ಸಮ್ಮರ್ ಶುರುವಾಗಿದೆ ಸೋ ಬಿಸಿಲಿನ ಶಾಖ ಕೂಡ ಈ ಬಾರಿಯೂ ಎಂದಿನಂತೆ ಜಾಸ್ತಿನೇ ಇದೆ ಸೊ ಬಿಸಿಲಿನಲ್ಲಿ ಸ್ವಲ್ಪ ದೂರ ಓಡಾಡಿದ್ರು ಕೂಡ ಸುಸ್ತಾಗುತ್ತೆ, ತಲೆನೋವು ಶುರುವಾಗುತ್ತೆ ಮುಖ ಕೆಂಪಗಾಗುತ್ತೆ ಇದರ ಜೊತೆಗೆ ಟ್ಯಾನ್ ಆಗುವಂಥದ್ದು. ಈ ಸಮಸ್ಯೆ ಪ್ರತಿಯೊಬ್ಬರಿಗೂ ಕೂಡ ಕಾಡುತ್ತೆ.
ಟಾನ್ ಆಗೋದನ್ನ ತಪ್ಪಿಸಲು ಸನ್ ಸ್ಕ್ರೀನ್ ಬಳಸ್ತೀವಿ, ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತೇವೆ , ಛತ್ರಿಯನ್ನು ಬಳಸ್ತೀವಿ ಆದರೂ ಕೂಡ ಈ ಬಿಸಿ ಶಾಖಕ್ಕೆ ಟ್ಯಾನ್ ಆಗ್ತಿವಿ ಹಾಗಾಗಿ ಟ್ಯಾನ್ ಆದರೆ ದುಬಾರಿ ಖರ್ಚು ಮಾಡುವ ಬದಲು ಮನೆಯಲ್ಲೇ ಕೆಲವೊಂದು ರೆಮಿಡೀಸ್ ನ ಮಾಡ್ಕೊಂಡ್ರೆ ಸನ್ ಟಾನ್ ನ ಬೇಗನೆ ತಡೆಗಟ್ಟಬಹುದು.
ಮೊಸರು ಮತ್ತು ಅರಿಶಿನ
ಮೊಸರು ನೈಸರ್ಗಿಕ ಸನ್ ಟ್ಯಾನ್ ರಿಮೂವರ್ ಆಗಿದೆ.. ಇದು ಪಿಗ್ಮೆಂಟೇಷನ್ , ಕಪ್ಪುಗಲೆಗಳನ್ನ ಕಡಿಮೆ ಮಾಡುತ್ತದೆ ಮತ್ತು ಸ್ಕಿನ್ ನಲ್ಲಿ ಇರುವಂತಹ ಆಯ್ಲಿನೆಸ್ ಕಡಿಮೆ ಮಾಡುತ್ತದೆ . ಎರಡು ಟೇಬಲ್ ಸ್ಪೂನ್ ನಷ್ಟು ಮೊಸರಿಗೆ ಚಿಟಿಕೆ ಅರಿಶಿಣವನ್ನ ಬೆರೆಸಿ ಮುಖಕ್ಕೆ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚುವುದರಿಂದ ಬೇಗನೆ ಟಾನ್ ಕಡಿಮೆಯಾಗುತ್ತದೆ.
ಕಾಫಿ ಪೌಡರ್ ಮತ್ತು ನಿಂಬೆರಸ
ಒಂದು ಟೇಬಲ್ ಸ್ಪೂನ್ ಅಷ್ಟು ಕಾಫಿ ಪೌಡರ್ ಗೆ ನಿಂಬೆರಸವನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಟ್ಯಾನ್ ಆಗಿರುವ ಜಾಗಕ್ಕೆ ಹಚ್ಚಿ ಹತ್ತು ನಿಮಿಷ ಬಿಟ್ಟು ಸ್ಕ್ರಬ್ ಮಾಡಿ ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಸನ್ ಟ್ಯಾನ್ ಬೇಗನೆ ಕಡಿಮೆಯಾಗುತ್ತೆ..
ಕಿತ್ತಳೆ ಹಣ್ಣಿನ ಸಿಪ್ಪೆ ಹಾಗೂ ಹಾಲು
ಸಮ್ಮರ್ ಅಂದ್ರೆ ಕಿತ್ತಲೆ ಹಣ್ಣಿನ ಸೀಸನ್ ಕೂಡ ಹೌದು.. ಹಾಗಾಗಿ ಕಿತ್ತಲೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಅದನ್ನ ಪುಡಿ ಮಾಡಿ, ಆ ಪುಡಿಗೆ ಸ್ವಲ್ಪ ಹಾಲನ್ನ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಟ್ಯಾನ್ ಆಗಿರುವ ಜಾಗಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ಸ್ಕ್ರಬ್ ಮಾಡಿ ಮತ್ತೆ ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ಟಾನ್ ರಿಮುವಾಗುತ್ತೆ..
ಟೊಮ್ಯಾಟೊ ರಸ
ಟೊಮೆಟೊ ರಸವನ್ನು ಪ್ರತಿದಿನ ನೀವು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದ ಅಥವಾ ಚರ್ಮದ ಹೊಳಪು ಜಾಸ್ತಿ ಆಗುತ್ತೆ . ಜೊತೆಗೆ ಯಾವುದೇ ಒಂದು ಕಪ್ಪು ಕಲೆಗಳಿದ್ರು ಕಡಿಮೆಯಾಗುತ್ತೆ. ಇನ್ನು ಸನ್ ಟಾನ್ ನಿವಾರಣೆಗೆ ರಾಮಬಾಣ ಅಂದ್ರೆ ತಪ್ಪಾಗಲ್ಲ..