ಭಾರತ ಸುಪ್ರೀಂ ಕೋರ್ಟ್ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಸಂಬಂಧ ಕೊಲಿಜಿಯಂ ಮಾಡಿದ ಶಿಫಾರಸುಗಳ ಬಗ್ಗೆ ಊಹಾತ್ಮಕ ವರದಿ ಪ್ರಕಟಿಸಿದ ಮಾಧ್ಯಮಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೇಮಕಾತಿ ಪ್ರಕ್ರಿಯೆ ಇನ್ನೂ ನಡೆಯುತ್ತಿದ್ದು ಹೆಸರುಗಳನ್ನು ಅಂತಿಮಗೊಳಿಸಿಲ್ಲ. ಮಾಧ್ಯಮಗಳಲ್ಲಿ ಇಂದು ಪ್ರಕಟವಾದ ವರದಿಗಳು ಸತ್ಯಕ್ಕೆ ದೂರವಾದದ್ದು. ಇದು ನ್ಯಾಯಮೂರ್ತಿಗಳು ಮತ್ತು ಶಿಫಾರಸು ಮಾಡಿದ ಇತರ ವ್ಯಕ್ತಿಗಳ ವೃತ್ತಿ ಜೀವನದ ಮೇಲೂ ಪರಿಣಾಮ ಬೀರಬಹುದು ಎಂದು ಅವರು ರಮಣ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನೇಮಕಾತಿಯ ಪ್ರಕ್ರಿಯೆ ಇನ್ನೂ ಮುಗಿದಿಲ್ಲ ಅದು ಪ್ರಗತಿಯಲ್ಲಿದೆ. ಇದು ಒಂದು ಪವಿತ್ರ ಪ್ರಕ್ರಿಯೆಯಾಗಿದ್ದು ನನಗೆ ತೀವ್ರ ಅಸಮಾಧಾನವಾಗಿದೆ. ಮಾಧ್ಯಮಗಳ ಊಹಾಪೋಹ ವರದಿಗಳ ಬಗ್ಗೆ ನನಗೆ ಕಳವಳ ಇದೆ.”ಎಂದು ನ್ಯಾಯಮೂರ್ತಿ ರಮಣ ಅವರು ಹೇಳಿದ್ದಾರೆ.
“ಹಿರಿಯ ಪತ್ರಕರ್ತರು ಇಂತಹ ಪ್ರಕ್ರಿಯೆಯನ್ನು ಊಹಿಸಿ ಬರೆಯದೇ ಇರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಅಂತಹ ಪತ್ರಕರ್ತರು ನಮ್ಮ ಪ್ರಜಾಪ್ರಭುತ್ವದ ಶಕ್ತಿ. ಊಹಾತ್ಮಕ ವರದಿಗಳನ್ನು ಪ್ರಕಟಿಸದ ಹಿರಿಯ ಪತ್ರಕರ್ತರಿಗೆ ಅವರು ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದರು.
ಬೆಳಿಗ್ಗೆಯಿಂದ ಸುಪ್ರೀಂಕೋರ್ಟ್ ನ ಕೊಲಿಜಿಯಂ ಸರ್ವೋಚ್ಚ ನ್ಯಾಯಾಲಯಕ್ಕೆ ನ್ಯಾಯಮೂರ್ತಿಗಳನ್ನಾಗಿ 9 ಹೆಸರುಗಳನ್ನು ಸರ್ಕಾರಕ್ಕೆ ಸಿಪಾರಸ್ಸು ಮಾಡಿದೆ ಅದರಲ್ಲಿ ಮೂವರು ಮಹಿಳೆಯರು ಕೂಡ ಇದ್ದಾರೆ ಎಂಬ ಸುದ್ದಿಗಳು ವ್ಯಾಪಕವಾಗಿ ವರದಿಯಾಗಿತ್ತು.