ಮುಡಾ (Muda) ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ (Siddaramaiah) ಪತ್ನಿ ಮೇಲಿನ ಇಡಿ (ED) ಕೇಸ್ ಅನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಕೆ ಬ್ರದರ್ಸ್ (Dk brothers) ಪ್ರತಿಕ್ರಿಯಿಸಿದ್ದು ಇ.ಡಿ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.

ಜಾರಿ ನಿರ್ದೇಶನಾಲಯ ಪಾರದರ್ಶಕವಾಗಿ ಪರಿಶೀಲನೆ ಮಾಡಬೇಕು.ಆದ್ರೆ ರಾಜಕೀಯ ಒತ್ತಡಕ್ಕೆ ಕೆಲಸ ಮಾಡಬಾರದು ಅಂತಾ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.ಈ ಬಗ್ಗೆ ರಾಮನಗರದಲ್ಲಿ ಮಾತನಾಡಿದ ಅವರು ನಂದೇ ಕೇಸ್ ಏನಾಯಿತು..?ನನ್ನನ್ನೇ ತಿಹಾರ್ ಜೈಲಿಗೆ ಕಳುಹಿಸಿದ್ರು. ಈಗ ನನ್ನ ಮೇಲಿನ ಕೇಸ್ ವಜಾ ಆಯ್ತು, ಅದನ್ನ ಅನುಭವಿಸಿದವರಿಗೆ ಮಾತ್ರ ಗೊತ್ತು ಎಂದಿದ್ದಾರೆ.

ಈ ಇ.ಡಿಯವರು ಯಾಕೆ ಬಿಜೆಪಿ, ಜನತಾದಳ ಒಬ್ಬರ ಮೇಲೂ ಕೂಡ ಇದುವರೆಗೂ ಕೇಸ್ ಮಾಡಿಲ್ಲ. ಕೇವಲ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿ ಕಾಂಗ್ರೆಸ್ ಮಾತ್ರ ಮೇಲೆ ಕೇಸ್ ಹಾಕ್ತಾರೆ ಅಂತಾ ಡಿ.ಕೆ ಶಿವಕುಮಾರ್ ಕಿಡಿಕಾರಿದ್ರು.

ಇನ್ನು ಈ ಬಗ್ಗೆ ಮಾತನಾಡಿದ ಮಾಜಿ ಡಿಸಿಎಂ ಡಿಕೆ ಸುರೇಶ್,ಅನೇಕ ಬಾರಿ ಸುಪ್ರೀಂ ಕೋರ್ಟ್ ಇಡಿ, ಸಿಬಿಐಗೆ ತೀಕ್ಷವಾಗಿ ತಿವಿದಿದೆ ಅಂತ ಹೇಳಿದ್ದಾರೆ. ಇಡಿ, ಸಿಬಿಐ ಎಲ್ಲವನ್ನೂ ಬಿಟ್ಟು ರಾಜಕೀಯ ಕೈಗೊಂಬೆಯಾಗಿ ಕೆಲಸ ಮಾಡ್ತಾಯಿದೆ.ಕೇಂದ್ರ ಸರ್ಕಾರ ವಿರೋಧ ಪಕ್ಷಗಳನ್ನ ಬುಗ್ಗು ಬಡಿಯಲು ಇಡಿಯನ್ನ ಬಳಸುತ್ತಿದೆ..ಇದು ಎಲ್ಲರಿಗೂ ಅರ್ಥ ಆಗಿದೆ ಎಂದಿದ್ದಾರೆ.