ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಅಕಸ್ಮಾತಾಗಿ ಸುಟ್ಟರೆ, ನೋವಾಗದಂತೂ ಖಂಡಿತ.ಕೆಲವರು ಈ ಸುಟ್ಟ ಗಾಯವನ್ನ ಅಥವಾ ಸುಟ್ಟಿದನ್ನು ಇಗ್ನೋರ್ ಮಾಡುತ್ತಾರೆ. ಆದ್ದರಿಂದ ಕಲೆಗಳು ಉಳಿಯುತ್ತದೆ. ಸುಟ್ಟ ತಕ್ಷಣ ಆ ಜಾಗ ಕೆಂಪಾಗಿತ್ತದೆ ಹಾಗೂ ಗುಳ್ಳೆ ಆಗುವಂತ ಚಾನ್ಸಸ್ ಹೆಚ್ಚಿರುತ್ತದೇ. ಬರಿ ಅಡುಗೆ ಮನೆಯಲ್ಲಿ ಮಾತ್ರವಲ್ಲದೆ ಐರನ್ ಮಾಡ್ಬೇಕಾದ್ರೂ ಕೆಲವೊಮ್ಮೆ ಕೈ ಸುಡುತ್ತದೆ. ಅಥವಾ ಕಾಫಿ ಟೀ ಮೈ ಮೇಲೆ ಬಿದ್ದಾಗ ಬೆಂಕಿ ಕಿಡಿ ತಗುಲಿದಾಗ, ಎಣ್ಣೆ ಹಾರಿದಾಗ ಸುಡುವುದು ಕಾಮನ್. ಇಂತಹ ಸಂದರ್ಭದಲ್ಲಿ ತಕ್ಷಣಕ್ಕೆ ಗಾಯದ ನೋವನ್ನ ತಡೆಯಲು ಹಾಗೂ ಗುಳ್ಳೆ ಆಗಬಾರದು ಅಂದ್ರೆ ಯಾವ ರೀತಿ ಮನೆ ಮದ್ದನ್ನು ಅನುಸರಿಸಬೇಕು ಅನ್ನೋದು ಹೀಗಿದೆ.
![](https://pratidhvani.com/wp-content/uploads/2024/05/IMG_7490.jpeg)
ಐಸ್
ಅಕಸ್ಮಾತ್ ಆಗಿ ಸುಟ್ಟಾಗ ತಕ್ಷಣದ ಪರಿಹಾರ ಅಂದ್ರೆ ಐಸ್ ಕ್ಯೂಬನ್ನ ಆ ಜಾಗದಲ್ಲಿ ಇಡಬೇಕು..ಕೆಲವು ನಿಮಿಷಗಳ ಕಾಲ ಹಾಗೆ ಬಿಡಬೇಕು. ಇದರಿಂದ ಉರಿ ಬೇಗನೆ ಕಡಿಮೆಯಾಗುತ್ತೆ ಹಾಗೂ ಗುಳ್ಳೆ ಆಗುವುದು ಕೂಡ ತಪ್ಪುತ್ತದೆ .ಸುಟ್ಟ ಗಾಯದಲ್ಲಿ ಏನಾದರೂ ಗುಳ್ಳೆ ಆದರೆ ಅದರಿಂದ ಪಸ್ ಆಗುವಂಥದ್ದು ಅಥವಾ ನೀರು ಬರುವಂತ ಚಾನ್ಸಸ್ ತುಂಬಾ ಇರುತ್ತೆ.
![](https://pratidhvani.com/wp-content/uploads/2024/05/IMG_7492-1.jpeg)
ಅಲೋವೆರಾ
ಸುಟ್ಟ ಗಾಯಕ್ಕೆ ಉತ್ತಮ ಮದ್ದು ಅಂದ್ರೆ ಅಲೋವೆರಾ. ಲೋಳೆರಸ ತಕ್ಷಣಕ್ಕೆ ಉರಿಯನ್ನು ಕಡಿಮೆ ಮಾಡುತ್ತದೇ ಹಾಗೂ ರಕ್ತ ಪರಿಚಲನೆಯನ್ನ ಉತ್ತಮಗೊಳಿಸುತ್ತದೆ. ಇದಕ್ಕೆ ನೀವು ಅಲೋವೆರಾ ಜೆಲ್ ಗಿಂತ ಫ್ರೆಶ್ ಅಲೋವೆರವನ್ನ ಬಳಸುವುದು ಉತ್ತಮ.
![](https://pratidhvani.com/wp-content/uploads/2024/05/IMG_7493.jpeg)
ಜೇನುತುಪ್ಪ
ಇದು ಕೂಡ ಉತ್ತಮ ಮನೆಮದ್ದು ಸಾಕಷ್ಟು ಔಷಧಿಗಳನ್ನು ಗುಣಗಳನ್ನು ಜೇನುತುಪ್ಪ ಹೊಂದಿದ್ದು ,ಸುಟ್ಟಾಗ ಆ ಗಾಯಕ್ಕೆ ಹಚ್ಚುವುದರಿಂದ ಗಾಯ ಬೇಗನೆ ನಿವಾರಣೆ ಆಗುತ್ತದೆ. ಹಾಗೂ ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶವಿದ್ದು ಈ ಬ್ಯಾಕ್ಟೀರಿಯಗಳಿಂದ ಯಾವುದೇ ರೀತಿಯ ತೊಂದರೆ ಆಗುವುದನ್ನು ತಡೆಗಟ್ಟುತ್ತದೆ ಮಟ್ಟು ಮಾರ್ಕ್ ಕೂಡ ಉಳಿಯುವುದಿಲ್ಲ.
![](https://pratidhvani.com/wp-content/uploads/2024/05/IMG_7494.jpeg)
ಅರಿಶಿಣ
ಆಯುರ್ವೇದಿಕ್ ಮೂಲಿಕೆ ಯಾಗಿದ್ದು ಯಾವುದೇ ಒಂದು ಗಾಯವಾದರೂ ಕೂಡ ತಕ್ಷಣಕ್ಕೆ ಇದು ಪರಿಹಾರವನ್ನು ನೀಡುತ್ತದೆ. ಬಿದ್ದ ಗಾಯದಿಂದ ಬರುವ ಬ್ಲಡ್ ತಕ್ಷಣಕ್ಕೆ ನಿಲ್ಲುತ್ತದೆ. ಮತ್ತು ನೋವು ಕೂಡ ಕಡಿಮೆಯಾಗುತ್ತದೆ. ಅದೇ ರೀತಿ ಸುಟ್ಟ ಗಾಯದ ಮೇಲೆ ಅರಿಶಿನದ ಪುಡಿಯನ್ನು ಹಾಕುವುದರಿಂದ ಗಾಯ ಬೇಗನೆ ನಿವಾರಣೆಯಾಗುತ್ತದೆ.
![](https://pratidhvani.com/wp-content/uploads/2024/05/IMG_7495.jpeg)
ಒಟ್ಟಿನಲ್ಲಿ ಸುಟ್ಟು ಚಿಕ್ಕ ಗಾಯವಾದ್ರೂ ಕೂಡ ಇಗ್ನೋರ್ ಮಾಡ್ಬೇಡಿ.ಅದರಿಂದ ಮಾರ್ಕ್ ಹಾಗೆ ಉಳಿಯುತ್ತದೆ.