ಸಾಮಾನ್ಯವಾಗಿ ಎಲ್ಲ ಹೆಣ್ಣು ಮಕ್ಕಳಿಗೂ ತುಂಬಾನೇ ಉದ್ದವಾದ ಕೂದಲು ಅದರಲ್ಲೂ ಸಿಲ್ಕಿ ಹೇರ್ ಹಾಗೂ ಡ್ಯಾಂಡ್ರಫ್ ರಹಿತ ಕೂದಲು ಇರಬೇಕು ಎಂದು ಬಯಸುತ್ತಾರೆ. ನಿಮ್ಮ ಕೂದಲು ತುಂಬಾನೇ ಸ್ಟ್ರಾಂಗ್ ಆಗಿ ಉದ್ದವಾಗಿ ಬೆಳಿಬೇಕು ಅಂತ ಹೇಳಿದ್ರೆ ವಾರಕ್ಕೆ ಎರಡು ಅಥವಾ ಮೂರು ಬಾರಿ ತೆಂಗಿನ ಎಣ್ಣೆಯನ್ನು ಹಚ್ಚಿಕೊಂಡರೆ ಉತ್ತಮ. ಇದೆಲ್ಲದರ ಜೊತೆಗೆ ತೆಂಗಿನ ಎಣ್ಣೆಯೊಂದಿಗೆ ಈ ಪದಾರ್ಥವನ್ನು ಬಳಸುವುದರಿಂದ ನಿಮ್ಮ ಕೂದಲಿಗೆ ಒಳ್ಳೆಯದು..
ನೆಲ್ಲಿಕಾಯಿ ಮತ್ತು ತೆಂಗಿನ ಎಣ್ಣೆ
ಮೂರು ಟೇಬಲ್ ಸ್ಪೂನ್ ಅಷ್ಟು ತೆಂಗಿನ ಎಣ್ಣೆಗೆ ಒಂದು ಟೇಬಲ್ ಸ್ಪೂನ್ ಅಷ್ಟು ನೆಲ್ಲಿಕಾಯಿ ಪುಡಿಯನ್ನು ಬಳಸಿ ಚೆನ್ನಾಗಿ ಕುದಿಸಿ ಬೆಚ್ಚಗಾದ ಮೇಲೆ ತಲೆಗೆ ಹಚ್ಚುವುದರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ ಹಾಗೂ ಬಿಳಿ ಕೂದಲಾಗುವುದನ್ನು ತಡೆಗಟ್ಟುತ್ತದೆ ಜೊತೆಗೆ ಡ್ಯಾಂಡ್ರಫ್ ಕೂಡ ಕಡಿಮೆ ಆಗುತ್ತದೆ.
ಮೆಂತ್ಯ ಮತ್ತು ಕರಿಬೇವು
ತಾಜಾ ತೆಂಗಿನ ಎಣ್ಣೆಗೆ ಒಂದು ಸ್ಪೂನ್ನಷ್ಟು ಮೆಂತೆ ಹಾಗೂ ಒಂದು ಹತ್ತು ಎಸಳು ಕರಿಬೇವು ಹಾಕಿ ಚೆನ್ನಾಗಿ ಕುದಿಸಿ ನಂತರ ಆ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕಪ್ಪದ ಕೂದಲು ನಿಮ್ಮದಾಗುತ್ತದೆ ಹಾಗೂ ಕೂದಲು ಉದುರುವುದು ಕೂಡ ಕಡಿಮೆ ಮಾಡುತ್ತದೆ ನಿಮ್ಮ ಹೇರ್ ಅನ್ನ ಸ್ಟ್ರಂದನ್ ಮಾಡುತ್ತದೆ.
ದಾಸವಾಳ ಗಿಡದ ಬೇರು
ತೆಂಗಿನ ಎಣ್ಣೆ ಜೊತೆಗೆ ದಾಸವಾಳದ ಗಿಡದ ಬೇರನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ತಲೆಗೆ ಹಚ್ಚುವುದರಿಂದ ನಿಮ್ಮ ಕೂದಲು ಉದ್ದವಾಗಿ ಬೆಳೆಯುತ್ತದೆ ಡ್ಯಾಂಡ್ರಫ್ ಕಡಿಮೆಯಾಗುತ್ತದೆ ಹಾಗೂ ಉದುರುವುದು ಕೂಡ ನಿವಾರಣೆಯಾಗುತ್ತದೆ.
ತೆಂಗಿನ ಎಣ್ಣೆ ಕೂದಲಿಗೆ ಉತ್ತಮ ರೀತಿಯಲ್ಲಿ ರಿಸಲ್ಟ್ ಕೊಡುತ್ತದೆ. ತಲೆಗೆ ಮಾತ್ರವಲ್ಲದೆ ರಾತ್ರಿ ಮಲಗುವುದಕ್ಕಿಂತ ಮುಂಚೆ ಮುಖಕ್ಕೂ ಕೂಡ ತೆಂಗಿನ ಎಣ್ಣೆ ಹಚ್ಚಿ ಮಲಗುವುದರಿಂದ ಮೊಡವೆಗಳು ದೂರವಾಗುತ್ತವೆ ಮಡುವೆಯ ಮಾರ್ಗಗಳಾಗಿರಬಹುದು ಕಪ್ಪು ಕಲೆಗಳಾಗಿರಬಹುದು ದೂರವಾಗುತ್ತದೆ ಕ್ಲಿಯರ್ ಸ್ಕಿನ್ ನಿಮ್ಮದಾಗುತ್ತದೆ ಹಾಗೂ ಮುಖದ ಹೊಳಪು ಹೆಚ್ಚಾಗುತ್ತದೆ.