ಬಿಟ್ ಕಾಯಿನ್ ಹಗರಣದಲ್ಲಿ ಒಂದು ಕಡೆ ರಾಜಕಾರಣಿಗಳ ಕೆಸರೆರಚಾಟ ಮುಂದುವರಿದಿದ್ದರೆ, ಮತ್ತೊಂದು ಕಡೆ ಆ ಕುರಿತು ಪೊಲೀಸರ ಹೇಳಿಕೆಗಳು ಇಡೀ ಪ್ರಕರಣದ ಕುರಿತ ಈಗಾಗಲೇ ಇರುವ ಅನುಮಾನಗಳನ್ನು ಇನ್ನಷ್ಟು ಸ್ಪಷ್ಟಪಡಿಸುತ್ತಿವೆ. ಬಿಟ್ ಕಾಯಿನ್ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ನಡೆಸಿದ ಅಕ್ರಮಗಳು ಕುರಿತು ತನಿಖೆ ನಡೆಸುವ ವೇಳೆ ಆತ ನಡೆಸಿದ ಹತ್ತಾರು ಸಾವಿರ ಕೋಟಿ ರೂ. ಮೌಲ್ಯದ ಸಾವಿರಾರು ಬಿಟ್ ಕಾಯಿನ್ ಹ್ಯಾಕ್ ಮಾಹಿತಿ ತಿಳಿದ ಬಳಿಕ ಸಿಸಿಬಿ ಪೊಲೀಸರು ಆತನ ವಶದಲ್ಲಿರುವ ಬಿಟ್ ಕಾಯಿನ್ ಗಳನ್ನು ಪರಿಶೀಲಿಸುತ್ತಾರೆ. ಆಗ ಆತನ ವ್ಯಾಲೆಟ್ ನಲ್ಲಿ 31 ಬಿಟ್ ಕಾಯಿನ್ ಇರುವುದು ಪತ್ತೆಯಾಗುತ್ತದೆ. ಆ ಬಿಟ್ ಕಾಯಿನ್ ಗಳನ್ನು ತಮ್ಮ ವಶಕ್ಕೆ ಪಡೆಯಲು ತಮ್ಮದೇ ಆದ ವ್ಯಾಲೆಟ್ ಅಗತ್ಯವಿದೆ ಎಂದು ...
Read moreDetails