Tag: Speaker Vishweshwara Hegade Kageri

ಪರೇಶ್ ಮೇಸ್ತಾ ಪ್ರಕರಣ: ಕಾಗೇರಿ, ಬಿಜೆಪಿ ಕಾರ್ಯಕರ್ತರು ಸೇರಿದಂತೆ 122 ಜನರ ಮೇಲೆ ದಾಖಲಾಗಿದ್ದ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರ

ಕಾರವಾರ: ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ಪರೇಶ್ ಮೇಸ್ತಾ ಕೊಲೆ (Paresh Mesta) ಪ್ರಕರಣಕ್ಕೆ ಸಂಬಂಧಿಸಿದಂತೆ 122 ಜನರ ಮೇಲೆ ದಾದಖಲಾಗಿದ್ದ ಮೂರು ಪ್ರಕರಣವನ್ನು ಹಿಂಪಡೆದು ಮುಖ್ಯಮಂತ್ರಿ ಬಸವರಾಜ ...

Read moreDetails

ಧರಣಿ ನಿರತ ಸಿದ್ದರಾಮಯ್ಯ, ಡಿಕೆಶಿ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಧರಣಿ ನಿರತ ಕಾಂಗ್ರೆಸ್​ನ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​​ ಹಾಗೂ ಇತರರ ಜೊತೆ ತುಸು ಹೊತ್ತು ಮಾತುಕತೆ ನಡೆಸಿದರು. ಡಿಕೆ ...

Read moreDetails

ವಿಧಾನಸಭೆ ಪ್ರವೇಶಿಸಿದ 2ಎ ಮೀಸಲಾತಿ ಹೋರಾಟ; ಯತ್ನಾಳ್, ಬೆಲ್ಲದ್ ಧರಣಿ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತ ಹೋರಾಟ ಈಗ ವಿಧಾನಸಭೆಯನ್ನು ಪ್ರವೇಶಿಸಿದೆ. ಮಿಸಲಾತಿ ನೀಡುವ ಕುರಿತಾಗಿ ಸಿಎಂ ಬಸವರಾಜ ಬೊಮ್ಮಾಯಿ ಸದನದಲ್ಲಿಯೇ ಉತ್ತರ ನೀಡಬೇಕೆಂದು ಪಟ್ಟುಹಿಡಿದ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ ಬೆಲ್ಲದ್ ವಿಧಾನಸಭೆಯಲ್ಲಿಯೇ ಧರಣಿ ನಡೆಸಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ್ ಅವರು ಶೂನ್ಯವೇಳೆಯಲ್ಲಿ ಮೀಸಲಾತಿ ಕುರಿತ ವಿಚಾರವನ್ನು ಪ್ರಸ್ತಾಪಿಸಿದರು. ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗ 2ಎಗೆ ಸೇರಿಸುವ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಅವರು ನೀಡಿದ ಭರವಸೆಯನ್ನು ಯತ್ನಾಳ್ ಸದನದ ಗಮನಕ್ಕೆ ತಂದರು.  “ಎಸ್‌ಟಿ ಸಮುದಾಯಕ್ಕೆ ನೀಡಿರುವ ಮೀಸಲಾತಿಯನ್ನು ಶೇ.3ರಿಂದ ಶೇ.7.5ಕ್ಕೆ ಏರಿಸಿ ವಾಲ್ಮೀಕಿ, ಉಪ್ಪಾರ ಸೇರಿದಂತೆ ಇತರ ಎಸ್‌ಟಿ ಸಮುದಾಯಗಳಿಗೆ ಅನುಕೂಲ ಕಲ್ಪಿಸುವುದು ಹಾಗೂ ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸುವುದಾಗಿ ಆರು ತಿಂಗಳ ಹಿಂದೆ ನಡೆದ ಸದನದಲ್ಲಿ ಸರ್ಕಾರದಿಂದ ಭರವಸೆ ನೀಡಿಲಾಗಿತ್ತು. ಇದರೊಂದಿಗೆ, ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗ 2ಎಗೆ ಸೇರಿಸಲು ಆರು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿ ಎಸ್ ವೈ ಭರವಸೆ ನೀಡಿದ್ದರು,” ಎಂದು ಯತ್ನಾಳ್ ಹೇಳಿದ್ದಾರೆ.  ಈಗಾಗಲೇ, ಸರ್ಕಾರ ನೀಡಿದ ಗಡುವು ಸೆಪ್ಟೆಂಬರ್ 15ಕ್ಕೆ ಅಂತ್ಯವಾಗಿದೆ. ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಐದನೇ ಹಂತದ ಚಳವಳಿಯನ್ನು ಮಲೆ ಮಹದೇಶ್ವರ ಬೆಟ್ಟದಿಂದ ಆರಂಭಿಸಲಾಗಿದೆ, ಎಂದರು.  ಇದಕ್ಕೆ ಉತ್ತರ ನೀಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಹಾಗೂ ಕಾನೂನು ಸಚಿವರು ವಿಧಾನಪರಿಷತ್ ಕಲಾಪದಲ್ಲಿ ಭಾಗವಹಿಸುತ್ತಿರುವುದರಿಂದ ನಂತರ ಉತ್ತರ ನೀಡಲಾಗುವುದು, ಎಂದು ಹೇಳಿದರು.  ಇಷ್ಟಕ್ಕೆ ಸಮಾಧಾನಗೊಳ್ಳದ ಯತ್ನಾಳ್, ಸಿಎಂ ಯಾವಾಗ ಉತ್ತರ ನೀಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಪಟ್ಟು ಹಿಡಿದರು. ಯತ್ನಾಳ್ ತೆ ದನಿಗೂಡಿಸಿದ ಶಾಸಕ ಅರವಿಂದ ಬೆಲ್ಲದ್ ಸರ್ಕಾರ ತನ್ನ ಭರವಸೆ ಈಡೇರಿಸದ ಕಾರಣ ಜನರಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ, ಎಂದರು.  ಮೀಸಲಾತಿ ಕುರಿತ ವಿಚಾರಕ್ಕೆ ಸಂಬಂಧಿಸಿ ಉತ್ತರ ನೀಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ ಶಾಸಕದ್ವಯರು, ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಿದರು. ಈ ವೇಳೆ ಇಬ್ಬರಿಗೂ ಬುದ್ದಿ ಹೇಳಲು ಮುಂದಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಉತ್ತರ ನೀಡುತ್ತಾರೆ ಎಂದು ಸಭಾಧ್ಯಕ್ಷರು ಹೇಳಿದ ಬಳಿಕವೂ ಆಡಳಿತ ಪಕ್ಷದ ಸದಸ್ಯರೇ ಈ ರೀತಿ ಧರಣಿ ನಡೆಸುವುದು ಸರಿಯಲ್ಲ ಎಂದರು.  ಸಿಎಂ ವಿದೇಶಕ್ಕೆ ಹೋಗಿಲ್ಲ. ವಿಧಾನಪರಿಷತ್ತಿಗೆ ಹೋಗಿದ್ದಾರೆ. ಧರಣಿಯನ್ನು ಕೈಬಿಡಿ ಎಂದು ಸಭಾಧ್ಯಕ್ಷರು ಹೇಳಿದ ನಂತರ ಯತ್ನಾಳ್ ಹಾಗೂ ಬೆಲ್ಲದ್ ಧರಣಿ ಕೈಬಿಟ್ಟರು.  ಕಳೆದ ಸುಮಾರು ಒಂದು ವರ್ಷದಿಂದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂಬ ಕುರಿತು ನಿರಂತರ ಹೊರಾಟ ನಡೆಯುತ್ತಲೇ ಇದೆ. ಹೊರಾಟದ ಮುಂಚೂಣಿಯಲ್ಲಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ನೀಡದಿದ್ದಲ್ಲಿ ಅಮರಣಾಂತ ಉಪವಾಸ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದರು.  ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳನ್ನು ಸೇರಿದಂತೆ ಅಂದಾಜು ಒಂದು ಕೋಟಿಯಷ್ಟು ಜನಸಂಖ್ಯೆಯನ್ನು ಪಂಚಮಸಾಲಿ ಸಮಾಜವನ್ನು ಹೊಂದಿದೆ. ಮೀಸಲಾತಿ ಹೋರಾಟದ ನೆಪದಲ್ಲಿ ಈ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ದ ಹರಿಹಾಯ್ದಿದ್ದರು. ಮೀಸಲಾತಿಗಾಗಿ ಬೇಡಿಕೆ ಇಟ್ಟಿದ್ದಕ್ಕಿಂತಲೂ ಹೆಚ್ಚಾಗಿ ಇದೊಂದು ರಾಜಕೀಯ ಲಾಭಕ್ಕಾಗಿ ನಡೆಯುತ್ತಿರುವ ಹೋರಾಟದಂತೆ ಭಾಸವಾಗಿತ್ತು. ಹೊರಾಟದ ತೀವ್ರತೆ ಹೆಚ್ಚುತ್ತಿದ್ದಂತೆಯೇ, ಮಧ್ಯಪ್ರವೇಶಿಸಿದ ಮಾಜಿ ಸಿಎಂ ಯಡಿಯೂರಪ್ಪ, ಆರು ತಿಂಗಳಲ್ಲಿ ಈ ಕುರಿತಾಗಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದ್ದರು. ಈಗ ಆರು ತಿಂಗಳು ಕಳೆದರೂ, ಈ ಕುರಿತಾಗಿ ಸರ್ಕಾರ ತುಟಿಪಿಟಕ್ಕೆನ್ನದ ಕಾರಣ ಮತ್ತೆ ಹೋರಾಟ ಮುಂದುವರೆಸುವ ಕುರಿತು ಯೋಜನೆಗಳನ್ನು ರೂಪಿಸಲಾಗುತ್ತಿದೆ. 

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!