ಫ್ಯಾನ್ಸ್ಗೆ ‘ಬಾಬಾ’ ಗಿಫ್ಟ್
ಇಂದು ಸೂಪರ್ ಸ್ಟಾರ್ ರಜನಿಕಾಂತ್ ಅವರ 72ನೇ ಜನ್ಮದಿನ. 12 ಡಿಸೆಂಬರ್ 1950ರಂದು ಬೆಂಗಳೂರಿನಲ್ಲಿ ಜನಿಸಿದ ರಜನಿಕಾಂತ್ ಮರಾಠಿ ಕುಟುಂಬಕ್ಕೆ ಸೇರಿದವರು.
ಬೆಂಗಳೂರಿನ ಹನುಮಂತನಗರದಲ್ಲಿ ನೆಲೆಸಿದ್ದ ಇವರ ಮೂಲ ಹೆಸರು ಶಿವಾಜಿರಾವ್ ಗಾಯಕ್ ವಾಡ್. ಕಾಲೇಜು ಶಿಕ್ಷಣ ಮುಗಿಸಿದ ರಜನಿ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭಿಸಿದರು. ಆದರೆ, ಅವರಿಗಿದ್ದ ಸಿನಿಮಾದ ಸೆಳೆತ ಮದ್ರಾಸ್ಗೆ ತೆರಳಿ ಅಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆಯುವಂತೆ ಮಾಡಿತು.
1975ರಲ್ಲಿ ಬಿಡುಗಡೆಯಾದ ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ ನಟನೆ ಪ್ರಾರಂಭಿಸಿದ ರಜನಿಕಾಂತ್ 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಲೈವಾ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದ್ದು, 66 ಸಾವಿರ ನೋಂದಾಯಿತ ಅಭಿಮಾನಿ ಸಂಘಗಳನ್ನು ಹೊಂದಿದ್ದಾರೆ.
6 ಫಿಲ್ಮ್ ಫೇರ್ ಅವಾರ್ಡ್ ಜೊತೆಗೆ ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ರಜನಿಕಾಂತ್ ವಿಶ್ವ ಶ್ರೇಷ್ಠ ನಟನಾಗಿ ಖ್ಯಾತಿ ಗಳಿಸಿದ್ದಾರೆ.