ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜುಲೈ 4, ಸೋಮವಾರದಂದು ಬಹುಮತ ಸಾಬೀತುಪಡಿಸಲು ಸೂಚಿಸಲಾಗಿದೆ. ಇದರೊಂದಿಗೆ ಏಕನಾಥ್ ಶಿಂಧೆಗೆ ಬಹುಮತ ಸಾಬೀತು ಮಾಡಲು ಮೂರು ದಿನ ಮಾತ್ರ ಕಾಲಾವಕಾಶ ಇದೆ. ಇತ್ತ ಠಾಕ್ರೆ ಬಣ ಶಿವಸೇನೆಯ ಸಿಂಧೆ ಸೇರಿದಂತೆ 16 ಬಂಡಾಯ ಶಾಸಕರನ್ನು ವಜಾಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.
ಶಿವಸೇನೆಯ 39 ಬಂಡಾಯ ಶಾಸಕರ ವಿರುದ್ಧ ಸಲ್ಲಿಕೆಯಾಗಿರುವ ಅನರ್ಹತೆ ಅರ್ಜಿಯನ್ನು ಉಪಸಭಾಪತಿಯವರು ತೀರ್ಮಾನಿಸುವವರೆಗೆ ಅವರನ್ನು ಅಮಾನತುಗೊಳಿಸುವಂತೆ ಕೋರಿ ಎಂವಿಎ ಇಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಏಕನಾಥ್ ಶಿಂಧೆ ಬಣದಿಂದಲೂ ಅರ್ಜಿ ಸಲ್ಲಿಸಲಾಗಿತ್ತು. ಜುಲೈ 11 ರಂದು ಮಾತ್ರ ಮಹಾರಾಷ್ಟ್ರ ವಿಷಯದ ಅರ್ಜಿಗಳನ್ನು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಶಿವಸೇನಾ ಪಕ್ಷದೊಳಗೆ ಬಂಡಾಯ ಎದ್ದು ಇದೀಗ ಬಿಜೆಪಿ ಜೊತೆ ಸರಕಾರ ರಚಿಸಿರುವ ಏಕನಾಥ್ ಶಿಂದೆ ಬಣದಲ್ಲಿ 50 ಶಾಸಕರಿದ್ದಾರೆ. ಬಿಜೆಪಿ 106 ಶಾಸಕರನ್ನು ಹೊಂದಿದೆ. ಬಹುಮತಕ್ಕೆ ಬೇಕಾದ 145 ಸ್ಥಾನಗಳು ಶಿಂಧೆ ಸರಕಾರದ ಬಳಿ ಇದೆ. ಆದರೆ, ಸೋಮವಾರ ಸುಪ್ರೀಂ ಕೋರ್ಟ್ ಶಿವಸೇನಾ ಭಿನ್ನಮತೀಯರನ್ನು ಅನರ್ಹಗೊಳಿಸಿದರೆ ಆಗ ಹೊಸ ಸಾಧ್ಯತೆ ತೆರೆದುಕೊಳ್ಳಬಹುದು. ಆದರೆ, ಶಿವಸೇನೆಯ 55 ಶಾಸಕರಲ್ಲಿ 39 ಮಂದಿ ತಮ್ಮ ಜೊತೆ ಇದ್ದಾರೆ.