ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಭೇಟಿಯಾಗಿರುವ ನಟಿ ಭಾವನಾ ಅವರು ಮಂಗಳವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಸುರ್ಜೆವಾಲ, ‘ ಕಾಂಗ್ರೆಸ್ ಮಾಜಿ ಕಾರ್ಯಕರ್ತೆ, ಕನ್ನ ಡದ ನಟಿ ಭಾವನಾ ರಾಮಣ್ಣ ಅವರು ನನ್ನ ನ್ನು ಭೇಟಿಯಾದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸೇರಿ, ಪಕ್ಷಕ್ಕಾ ಗಿ ದುಡಿಯುವ ಸಂಕಲ್ಪ ವನ್ನು ಅವರು ಮಾಡಿದ್ದಾರೆ. ಪ್ರ ತಿಯೊಬ್ಬರ ಸೇರ್ಪಡೆಯಿಂದ ಕಾಂಗ್ರೆಸ್ ಪ್ರಾಬಲ್ಯ ಪಡೆಯಲಿದೆ ಎಂದು ನಾನು ಭಾವಿಸಿದ್ದೇ ನೆ. ಭಾವನಾ ಅವರಿಗೆ ಶುಭಾಶಯಗಳು,‘ ಎಂದು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ನಲ್ಲೇ ಇದ್ದ ಭಾವನಾ 2018ರಮೇ 10ರಂದು ಬಿಜೆಪಿ ಸೇರಿದ್ದ ರು. ಈಗ ಮತ್ತೆ ಮರಳಿ ಗೂಡು ಸೇರಿರುವ ಭಾವನ ಮುಂದೆ ಪರಿಷತ್ ಚುನಾವಣೆ ನಿಲ್ಲಲಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹಾನಗಲ್ ಸೋಲಿನ ಬಳಿಕ ತನ್ನ ಪ್ರಾಭಲ್ಯವನ್ನು ಕಳೆದುಕೊಳ್ಳುತ್ತಿರುವ ಹೊತ್ತಿನ್ನಲ್ಲೇ ಈ ಬೆಳವಣಿಗೆಯಾಗಿದೆ.