
ನವದೆಹಲಿ : ರಾಜಸ್ಥಾನದ ಅಜ್ಮೀರ್(Ajmer, Rajasthan) ಜಿಲ್ಲೆಯಲ್ಲಿ ಎರಡು ಗುಂಪುಗಳ (two groups(ನಡುವೆ ನಡೆದ ಘರ್ಷಣೆಯ (friction)ವೇಳೆ ಮೊಳಗಿದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೋರ್ವನು ಗಾಯಗೊಂಡಿದ್ದಾನೆ.
ಜೈನ ಸಮುದಾಯಕ್ಕೆ ಸೇರಿದ ರೂಪಂಗಢ ಪ್ರದೇಶದ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ ಎಂದ ವಿರೋಧಿಸಿದ ಒಂದು ಗುಂಪು ಹಾಗೂ ನಿರ್ಮಾಣದ ಕಡೆಯವರ ಮತ್ತೊಂದು ಗುಂಪಿನ ಯುವಕರು ಕಲ್ಲು-ದೊಣ್ಣೆ, ಕಬ್ಬಿಣದ ರಾಡ್ಗಳಿಂದ ಬಡಿದಾಡಿಕೊಂಡಿದ್ದಾರೆ.
अजमेर के रूपनगढ़ में अंधाधुंध फायरिंग हुई, जिसमें एक व्यक्ति की मौत हो गई।
— Shubham Singh (@Shubhamsingh038) September 22, 2024
गाड़ियों में तोड़फोड़, जेसीबी को आग लगाई और लोगों को स्कॉर्पियो से कुचलने की कोशिश की गई। यह घटना गंभीर है! 😡#Ajmer #BreakingNews #AjmerNews #Violence #AjmerViolence pic.twitter.com/QPvKS5hxHJ
ಈ ಎರಡು ಗುಂಪುಗಳ ನಡುವಿನ ಘರ್ಷಣೆ ನಿಲ್ಲಿಸಲಾಗದಷ್ಟೂ ಪರಿಸ್ಥಿತಿ ಪೊಲೀಸರ ಕೈ ಮೀರಿ ಹೋಗಿದೆ. ಸ್ಥಳದಲ್ಲಿ ಕಾಮಗಾರಿಯಲ್ಲಿ ತೊಡಗಿದ್ದ ಒಂದು ಗುಂಪಿನ ಸದಸ್ಯ ಜೆಸಿಬಿ ಚಲಾಯಿಸುವ ಮೂಲಕ ದಾಳಿಗೆ ಮುಂದಾದ ಗಲಾಟೆ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಸರಪಂಚ್ ಭೂಮಿಯನ್ನು ಅಕ್ರಮವಾಗಿ ಗುತ್ತಿಗೆ ಪಡೆದಿದ್ದಾರೆ. ಇದು ಅಕ್ರಮವಾಗಿದೆ ಎಂದು ಒಂದು ಗುಂಪು ಧ್ವನಿ ಎತ್ತಿದ್ದಕ್ಕೆ ಸ್ಥಳದಲ್ಲಿ ಈ ಹಿಂಸಾಚಾರ ನಡೆದಿದೆ. ಸದ್ಯ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದೆ.









