ಪ್ರತಿದಿನ ತಪ್ಪದೇ ಸನ್ ಸ್ಕ್ರೀನ್ ಬಳಸುವುದು ಬಹಳ ಮುಖ್ಯ..ಆದರೆ ಒಂದಿಷ್ಟು ಜನ ಸನ್ ಸ್ಕ್ರೀನ್ ನಿರ್ಲಕ್ಷ್ಯ ಮಾಡುತ್ತಾರೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ಇದು ಚರ್ಮವನ್ನು ರಕ್ಷಣೆ ಮಾಡುತ್ತದೆ.ಮೇಕಪ್ ಮಾಡುವ ಮುನ್ನ ತಪ್ಪದೆ ಸನ್ ಸ್ಕ್ರೀನ್ ಹಚ್ಚುವಂತದ್ದು ಅತ್ಯಗತ್ಯ.
ಅದರಲ್ಲು ಬಿಸಿಲಿಗೆ ಹೋಗುವ ಅರ್ಧಗಂಟೆ ಮುನ್ನ ಸನ್ ಸ್ಕ್ರೀನ್ ಹಚ್ಚಬೇಕು.ಹಾಗೂ ಮುಖ್ಯವಾಗಿ ಬಿಸಲಲ್ಲಿ ಹೆಚ್ಚು ಗಂಟೆಗಳ ಕಾಲ ಇರ್ತೀವಿ ಅಂದ್ರೆ ಫೀಲ್ಡ್ ವರ್ಕ್ ಇದ್ದವರು 2 ಗಂಟೆಗೆ ಒಮ್ಮೆ ಸನ್ ಸ್ಕ್ರೀನ್ ಹಚ್ಚುವುದು ಉತ್ತಮ..ಇದರಿಂದ ನಿಮ್ಮ ತ್ವಚೆಯನ್ನು ಕಾಪಾಡಬಹುದು..ಹಾಗೂ ಸನ್ ಸ್ಕ್ರೀನ್ ಬಳಕೆಯಿಂದ ಏನೆಲ್ಲಾ ಲಾಭಗಳಿವೆ ಎಂಬುವುದರ ಮಾಹಿತಿ ಇಲ್ಲಿದೆ..
ಬಿಸಿಲು ಮತ್ತು ಗುಳ್ಳೆಗಳು
ಪ್ರತಿದಿನ ತಪ್ಪದೆ ಸನ್ ಸ್ಕ್ರೀನ್ ಬಳಸುವುದರಿಂದ ಸೂರ್ಯನ ಕಿರಣಗಳಿಂದ ತ್ವಚೆಯನ್ನ ರಕ್ಷಿಸುತ್ತದೆ, ಟ್ಯಾನ್ ಆಗುವುದನ್ನು ತಡೆಯುತ್ತದೆ ,ಹಾಗೂ ಹೆಚ್ಚು ಜನಕ್ಕೆ ಬಿಸಿಲಿನಲ್ಲಿ ಹೋದ ತಕ್ಷಣ ತ್ವಚೆಯಲ್ಲಿ ಅಥವಾ ಚರ್ಮದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳಾಗುತ್ತದೆ ಇವುಗಳನ್ನು ಕೂಡ ಸನ್ ಸ್ಕ್ರೀನ್ ತಡೆಗಟ್ಟುತ್ತದೆ.
ಏಜಿಂಗ್ ಪ್ರಾಬ್ಲಮ್
ಕೆಲವೊಬ್ಬರು ತಮ್ಮ ತ್ವಜೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ.ಇದರಿಂದ ತಾವೆ ತಮ್ಮ ಅಂದವನ್ನು ಕಡಿಮೆ ಮಾಡಿಕೊಳ್ತಾರೆ ಅದರಲ್ಲು ಒಂದಿಷ್ಟು ಜನಕ್ಕೆ ಚಿಕ್ಕ ಏಜ್ ಅಲ್ಲಿ ಸುಕ್ಕುಗಳು, ಸೂಕ್ಷ್ಮ ರೇಖೆಗಳು, ವಯಸ್ಸಿನ ಕಲೆಗಳು ಕಾಣಿಸಿಕೊಳ್ಳುತ್ತದೆ..ಇವುಗಳನ್ನು ತಡೆಗಟ್ಟಲು ಸನ್ ಸ್ಕ್ರೀನ್ ಅಗತ್ಯ..
ಹೈಪರ್ಪಿಗ್ಮೆಂಟೇಶನ್
ಹೆಚ್ಚು ಜನಕ್ಕೆ ಕಾಡುವಂತ ಸಮಸ್ಯೆ ಅಂದ್ರೆ ಪಿಗ್ಮೆಂಟೇಶನ್..ದೇಹದಲ್ಲಿ ಮೆಲನಿನ್ ಉತ್ಪತ್ತಿ ಹೆಚ್ಚಾದಾಗ ಪಿಗ್ಮೆಂಟೇಶನ್ ಕಾಡುತ್ತದೆ ಹಾಗೂ ಬಿಸಿಲಿನಲ್ಲಿ ಹೆಚ್ಚು ಒಗ್ಗಿದಾಗ ಕೂಡ ಕಪ್ಪು ಕಲೆ ಅಥವ ಭಂಗು ಕಾಣುತ್ತದೆ..ಹಾಗಾಗಿ ಸನ್ ಸ್ಕ್ರೀನ್ ನ ತಪ್ಪದೆ ಬಳಸುವುದರಿಂದ ಈ ಸಮಸ್ಯೆಗೆ ಗುಡ್ ಬೈ ಹೇಳಬಹುದು…
ಕಪ್ಪು ತ್ವಚೆ
ಬಿಸಿಲಿನಲ್ಲಿ ಹೆಚ್ಚಾಗಿ ಓಡಾಡುವುದರಿಂದ ಮುಖದಲ್ಲಿ ಹೊಳಪು ಕಡಿಮೆಯಾಗುತ್ತದೆ ಹಾಗೂ ತ್ವಚೆ ಕಪ್ಪಾಗುತ್ತದೆ ಮುಖದ ಹೊಳಪನ್ನ ಹಾಗೆ ಉಳಿಸಿಕೊಳ್ಳಲು ಹಾಗೂ ಬಣ್ಣವನ್ನು ಬದಲಾಗಲು ಅವಕಾಶ ಕೊಡದೆ ಇರಲು ಸನ್ ಸ್ಕ್ರೀನ್ ಬಳಸುವುದು ಉತ್ತಮ