ್ತಿರತ್ತಿರ ಒಂದು ಕೋಟಿ ತಲುಪಿದೆ.‌ ಏಕೆ ಶ್ರೀಮಂತರು ಕೃಷಿ ಭೂಮಿ ಕೊಂಡುಕೊಳ್ಳುತ್ತಿದ್ದಾರೆ. ಶಿವಕುಮಾರ್ ಅವರು 25 ವರ್ಷಗಳಿಂದ ಜಮೀನು ಮಾರಬೇಡಿ ಎಂದು ಹೇಳುತ್ತಲೇ ಇದ್ದರು ಜನರು ಜಮೀನು ಮಾರುತ್ತಿದ್ದಾರೆ” ಎಂದು ಬೇಸರಿಸಿದರು.

“ಕನಕಪುರ ಕ್ಷೇತ್ರವೆಂದರೆ ಇಡೀ ರಾಜ್ಯದಲ್ಲಿ ಎಲ್ಲರೂ ಹೆಮ್ಮೆ ಪಡುವಂತೆ ರೂಪಿಸಿದ್ದೇವೆ. ಯಾವುದೇ ಒಳ್ಳೆ ಕಾರ್ಯಕ್ರಮವಿದ್ದರು ಮೊದಲು ಇಲ್ಲಿ ಅನುಷ್ಠಾನಗೊಂಡು ಅನಂತರ ಇಡೀ ರಾಜ್ಯಕ್ಕೆ ವಿಸ್ತರಣೆಗೊಳ್ಳುತ್ತದೆ. ನಮಗೆ ಮತ ಹಾಕಿದ ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ನಾವು ಮಾಡುವ ಕೆಲಸಗಳಿಗೆ ಪ್ರಚಾರ ಪಡೆಯುವ ಹಪಾಹಪಿತನ ನಮಗಿಲ್ಲ.‌ ಜನರ ಸಂಕಷ್ಟಗಳು ದೂರ ಮಾಡಬೇಕು ಎನ್ನುವುದು ನಮ್ಮ ಉದ್ದೇಶ” ಎಂದು ಹೇಳಿದರು.

“ರಾಜಕೀಯವಾಗಿ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ ಎಂದರೂ ಕೇಳದೆ ಬಮುಲ್ ಅಧ್ಯಕ್ಷನನ್ನಾಗಿ ಎಲ್ಲಾ ಮುಖಂಡರು ಸೇರಿ ಆಯ್ಕೆ ಮಾಡಿದ್ದೀರಿ. ನಾನು ಹೇಳು ಸಂಗತಿಗಳನ್ನು ಸಹ ನೀವುಗಳು ಕೇಳಬೇಕಾಗುತ್ತದೆ” ಎಂದು ಹೇಳಿದರು.

Tags: bamul chairman dk sureshbamul dk sureshbamul dk suresh speechbamul president dk sureshBJPCongress Partydk sureshdk suresh bamuldk suresh bamul electiondk suresh bamul newsdk suresh bamul nominationdk suresh elected bamul presidentdk suresh familydk suresh files nomination for bamul president postdk suresh kmfdk suresh mpdk suresh newsdk suresh nominates bamul electionsdk suresh on sriramuludk suresh unanimously elected as director of bamuldk suresh vs sriramulump dk sureshಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಝೈದ್ ಖಾನ್ ಅಭಿನಯದ “ಕಲ್ಟ್” ಚಿತ್ರದ “ಅಯ್ಯೊ ಶಿವನೇ” ಹಾಡಿಗೆ ಅಭಿಮಾನಿಗಳು ಫಿದಾ. .

Next Post

ಖ್ಯಾತ ನಟಿ ಪ್ರೇಮ ಅವರಿಂದ ಬಿಡುಗಡೆಯಾಯಿತು “ಮರಳಿ ಮನಸಾಗಿದೆ” ಚಿತ್ರದ ನಾಲ್ಕನೇ ಹಾಗೂ ಕೊನೆಯ ಹಾಡು .

Related Posts

Top Story

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
November 18, 2025
0

"ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. (Deputy Chief...

Read moreDetails

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

November 18, 2025

ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

November 18, 2025

ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 18, 2025
Next Post
ಖ್ಯಾತ ನಟಿ ಪ್ರೇಮ ಅವರಿಂದ ಬಿಡುಗಡೆಯಾಯಿತು “ಮರಳಿ ಮನಸಾಗಿದೆ” ಚಿತ್ರದ ನಾಲ್ಕನೇ ಹಾಗೂ ಕೊನೆಯ ಹಾಡು .

ಖ್ಯಾತ ನಟಿ ಪ್ರೇಮ ಅವರಿಂದ ಬಿಡುಗಡೆಯಾಯಿತು "ಮರಳಿ ಮನಸಾಗಿದೆ" ಚಿತ್ರದ ನಾಲ್ಕನೇ ಹಾಗೂ ಕೊನೆಯ ಹಾಡು .

Recent News

Top Story

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
November 18, 2025
Top Story

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
November 18, 2025
Top Story

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

by ಪ್ರತಿಧ್ವನಿ
November 18, 2025
Top Story

ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

by ಪ್ರತಿಧ್ವನಿ
November 18, 2025
Top Story

ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
November 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

November 18, 2025

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada