ಬೈಲುಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಹೊನ್ನೂರು ಕಾವಲನ್ ನಲ್ಲಿ ಘಟನೆ.ಕೊಪ್ಪ ನಿವಾಸಿ ಜಯಣ್ಣ ಅವರ ಪುತ್ರ ಸುರೇಶ್ (40) ಹಾಗೂ ಅವರ ಪತ್ನಿ ಪಲ್ಲವಿ (28) ಮೃತ ದಂಪತಿ.
ದೊಡ್ಡಹೊನ್ನೂರು ಕಾವಲ್ ನ ಜಮೀನಿನ ಹಳೆಯ ಖಾಲಿ ಮನೆಯೊಂದರಲ್ಲಿ ನೇಣಿಗೆ ಧರಣಾದ ದಂಪತಿ.ಮೂಲಗಳ ಪ್ರಕಾರ ರಿಯಲ್ ಎಸ್ಟೇಟ್ ಮಾಫಿಯಾದ ಒತ್ತಡ, ಉದ್ಯಮದಲ್ಲಿ ನಷ್ಟ, ಸಾಲಗಾರರ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ.ಈ ಸಂಬಂಧ ಡೆತ್ ನೋಟ್ ಬರೆದಿಟ್ಟಿರುವ ಸುರೇಶ್.
ಪೊಲೀಸರ ತನಿಖೆಯಿಂದ ಘಟನೆಗೆ ಕಾರಣ ತಿಳಿದುಬರಲಿದೆ.ಮೃತದೇಹಗಳನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.ಮೃತ ಸುರೇಶ್ ದಂಪತಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.