ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ಬಿಜೆಪಿಗೆ (BJP) ಕೆಲವು ಅಚ್ಚರಿಯ ಫಲಿತಾಂಶಗಳನ್ನ ನೀಡಿದೆ . ಆ ಪೈಕಿ ಗೆಲುವಿನ ನಿರೀಕ್ಷೆಯೇ ಇಲ್ಲದೆ ಗೆದ್ದು ಬಂದ ಗೋವಿಂದ ಕಾರಜೋಳ (Govinda karajola) ಬಿಜೆಪಿಯ ಜೋಳಿಗೆಗೆ ಚಿತ್ರದುರ್ಗ ಕ್ಷೇತ್ರವನ್ನು ಸೇರ್ಪಡೆ ಮಾಡಿದ್ದಾರೆ.
ಚಿತ್ರದುರ್ಗ (Chitradurga) ಲೋಕಸಭಾ ಕ್ಷೇತ್ರಕ್ಕೆ ಬಾಗಲಕೋಟೆ (Bagalakot) ಮೂಲದವರಾದ ಗೋವಿಂದ ಕಾರಜೋಳ ಹೆಸರನ್ನ ಬಿಜೆಪಿ ಅಂತಿಮಗೊಳಿಸಿದಾಗ ,ಗೆಲುವಿನ ಯಾವ ನಿರೀಕ್ಷೆಯು ಇರಲಿಲ್ಲ. ಕಾರಣ ಚಿತ್ರದುರ್ಗ ಕ್ಷೇತ್ರದ ಜನರಿಗೆ ಗೋವಿಂದ ಕಾರಜೋಳ ಅವರ ಪರಿಚಯ ಅಷ್ಟಕಷ್ಟೇ ಎಂಬುದು .ಹೀಗಾಗಿ ಕಾಂಗ್ರೆಸ್ನ (Congress) ಅಭ್ಯರ್ಥಿ ಚಂದ್ರಪ್ಪ (Chandrappa) ಗೆಲುವಿನ ಹಾದಿ ಸುಗಮ ಎಂಬ ಅಭಿಪ್ರಾಯವಿತ್ತು.
ಆದರೆ ಅಚ್ಚರಿ ಎಂಬಂತೆ ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಗೋವಿಂದ ಕಾರಜೋಳ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ರನ್ನ ಮಣಿಸಿ ವಿಜಯ ಸಾಧಿಸಿದ್ದಾರೆ. ಆ ಮೂಲಕ ಬಿಜೆಪಿಯು ನಿರೀಕ್ಷೆ ಇಟ್ಟಿರದ ಕ್ಷೇತ್ರ ಅಚ್ಚರಿ ಎಂಬಂತೆ ಬಿಜೆಪಿಯ ಪಾಲಾಗಿದೆ.