2023ರ ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಮಂಡ್ಯದಲ್ಲಿ ತುಸು ಹೆಚ್ಚು ಎಂದು ಹೇಳಬಹುದು.
ಈ ಹಿಂದೆ ಲೋಕಸಭೆ ಚುನಾವಣೆ ಸಮಯದಲ್ಲಿ ಸಂಸದೆ ಸುಮಲತಾ ಸೆರಗೊಡ್ಡಿ ಮತ ಕೇಳಿದ್ದು ಎಲ್ಲರಿಗೂ ನೆನಪಿದೆ ಅದೇ ರೀತಿ ಈಗ ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಟವಲೊಡ್ಡಿ ಮತ ಕೇಳುವ ಮೂಲಕ ಸುದ್ದಿಯಲ್ಲಿದ್ದಾರೆ.
ಬುಧವಾರ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕದಬಳ್ಳಿ ಸ್ವಾಭಿಮಾನಿ ಸಮಾವೇಶ ಏರ್ಪಿಡಿಸಿದ್ದ LRS ಮಾತನಾಡುವ ವೇಳೆ ಭಾವುಕರಾಗಿ ಜೆಡಿಎಸ್ ನಾಯಕರ ವಿರುದ್ದ ಹರಿಹಾಯ್ದರು. ನಾನೇನು ತಪು ಮಾಡಿದೆ ಎಂದು ಐದು ತಿಂಗಳು ನನ್ನನ್ನು ಸಂಸದನಾಗಿ ಮಾಡಿ ಕೆಳಗಿಳಿಸಿದ್ರಿ ಸುಮಲತಾ ಅವರ ತರ ನಾನು ಸ್ವಾಭಿಮಾನದ ಹೆಸರಲ್ಲಿ ಭಿಕ್ಷೆ ಬೇಡ್ತಿದ್ದಿನಿಮತದಾರರು ಆಶೀರ್ವಾದ ಮಾಡಿ, 2023ಕ್ಕೆ ನನ್ನ ಗೆಲ್ಲಿಸಿ ಎಂದು ಮಾತನಾಡುವ ವೇಳೆ ವಿನಂತಿಸಿದ್ದಾರೆ.
ಪ್ರಧಾನಿ ಮೋದಿ ದೇಶದ ಜನರನ್ನ ಬಕ್ರ ಮಾಡ್ತಿದ್ದಾರೆ ಅದೇ ರೀತಿ ರಾಜ್ಯದಲ್ಲಿ ಕುಮಾರಣ್ಣ ಒಕ್ಕಲಿಗರ ಜನಾಂಗದವರನ್ನ ಕುರಿ ಮಾಡ್ಕೊಂಡಿದ್ದಾರೆ ನೆನ್ನೆ ನಾಗಮಂಗಲದಲ್ಲಿ ಪಂಚರತ್ನ ಯಾತ್ರೆ ನಡೆದಿದೆ ನನಗೆ ಅವರು ಬುದ್ದಿ ಹೇಳ್ತಾರಂತೆ. 32 ಕೋಟಿ ಖರ್ಚು ಮಾಡಿಸಿ ಸಾಲ ಮಾಡಿಸಿ ಮಗನಿಗೆ ಟಿಕೆಟ್ ಕೊಡ್ತಾರೆ. ನಾಗಮಂಗಲ ತಾಲ್ಲೂಕಿಗೆ ನಿಮ್ಮ ಕೊಡುಗೆ ಏನು ಎಂದು ಮಾತನಾಡುವ ವೇಳೆ ಹೆಚ್‌ಡಿಕೆಗೆ ಪ್ರಶ್ನಿಸಿದ್ದಾರೆ.
ಕುಮಾರಣ್ಣಗೆ ನಾಗಮಂಗಲ ಜನರ ಕಷ್ಟ ಕಾಣ್ತಿಲ್ಲ ಬೆಂಗಳೂರಿನಲ್ಲಿ ಆಟೋ ಒಡಿಸಿ ಜನರು ಕೆಲಸ ಮಾಡ್ತಿದ್ದಾರೆ ಎಷ್ಟು ದಿನ ಜನರ ಕಣ್ಣಿಗೆ ಮಣ್ಣು ಎರುಚುತ್ತೀರಿ ನೀವು ನನಗೆ ಬುದ್ದಿ ಹೇಳಿಸುವ ಬದಲು ಕೆಲಸ ಮಾಡಿ. ನಾವು ನೀವು ಗೆಲ್ಲಿಸಿದ ಶಾಸಕರು ಏನು ಮಾಡ್ತಿದ್ದಾರೆ? ನಾಗಮಂಗಲದಲ್ಲಿ 200 ಶಿಕ್ಷಕರ ಕೊರತೆ ಇದೆ ಕುಡಿಯುವ ನೀರಿನ ಘಟಕ ಕೆಟ್ಟಿವೆ ಎಂದು ಹೇಳಿದ್ದಾರೆ.
ನಾಗಮಂಗಲದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಡೆಯುತ್ತಿದೆ ಇದಕ್ಕೆ ಕುಮಾರಣ್ಣ ಉತ್ತರ ಕೊಡಬೇಕು ಸರ್ಕಾರಿ ಕಚೇರಿಗೆ ಬಡ ಜನರು ಹೋಗುವುದಕ್ಕೆ ಆಗ್ತಿಲ್ಲ ಶಾಸಕರ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಕುಮಾರಣ್ಣ ಮಾತನಾಡಲು ಕರೆದಿದ್ರು, ಅವರಿಗೆ ಉತ್ತರ ಕೊಟ್ಟಿದ್ದೇನೆ ಅವರ ಪಾರ್ಟಿ ಎಂಎಲ್ಎ ಏನು ಮಾಡ್ತಿದ್ದಾರೆ.ಕಾಂಟ್ರಾಕ್ಟರ್ ಬಳಿ 30%-40%ಕಮಿಷನ್ ಪಡೆಯುತ್ತಿದ್ದಾರೆ ಎಂದು ಶಾಸಕ ಸುರೇಶ್ ಗೌಡ ವಿರುದ್ದ ಆರೋಪಿಸಿದ್ದಾರೆ.
ನಾಗಮಂಗಲದಲ್ಲಿ ಸುರೇಶ್ ಗೌಡ ಯಾವುದೇ ಕಾರಣಕ್ಕೂ ಜಯಗಳಿಸಲ್ಲ ಪಂಚರತ್ನಯಾತ್ರೆ ನೋಡಲು ಜನರು ಹರಿದು ಬರ್ತಿದ್ದಾರೆ ಅನ್ನೊಬಗ್ಗೆ ಮಾತನಾಡಲ್ಲ. ತಾಲೂಕಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಕೆಲಸ ಮಾಡ್ತೇನೆ 2023ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸ್ತೇನೆ ರಂಗನಾಥ ಸ್ವಾಮಿ ಮೇಲೆ ಪ್ರಮಾಣ ಮಾಡ್ತಿ ಹೇಳ್ತೇನೆ ಶಿವರಾಮೇಗೌಡ ಮುಂದಿನ ಎಂಎಲ್ಎ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನರು ದಡ್ಡರಲ್ಲ, ಸ್ವಾಭಿಮಾನದ ಜನರು ಪಂಚರತ್ನಕ್ಕೆ ಸ್ಪಂದಿಸಲ್ಲ ಕೆಲಸ ಮಾಡುವ ನಾಯಕರು ಬೇಕಾಗಿದ್ದಾರೆ ನಾಗಮಂಗಲದಲ್ಲಿ ಶಿವರಾಮೇಗೌಡ 40 ಸಾವಿರ ಮತಗಳ ಬದಲಾವಣೆ ಮಾಡಲು ಸಾಧ್ಯವಿಲ್ಲ ನಾಗಮಂಗಲದಲ್ಲಿ ಶಿವರಾಮೇಗೌಡ ಗೆಲ್ಲುವುದನ್ನ ತಡೆಯಲು ಯಾರಿಂದಲು ಸಾಧ್ಯವಿಲ್ಲ ಎಂದು ಜೆಡಿಎಸ್ ನಾಯಕರಿಗೆ ಚಾಟಿ ಬೀಸಿದ್ದಾರೆ.
ನನ್ನ MLA ಗಿರಿ ಹೋಗಿ 25 ವರ್ಷವಾಗಿದೆ ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋತೆ ಕಾಂಗ್ರೆಸ್ ಪಕ್ಷದಲ್ಲಿ ಎರಡೂ ಬಾರಿ ಸೋತವರಿಗೆ ಟಿಕೆಟ್ ತಪ್ಪಿತು ನನಗೆ ಟಿಕೆಟ್ ಕೊಡದೆ ಬೇರೆಯವರಿಗೆ ಕೊಟ್ರು ಕಾಂಗ್ರೆಸ್ ನಲ್ಲಿ MLA,MLC,MPಯಾಗಿ ಮುಂದುವರಿಯದ ಹಾಗೆ ಹುನ್ನಾರ ಮಾಡಿದ್ರು. ಕ್ಷೇತ್ರದಲ್ಲಿ ಇದ್ದು ಜನರ ಪರ ಹೋರಾಟ ಮಾಡ್ತಿದ್ದೇನೆ.
ಪಕ್ಷೇತರವಾಗಿ ಕಳೆದ ಎರಡೂ ಬಾರಿ ಸ್ಪರ್ಧಿಸಿ ಗೆದ್ದಿದ್ದೆ ನಾಗಮಂಗಲದಲ್ಲಿ ಪಕ್ಷೇತರದಿಂದ ಗೆದ್ದ ಇತಿಹಾಸ ಇದೆ ಮೂರನೇ ಬಾರಿ ಪಕ್ಷೇತರವಾಗಿ ನಿಲ್ಲುವ ಹಾಗೆ ಮತದಾರರು ಆದೇಶ ಕೊಟ್ಟಿದ್ದಾರೆ ಎ<ದು ಸ್ವಾಭೊಮಾನಿ ಸಮಾವೇಶದಲ್ಲಿ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.