• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಬಾಲಿವುಡ್​ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್​ಗೆ ಹೃದಯಾಘಾತ

ಪ್ರತಿಧ್ವನಿ by ಪ್ರತಿಧ್ವನಿ
March 2, 2023
in ಸಿನಿಮಾ
0
ಬಾಲಿವುಡ್​ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್​ಗೆ ಹೃದಯಾಘಾತ
Share on WhatsAppShare on FacebookShare on Telegram

ಈಗೀಗ ಹೃದಯಾಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಅವಘಡಕ್ಕೆ ಅನೇಕ ಸ್ಟಾರ್​ ನಟರೂ ಸಹ ಬಲಿಯಾಗುತ್ತಿದ್ದಾರೆ. ಬಾಲಿವುಡ್​ನ ಖ್ಯಾತ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್​ ಕೂಡ ಆಘಾತಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದು ಒಂದೆರೆಡು ದಿನಗಳ ಹಿಂದೆ ತಮಗೆ ಹೃದಯಾಘಾತವಾಗಿತ್ತು ಎಂದು ಹೇಳಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ 47 ವರ್ಷದ ಸುಶ್ಮಿತಾ ಸೇನ್​ ಇಂತಹದ್ದೊಂದು ಮಾಹಿತಿಯನ್ನು ಶೇರ್​ ಮಾಡುತ್ತಿದ್ದಂತೆಯೇ ಫ್ಯಾನ್ಸ್​ ಶಾಕ್​ ಆಗಿದ್ದಾರೆ.

ADVERTISEMENT

ಇನ್​ಸ್ಟಾಗ್ರಾಂನಲ್ಲಿ ತಂದೆಯ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿರುವ ಸುಶ್ಮಿತಾ ಸೇನ್​, ಕ್ಯಾಪ್ಶನ್​ನಲ್ಲಿ ತಮ್ಮ ಹೃದಯಾಘಾತದ ಕತೆಯನ್ನು ಹಂಚಿಕೊಂಡಿದ್ದಾರೆ. ನಿಮ್ಮ ಹೃದಯವನ್ನು ನೀವು ಯಾವಾಗಲು ಸಂತಸ ಮತ್ತು ಧೈರ್ಯದಲ್ಲಿ ಇಟ್ಟುಕೊಳ್ಳಬೇಕು. ಆಗ ಮಾತ್ರ ನಿಮ್ಮ ಕಷ್ಟದ ಸಂದರ್ಭದಲ್ಲಿ ಅದು ನಿಮ್ಮೊಂದಿಗೆ ನಿಲ್ಲುತ್ತದೆ ಎಂದು ನನ್ನ ತಂದೆ ನನಗೆ ಎಂದಿಗೂ ಹೇಳುತ್ತಿದ್ದರು. ನಾನು ಕಳೆದ 2 ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದೆ. ನನಗೆ ಈಗ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಹಾಗೂ ಸ್ಟಂಟ್​ ಕೂಡ ಅಳವಡಿಸಲಾಗಿದೆ. ಇನ್ನೊಂದು ವಿಶೇಷ ಅಂದರೆ ನನ್ನ ಹೃದ್ರೋಗ ತಜ್ಞರು ನನ್ನ ಹೃದಯ ವಿಶಾಲವಾಗಿದೆ ಎಂದು ಹೇಳಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.

199ರಲ್ಲಿ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ್ದ ನಟಿ ಸುಶ್ಮಿತಾ ಸೇನ್​ ಬಳಿಕ ಆಯ್ಕೆ ಮಾಡಿಕೊಂಡಿದ್ದು ಬಾಲಿವುಡ್​ ಕ್ಷೇತ್ರವನ್ನ, ಬಿವಿ ನಂಬರ್​ 1, ಡು ನಾಟ್ ಡಿಸ್ಟರ್ಬ್, ಮೈ ಹೂ ನಾ, ಮೈನೆ ಪ್ಯಾರ್ ಕ್ಯೂನ್ ಕಿಯಾ ಮತ್ತು ತುಮ್ಕೋ ನಾ ಭೂಲ್ ಪಾಯೆಂಗೆ ಮತ್ತು ನೋ ಪ್ರಾಬ್ಲಮ್‌ ಸೇರಿದಂತೆ ಇನ್ನು ಸಾಕಷ್ಟು ಸಿನಿಮಾಗಳಲ್ಲಿ ಸುಶ್ಮಿತಾ ಸೇನ್​​ ನಟಿಸಿದ್ದಾರೆ. ಮದುವೆಯಾಗದೇ ಇದ್ದರೂ ಸಹ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಿಂಗಲ್​ ಮದರ್​ ಆಗಿ ಇಬ್ಬರನ್ನೂ ಸಲಹುತ್ತಿದ್ದಾರೆ. 2000ನೇ ಇಸ್ವಿಯಲ್ಲಿ ರೆನಿ ಹಾಗೂ 2010ರಲ್ಲಿ ಅಲಿಸಾರನ್ನು ಸುಶ್ಮಿತಾ ಸೇನ್​ ದತ್ತು ಪಡೆದಿದ್ದಾರೆ. ಐಪಿಎಲ್​ ಸೃಷ್ಟಿಕರ್ತ ಲಲಿತ್​ ಮೋದಿ ಜೊತೆಯಲ್ಲಿ ವೆಕೇಶನ್​ ಮಾಡುವ ಮೂಲಕ ಸುಶ್ಮಿತಾ ಸೇನ್​ ಕೆಲವು ತಿಂಗಳುಗಳ ಹಿಂದೆ ಭಾರಿ ಸುದ್ದಿಯಾಗಿದ್ದರು.

View this post on Instagram

A post shared by Sushmita Sen (@sushmitasen47)

Tags: Bollywoodheart attackLalit ModiSushmita Sen
Previous Post

ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ ಮಾಡಿದ ಸಿಎಂ ಬೊಮ್ಮಾಯಿ..!

Next Post

ಕನ್ನಡಿಗರ ಪಾಲಿಕೆ ಬಕಾಸುರರಾದ 40% ಸರ್ಕಾರ: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ  ವಾಗ್ದಾಳಿ

Related Posts

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು
ಸಿನಿಮಾ

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು

by ಪ್ರತಿಧ್ವನಿ
May 21, 2026
0

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರ ದಾಂಪತ್ಯ ಜೀವನದ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಹಿನ್ನೆಲೆಯಲ್ಲಿ ನಟ ದರ್ಶನ್...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

May 19, 2026
ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

May 19, 2026
Next Post
ಕನ್ನಡಿಗರ ಪಾಲಿಕೆ ಬಕಾಸುರರಾದ 40% ಸರ್ಕಾರ: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ  ವಾಗ್ದಾಳಿ

ಕನ್ನಡಿಗರ ಪಾಲಿಕೆ ಬಕಾಸುರರಾದ 40% ಸರ್ಕಾರ: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ  ವಾಗ್ದಾಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada