Tag: ಭಾರತೀಯ ರಣಹದ್ದು

ಭಾರತೀಯ ರಣಹದ್ದು ಗಜೇಂದ್ರಗಡ ಬೆಟ್ಟ ವಲಯ ಪ್ರದೇಶದಲ್ಲಿ ಮತ್ತೆ ಗೋಚರ!

ಅಕ್ಷಿಪಿಟ್ರಿಡೆ ಕುಟುಂಬಕ್ಕೆ ಸೇರಿದ ಅಳಿವಿನಂಚಿನಲ್ಲಿರು ವಿರಳಜಾತಿಯ ರಣಹದ್ದು (ವೈಜ್ಞಾನಿಕ ಹೆಸರು: ಜಿಪ್ಸ ಇಂಡಿಕಸ್, ಸಾಮಾನ್ಯ ಹೆಸರು: ಇಂಡಿಯನ್ ವಲ್ಚರ್ ಅಥವಾ ಇಂಡಿಯನ್ ಲಾಂಗ್ ಬಿಲ್‍ಡ ವಲ್ಚರ್) ಗಜೇಂದ್ರಗಡ ಬೆಟ್ಟವಲಯದಲ್ಲಿ ಪತ್ತೆಯಾಗಿದ್ದು ಪಕ್ಷಿಪ್ರೇಮಿಗಳಲ್ಲಿ ಸಂತಸತಂದಿದೆ. ಇದು ಭಾರತ, ನೇಪಾಳ ಪಾಕಿಸ್ತಾನ ಮೂಲದ ರಣಹದ್ದಾಗಿದೆ. ರಣಹದ್ದು! ಈ ಹೆಸರು ಕೇಳಿದರೇ ಸಾಮಾನ್ಯವಾಗಿ ಭಯಪಡುತ್ತಾರೆ..6.5 ಯಿಂದ 7.8 ಫೂಟ್ ಗಾತ್ರಹೊಂದಿದ್ದು ಆಯಾಸ ವಿಲ್ಲದೆ ಹಾರಾಟ ನಡೆಸುತ್ತವೆ. ರೆಕ್ಕೆಬಡಿಯದೇ ಆಕಾಶದಲ್ಲಿ ತಾಸುಗಟ್ಟಲೆ ಸುತ್ತುಹೊಡೆಯ ಬಲ್ಲದು. ಇದರ ದೃಷ್ಟಿ ಮಾನವನಿಗಿಂದ 8 ಪಟ್ಟು ಸೂಕ್ಷ್ಮ ಅಂದರೆ ಇವು 3 ಅಡಿ ಎತ್ತರದ ಪ್ರಾಣಿಗಳನ್ನು ನಾಲ್ಕು ಮೈಲಿಯಷ್ಟು ಎತ್ತರದಿಂದಲೇ ಸ್ಪಷ್ಟವಾಗಿ ಗುರಿತಿಸಬಲ್ಲವು. ಸತ್ತ ಸಾಕು ಮತ್ತು ವನ್ಯ ಪ್ರಾಣಿಗಳು ಇವುಗಳ ಆಹಾರ. ಸತ್ತ ಕೊಳೆತ ಪ್ರಾಣಿಗಳ ಸುತ್ತ ಗುಂಪುಗುಂಪಾಗಿ ತಿನ್ನುವುದು ಸಾಮಾನ್ಯ.  ಇಂತಹ ಸತ್ತ,ಕೊಳೆತ ಪ್ರಾಣಿಗಳನ್ನು ಭಕ್ಷಿಸುವ ಮೂಲಕ ರಣಹದ್ದುಗಳು ಊರನ್ನು ದುರ್ವಾಸನೆಯಿಂದಷ್ಟೆ ಅಲ್ಲದೆ ಸತ್ತ ಪ್ರಾಣಿಗಳಿಂದ ಸಾಂಕ್ರಾಮಿಕ ರೋಗಗಳ ಹರಡದಂತೆ ನೈಸರ್ಗಿಕ  ಸ್ಕ್ಯಾವೆಂಜರ್‍ಗಳಾಗಿ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಣಹದ್ದುಗಳು 12 ಕಿ.ಮೀ ಗಿಂತಲೂ  ಎತ್ತರಕ್ಕೆ ಹಾರುತ್ತವೆ ಅಲ್ಲದೇ ತಾಸಿಗೆ 80 ಕಿ.ಮೀ ವೇಗದಲ್ಲಿ ಸಾವಿರಾರು ಕಿ.ಮಿ ಸುತ್ತಳತೆಯಲ್ಲಿ ಗಸ್ತುಹೊಡೆಯತ್ತವೆ. ಆಹಾರ ಕಂಡೊಡನೆ ಗಂಟೆಗೆ 120 ಕಿ.ಮೀ ವೇಗದಲ್ಲಿ ನೆಲಕ್ಕೆರಗಿ ಶವಗಳ ಸುತ್ತ ಪ್ರತ್ಯಕ್ಷವಾಗುತ್ತವೆ. ಇವು ಬೆಟ್ಟಗುಡ್ಡಗಳ ಎತ್ತರ ಸುರಕ್ಷಿತ ಬಂಡೆಗಳ ಮೇಲೆ ಗೂಡು ನಿರ್ಮಿಸುತ್ತವೆ. ಎತ್ತರ ಮರದ ಮೇಲು ಕೂಡ ಗೂಡು ನಿರ್ಮಿಸ ಬಲ್ಲವು. ಸಂರಕ್ಷಣೆಯ ಅಗತ್ಯ: ಈಗಾಗಲೆ ಅಳಿವಿನಂಚಿನ ಭೀತಿಯೆದುರುಸುತ್ತಿರುವ ರಣಹದ್ದುಗಳ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವದರಿಂದ ಸಂರಕ್ಷಣೆ ಮುಖ್ಯವಾಗಿದ್ದು ಅರಣ್ಯ ಇಲಾಖೆಯ ಜೊತೆ ಸ್ಥಳೀಯ ಸಾರ್ವಜನಿಕರ ಸಹಕಾರ ಕೂಡಾ ಅವಶ್ಯ. ಗಜೇಂದ್ರಗಡ, ನಾಗೆಂದ್ರಗಡ, ಕಾಲಕಾಲೇಶ್ವರ ಬೆಟ್ಟ, ಶಾಂತೇಶ್ವರ ಬೆಟ್ಟಗಳು ರಣಹದ್ದು ಸೇರಿದಂತೆ ಇತರ ಹದ್ದುಗಳಿಗೆ ಸೂಕ್ತ ನೈಸರ್ಗಿಕ ಆವಾಸ ಸ್ಥಾನ ವಾಗಿದ್ದು ಇಲ್ಲಿ ಈಗಾಗಲೆ ಅಳಿವಿಂಚಿನಲ್ಲಿರುವ ತೋಳ ಹಾಗೂ ಕತ್ತೆಕಿರುಬಗಳು ಇದ್ದು ಸಂರಕ್ಷಣೆಯ ಕ್ರಮಗಳು ಅವಶ್ಯವಾಗಿದೆ. ವಿಶ್ವದಲ್ಲಿರುವ 23 ಜಾತಿಯ ರಣಹದ್ದುಗಳ ಪೈಕಿ 16 ಜಾತಿಯ ರಣಹದ್ದುಗಳು ಅಳಿವಿನಂಚು ತಲುಪಿವೆ. ಭಾರತದಲ್ಲಿ 9 ವಿವಿಧ ಬಗೆಯ ರಣಹದ್ದುಗಳಿದ್ದು 4 ಜಾತಿಯ ರಣಹದ್ದುಗಳು ಅಳಿವಿನ ಭೀತಿಯನ್ನೆದುರಿಸುತ್ತವೆ. ಭಾರತದಲ್ಲಿ ರಣಹದ್ದುಗಳ ಸಂರಕ್ಷಣೆಗಾಗಿ ನಮ್ಮ ರಾಜ್ಯದ ರಾಮನಗರ ಜಿಲ್ಲೆಯ 346 ಹೆಕ್ಟೆರ್ “ರಾಮದೇವರ ಬೆಟ್ಟ”  ಎಕೈಕ ಪ್ರದೇಶವಾಗಿದೆ. (2012 ರ ಜನೆವರಿಯಲ್ಲಿ ರಣಹದ್ದುಗಳ ಸಂರಕ್ಷಿತ ತಾಣ ವಾಗಿ ಘೋಷಣೆ) ರಣಹದ್ದುಗಳು ಸತ್ತು ಕೊಳೆಯುತ್ತಿರುವ ವನ್ಯಪ್ರಾಣಿ ಮತ್ತು ಸಾಕು ಪ್ರಾಣಿಗಳನ್ನು ತಿನ್ನುವುದರ ಮೂಲಕ ದುರ್ವಾಸನೆ ಹಾಗೂ ಅವುಗಳಿಂದ ಹರಡಬಹುದಾದ ರೋಗ ರುಜಿನಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸುಮಾರು 2 ದಶಕಗಳ ಹಿಂದೆ ಅಪಾರ ಸಂಖ್ಯೆಯಲ್ಲಿದ್ದ ರಣಹದ್ದುಗಳ ಜಾನುವಾರುಗಳಿಗೆ ಬಳಸುತ್ತಿದ್ದ ಡೈಕ್ಲೋಫೀನಾಕ್ ಔಷಧಿಯಿಂದಾಗ ಹದ್ದುಗಳ ಆರೋಗ್ಯದ ಮೇಲಾಗು ದುಷ್ಪರಿಣಾಮದಿಂದಾಗಿ ಗಣನೀಯವಾಗಿ ಕುಸಿದು ಅಳಿವಿಂಚು ಸೇರುತ್ತಿದೆ. ರಣಹದ್ದುಗಳ ಸಂರಕ್ಷಣೆಗಾಗಿ ಸರಕಾರ 4 ವರ್ಷದಿಂದ ಡೈಕ್ಲೋಫಿನಾಕ್ ಬಳಕೆಗೆ ನಿಷೇದ ಹೆರಿದ್ದು ಗಮನಾರ್ಹ ವಿಷಯ. ಕಳೆದ ವಾರ ಗದಗ ಜಿಲ್ಲೆಯ ಎ.ಸಿ.ಎಫ್ ಪರಿಮಳ ಹುಲಗನ್ನವರವರ ಹಿರೇಹಾಳ ಗ್ರಾಮದಲ್ಲಿರುವ ಹೊಲದಲ್ಲಿ ರಣಹದ್ದು ಗೊಚರಿಸಿದೆ. ಶಾಂತಗೇರಿ ಬೆಟ್ಟದಲ್ಲಿನ ಅರಣ್ಯ ರಕ್ಷಕ ಸಿಬ್ಬಂದಿಗಳಾದ ಈಶ್ವರ ಮರ್ತೂರ, ಮಲ್ಲೇಶ ಹುಲ್ಲಣ್ಣವರ, ಶಾಂತಪ್ಪ ಹಟ್ಟಿಮನಿ ಮತ್ತು ಯಮನೂರ ಪಿಳಮಂಟರ ಇವರಿಗೂ ಸಹ ಗೂಚರಿಸಿವೆ. ಅರಣ್ಯ ಇಲಾಖೆ ಇವುಗಳ ಸಂರಕ್ಷಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಂಜುನಾಥ ಎಸ್ ನಾಯಕ, ಜೀವವೈವಿಧ್ಯ ಸಂಶೋಧಕರ ಪ್ರಕಾರ “ರಣ ಹದ್ದುಗಳು ಗದಗ್ ಜಿಲ್ಲೆಯ ಗಜೇಂದ್ರಗಡ ಗಿರಿಗಳತ್ತ ಬಂದಿದ್ದೆ ...

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!