ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಎ.ಎಸ್ ಪೊನ್ನಣ್ಣ ರವರ ಮಹತ್ವಾಕಾಂಕ್ಷೆಯ ಕೀರೆಹೊಳೆ ಸ್ವಚ್ಛತಾ ಕಾರ್ಯ ಪ್ರಗತಿಯಾಗುತ್ತಿದಂತೆ…
ನಾಡಿನೆಲ್ಲೆಡೆ ಸ್ವಚ್ಛತಾ ಆಂದೋಲನದ ಬಗ್ಗೆ ಜಾಗೃತರಾದ ನಾಗರಿಕರು… ಕೀರೆಹೊಳೆ ಶುದ್ಧೀಕರಣದ ಉದ್ದೇಶದಿಂದ, ನದಿಗೆ ಅಳವಡಿಸಲಾದ ಆಧುನಿಕ ಕಳೆ ತಡೆಯುವ ಸಾಧನದಿಂದಾಗಿ ಕೇವಲ ಒಂದು ದಿನದಲ್ಲಿ 1.8 ಟನ್ ಗೂ ಅಧಿಕ, ಕಸ-ಕಡ್ಡಿ, ಗೋಣಿಗಳಲ್ಲಿ ತುಂಬಿದ ನಾಯಿಗಳ ಕಳೇಬರಗಳು, ಕೊಳೆತ ಮಾಂಸ ಮತ್ತು ಇತರ ಕಲ್ಮಶಗಳನ್ನು ತಡೆಹಿಡಿಯಲಾಯಿತು. ಈ ವಿಶೇಷ ಶುದ್ಧೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲ ಕರ್ಮಚಾರಿಗಳಿಗೂ ವಿಶೇಷ ಅಭಿನಂದನೆಗಳು… ಹಾಗೆ ನಾಡಿನ ಪ್ರತಿಯೊಬ್ಬ ನಾಗರೀಕರು ಜಾಗೃತರಾಗಿ ತಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರುಸುವ ಮೂಲಕ ಸ್ವಚ್ಛ ಕೊಡಗು ಪರಿಕಲ್ಪನೆಗೆ ಕಾಣಿಕೆ ನೀಡುವಂತಾಗಬೇಕು ಇಂದು ಮಾನ್ಯ ಶಾಸಕರು ಕರೆ ನೀಡಿದ್ದಾರೆ.