ಈಗಾಗಲೇ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಹೆಚ್ ಡಿ ರೇವಣ್ಣ (HD Revanna) ಕುಟುಂಬಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal revanna) ಎಸ್ ಐ ಟಿ (SIT) ಕಸ್ಟಡಿಯಲ್ಲಿದ್ದು ,ಇದೀಗ ಸೂರಜ್ ರೇವಣ್ಣ (Suraj revanna)ವಿರುದ್ಧ ಕೂಡ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬರ್ತಿದೆ.
ಇದೊಂದು ಸಲಿಂಗ ಲೈಂಗಿಕ ಕಿರುಕುಳದ ಆರೋಪವಾಗಿದ್ದು, ಇಲ್ಲಿ ದೂರು ನೀಡಿರೋದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ (Shivakumar). ಹೌದು, ಯುವಕನೊಬ್ಬ ಕೆಲಸ ಕೇಳುವ ನೆಪದಲ್ಲಿ ಸೂರಜ್ ರೇವಣ್ಣ ಬಳಿ ಹೋಗಿ ಬಂದವನು, ನಂತರ ೫ ಕೋಟಿ ಕೊಡಬೇಕು, ಇಲ್ಲವಾದ್ರೆ ನಿಮ್ಮ ಮೇಲೆ ಸಲಿಂಗ ಲೈಂಗಿಕ ಕಿರುಕುಳದ ಆರೋಪ ಮಾಡುವೆ ಎಂದು ಬ್ಲ್ಯಾಕ್ಮೇಲ್ ಮಾಡಿದ್ದಾನೆ ಅಂತ ಆರೋಪಿಸಿ ಸೂರಜ್ ರೇವಣ್ಣ ಆಪ್ತ ಯುವಕನ ವಿರುದ್ಧ ದೂರು ದಾಖಲಿಸಿದ್ದಾನೆ.
ಈತನ ಬಳಿ ವ್ಯಾಟ್ಸ್ಯಾಪ್ ಚಾಟಿಂಗ್ ನ ಒಂದಷ್ಟು ಸ್ಕ್ರೀನ್ ಶಾಟ್ ಗಳಿದ್ದು, ಈ ಮೂಲಕ ತನಗೆ ೫ ಕೋಟಿ ಅಥವಾ ಕನಿಷ್ಠ ೨.೫ ಕೋಟಿ ಕೊಡಬೇಕು ಎಂದು ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಇದೊಂದು ಸುಳ್ಳು ಲೈಂಗಿಕ ದೌರ್ಜನ್ಯದ ಆರೋಪ ಎಂದು ಸದ್ಯ ದೂರು ನೀಡಿದ್ದು, ಮತ್ತೆ ರೇವಣ್ಣ ಕುಟುಂಬಕ್ಕೆ ಮುಜುಗರ ಎದುರಾಗಿದೆ.