ಕೊರೋನಾ ದೆಸೆಯಿಂದ ಮಕ್ಕಳ ಶಿಕ್ಷಣ ಕುಂಠಿತವಾಗಿದೆ. ಸಧ್ಯ ಶಾಲೆಗಳು ತೆರದಿದ್ದರೂಸಾಕಷ್ಟು ಮಕ್ಕಳು ಶಾಲೆಗೆ ಹಾಜರಾಗಲಾಗುತ್ತಿಲ್ಲ. ಹೀಗಿರುವಾಗ SSLC ವಿದ್ಯಾರ್ಥಿಗಳಿಗೆ ಹೇಗಪ್ಪ ಈ ವರ್ಷ ಎಕ್ಸಾಂ ಬರೆಯುವುದು ಹೇಗೆ ಎಂಬ ಟೆನ್ಷನ್ ಇದ್ದರೆ ಶಿಕ್ಷಕರಿಗೆ ಪಠ್ಯ ಕಂಪ್ಲೀಟ್ ಒತ್ತಡ ಎದುರಾಗಿತ್ತು. ಹೀಗಾಗಿ ಪಠ್ಯ ಕಡಿತ ಮಾಡುವಂತೆ ಶಿಕ್ಷಣ ಸಚಿವರಿಗೆ ಒತ್ತಡ ಹೆಚ್ಚಾಗಿದ್ದು ಸಚಿವರು ಎಸ್ಎಸ್ ಎಲ್ ಸಿ ಪಠ್ಯ ಕಡಿತಕ್ಕೆ ಮನಸ್ಸು ಮಾಡಿದ್ದಾರೆ.
ಕೊರೋನಾ ಬಂದು ಎರಡು ವರ್ಷ ಕಳೆದರೂಮಹಾಮಾರಿ ಕಾಟ ಇನ್ನು ನಿಂತಿಲ್ಲ. ಈ ವರ್ಷವೂ ಶಾಲೆ ತಡವಾಗಿ ಆರಂಭವಾಗಿದ್ದು, ಶೈಕ್ಷಣಿಕ ವರ್ಷದ ಪಾಠಕ್ಕೆ ಸಮಯ ಸಿಗುತ್ತಿಲ್ಲ. ಕಳೆದ ವರ್ಷ ಬೋರ್ಡ್ ಎರಡೇ ಎರಡು ದಿನ ಸಿಂಪಲ್ ಎಕ್ಸಾಂ ಮಾಡಿ ಎಲ್ಲ ಇದ್ಯಾರ್ಥಿಗಳನ್ನ ಪಾಸ್ ಮಾಡಿತ್ತು.. ಆದರೆ ಈ ವರ್ಷದ ವಿದ್ಯಾರ್ಥಿಗಳ ಪಾಡೇನು ಎಂಬ ಸಮಸ್ಯೆ ಎದುರಾಗಿದ್ದು ಕಡಿಮೆ ಅವಧಿಯಲ್ಲಿ ಸಂಪೂರ್ಣ ಪಠ್ಯ ಬೋಧನೆಯ ಒತ್ತಡ ಶಿಕ್ಷಕರಿಗಾದರೆ ಎಲ್ಲ ಪಠ್ಯ ಅರ್ಥೈಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಎಚ್ಚೆತ್ತುಗೊಂಡ ಸಚಿವರು ಶೇ 20ರಷ್ಟು ಪಠ್ಯ ಕಡಿತಕ್ಕೆ ಮುಂದಾಗಿದ್ದಾರೆ.
20212022 ನೇ ಸಾಲಿನ ಆರಂಭದಿಂದಲೇ ಕೋವಿಡ್ ಲಾಕ್ ಡೌನ್ ಹಿನ್ನಲೆ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಅಗಸ್ಟ್ ಕೊನೆಯವರಗೂ ಆನ್ ಲೈನ್ ಪಾಠಗಳನ್ನೇ ಮಾಡಲಾಗುತ್ತಿದ್ದು, ಆಗಸ್ಟ್ ಕೊನೆಯಲ್ಲಿ 610 ರವರೆಗೆ ಅರ್ದ ದಿನ ಮಾತ್ರ ಶಾಲಾ ಕಾಲೇಜು ನಡೆಸಲಾಗುತ್ತಿದೆ. ಅಕ್ಟೊಬರ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭವಾಗಿದ್ದು, ಅದರಲ್ಲೂ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಇದು ನುಂಗಲಾರದ ತುತ್ತಾಗಿತ್ತು.
ಪ್ರಸಕ್ತ ಶೈಕ್ಷಣಿಕ ವರ್ಷವೂ ಕೊವಿಡ್ ಕಾರಣಕ್ಕೆ ತಡವಾಗಿ ಆರಂಭವಾಗಿದ್ದು ಪ್ರತಿ ವರ್ಷ 240 ಕ್ಕೂ ಬೋಧನೆಗೆ ದಿನಗಳು ಸಿಗುತ್ತಿತ್ತು. ಆದರೆ ಈ ವರ್ಷ ತಡವಾಗಿ ಶಾಲೆ ಆರಂಭವಾದ ಹಿನ್ನಲೆ 140ಕ್ಕಿಂತ ಕಡಿಮೆ ಅವಧಿ ಸಿಕ್ಕಿದೆ. ಇದು ಶಿಕ್ಷಕರು ಒತ್ತಡದಲ್ಲಿ ತ್ವರಿತಗತಿಯಲ್ಲಿ ಪಠ್ಯ ಮುಗಿಸಲು ಮುಂದಾಗಿದ್ದಾರೆ. ಕಡಿಮೆ ಸಮಯ ಅಂತಾ ಶಿಕ್ಷಕರು ದಿನಕ್ಕೊಂದು ಪಾಠ ಮುಗಿಸುತ್ತಿದ್ದಾರೆ. ಹೀಗಾಗಿ ಶಿಕ್ಷಕರು ಸಂಘವು ಪಠ್ಯವನ್ನ ಕಡಿತ ಮಾಡುವಂತೆ ಒತ್ತಾಯ ಮಾಡಿದ್ದರು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಪೂರ್ತಿ ಪಠ್ಯ ಬೋಧನೆ ಹಿನ್ನಲೆ ಸಾಕಷ್ಟು ಒತ್ತಡ ಆತಂಕ ಎದುರಾಗಿತ್ತು. ಹೀಗಾಗಿಯೇ ಅನೇಕ ಒತ್ತಡ ಮತ್ತು ವಿದ್ಯಾರ್ಥಿಗಳ ಗೋಳಾಟ ಹಿನ್ನಲೆ ಶಿಕ್ಷಣ ಸಚಿವರು SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲು ಮುಂದಾಗಿದ್ದಾರೆ. ಈ ಬಾರಿ SSLC ಪಠ್ಯ ಕಡಿತಕ್ಕೆ ಮುಂದಾಗಿದ್ದು ಶೇ 20 ಪಠ್ಯ ಕಡಿತಕ್ಕೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಮುಂದಾಗಿದ್ದಾರೆ. ಶೇ20 ಪಠ್ಯ ಕಡಿತ ಮಾಡಿ ಶೇ 80% ರಷ್ಟು ಪಠ್ಯ ಬೋಧನೆ ಅವಕಾಶ ಮಾಡಿ ಕೊಡಲು ಮುಂದಾಗಿದ್ದು ಶೇ 80% ರಷ್ಟು ಪಠ್ಯ ವಿಷಯಕ್ಕೆ ಮಾತ್ರ ಈ ಬಾರಿಯ ಎಸ್ಎಸ್ಎಲ್ ಸಿ ಎಕ್ಸಾಂ ಕೂಡಾ ನಡೆಸಲು ಮುಂದಾಗಿದೆ.
ಇನ್ನು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಒತ್ತಡದಿಂದ ಪಾಠ ಸರಿಯಾಗಿ ಅರ್ಥವಾಗುತ್ತಿಲ್ಲ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ ಆರಂಭದಲ್ಲಿ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ಪ್ರಯೋಗಿಕ ಪಾಠ ಕಡಿತ ಮಾಡಿಡುವ ನಿರ್ಧಾರಕ್ಕೆ ಬಂದಿದ್ದ ಶಿಕ್ಷಣ ಸಚಿವ ನಾಗೇಶ್ ಇದೀಗ ಸಂಪೂರ್ಣವಾಗಿ 20% ನಷ್ಟು ಸಿಲೆಬಸ್ ಕಡಿತಗೊಳಿಸಿದ್ದಾರೆ. ಒಟ್ಟಾರೆಯಾಗಿ ಶಿಕ್ಷಣ ಸಚಿವರು ಈ ಶೈಕ್ಷಣಿಕ ಸಾಲಿನಲ್ಲು ಪಠ್ಯ ಕಡಿತ ಮಾಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಬ್ಬರಿಗೂ ಕಲಿಕಾ ಭೋದನೆಗೆ ಸುಲಭ ಅವಕಾಶ ಮಾಡಿಕೊಡಲು ಮುಂದಾಗಿದ್ದು, ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.