ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಸಿಎಂ ಆಗುವ ಪಟ್ಟಿಯಲ್ಲಿ ಡಿ.ಕೆ ಶಿವಕುಮಾರ್ (DK Shivakumar) ಟವೆಲ್ ಹಾಕೊಂಡು ಕಾಯುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ (Siddaramaiah) ಮಾತ್ರ ನಾನೇ ಐದು ರ‍್ಷಗಳ ಕಾಲ ಸಿಎಂ ಎನ್ನುವ ಸಂದೇಶ ನೀಡಿದ್ದರು. ಆದರೆ ಕಾಂಗ್ರೆಸ್ (Congress) ಶಾಸಕರು ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಸೇರಿದಂತೆ ಇಬ್ಬರ ಪರವಾಗಿಯೂ ಬ್ಯಾಟಿಂಗ್ ಮಾಡುವುದು ರ‍್ವೇ ಸಾಮಾನ್ಯ. ಆದರೆ ಬಿಜೆಪಿ ಶಾಸಕರು ಮಾತ್ರ ಪರಮೇಶ್ವರ್ (Dr G Parameshwar) ಬಗ್ಗೆ ಬ್ಯಾಟಿಂಗ್ ಮಾಡಿದ್ದಾರೆ.
ಗೃಹ ಸಚಿವ ಡಾ ಜಿ ಪರಮೇಶ್ವರ್ ಪರ ಬಿಜೆಪಿ ಶಾಸಕ ಸುರೇಶ್ ಗೌಡ (Suresh Gowda) ಬ್ಯಾಟ್ ಬೀಸಿದ್ದಾರೆ. ಪರಮೇಶ್ವರ್ ಸಜ್ಜನ ರಾಜಕಾರಣಿ ಎಂದಿರುವ ಸುರೇಶ್ ಗೌಡ, ಅವರನ್ನ ಸಿಎಂ ಮಾಡಬಾರದು ಅಂತಾನೆ ಹೋಂ ಮಿನಿಸ್ಟರ್ ಮಾಡಿ ಕೂರಿಸಿದ್ದಾರೆ. ಇದೀಗ ಜಾತಿ ಸಂಖ್ಯೆ ಹೊರ ಬಿದ್ದಿದೆ ಅದರಲ್ಲಿ ದಲಿತರ ಸಂಖ್ಯೆ 1 ಕೋಟಿ 8 ಸಾವಿರ ಇದೆ ಎನ್ನಲಾಗಿದೆ. ಹಾಗಿದ್ರೆ ಯಾರು ಸಿಎಂ ಆಗ್ಬೇಕು..? ಪರಮೇಶ್ವರ್ ಅವರೇ ಪ್ರತಿ ಸ್ರ‍್ಧಿ ಇದ್ದದ್ದು. ಅವರನ್ನ ಸಿಎಂ ಮಾಡ್ಬೇಕಾಗುತ್ತೆ ಅಂತಾನೆ, ದಿನಬೆಳಗಾದ್ರೆ ಕೋಮು ಗಲಭೆಗೆ ಉತ್ತರ ಕೊಟ್ಟುಕೊಂಡು ನೆಮ್ಮದಿ ಕಳೆದು ಅಂತ ಕೂರಿಸಿದ್ದಾರೆ ಎಂದಿದ್ದಾರೆ.
ಪರಮೇಶ್ವರ್ ಸಜ್ಜನ ರಾಜಕಾರಣಿ ಅವರ ಬಗ್ಗೆ ನಾನು ಮಾತನಾಡಲ್ಲ.. ಸಿಎಂ ಸಿದ್ದರಾಮಯ್ಯ ಅವರ ತುಷ್ಟೀಕರಣ ರಾಜಕಾರಣದಿಂದಲೇ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ. ಇದೀಗ ಬಾಂಬ್ ಬ್ಲಾಸ್ಟ್ ಆಗಿದೆ ಅಂದ್ರೆ ಅದಕ್ಕೆ ಕಾರಣ ಸಿದ್ದರಾಮಯ್ಯನವರ ತುಷ್ಟೀಕರಣ ನೀತಿ. ಕೆ.ಜೆ ಹಳ್ಳಿ, ಡಿ.ಜೆ ಹಳ್ಳಿ ಗಲಾಟೆಯಲ್ಲಿ ಭಾಗಿಯಾಗಿದ್ದವರನ್ನು ಬಿಡುಗಡೆ ಮಾಡಿ ಅಂತ ಡಿಸಿಎಂ ಪತ್ರ ಬರೆಯುತ್ತಾರೆ.. ಬಾಂಬ್ ಬ್ಲಾಸ್ಟ್‌ನಲ್ಲಿ ಇರೋರನ್ನ ನನ್ನ ಬ್ರದರ್ ಅಂತಾರೆ. ಸಿದ್ದರಾಮಯ್ಯ ರ‍್ಕಾರಕ್ಕೆ ಕಾಂಗ್ರೆಸ್ ಶಾಸಕರ ಸಹಮತವೇ ಇಲ್ಲ ಎಂದಿದ್ದಾರೆ.
#Congress #DrGParameshwar #CM #DKShivakumar #Siddaramaiah #SureshGowda #Tumkur #MLA #Politics #