ಇಂದು ಪವರ್ ಸ್ಟಾರ್ (power star), ಕರ್ನಾಟಕ ರತ್ನ (karnataka ratna) ದಿವಂಗತ ಡಾ. ಪುನೀತ್ ರಾಜ್‌ಕುಮಾರ್(puneeth rajkumar) ಹುಟ್ಟುಹಬ್ಬ, ಪುನೀತ್ ರಾಜ್ ಕುಮಾರ್ ನಮ್ಮನ್ನ ಅಗಲಿ ಇಂದಿಗೆ ಮೂರು ವರ್ಷ (3 years). ಆದರೆ ಅಪ್ಪು ಅಭಿಮಾನಿಗಳ ಮನದಲ್ಲಿ ಸದಾ ಅಜರಾಮರರಾಗಿದ್ದಾರೆ. ಅಪ್ಪು ನೆನಪಿನಾರ್ಥ ಈಡೀ ರಾಜ್ಯವೇ ಇಂದು ಸ್ಫೂರ್ತಿ ದಿನವನ್ನಾಗಿ ಆಚರಿಸುತ್ತಿದ್ದು, ಅಪ್ಪು ಫ್ಯಾನ್ಸ್ (appu fans) ರಾಜ್ಯ ಹಾಗೂ ದೇಶದ ಹಲವೆಡೆ ಸಾಮಾಜಿಕ ಸೇವೆ ಮೂಲಕ ಅಪ್ಪು ಹುಟ್ಟು ಹಬ್ಬವನ್ನ (Birthday) ಆಚರಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋನಲ್ಲಿ (kanteerava Studio) ಅದ್ದೂರಿಯಾಗಿ ತಯಾರಿ ಆರಂಭವಾಗಿದ್ದು, ಪುನೀತ್ರ ಸಮಾಧಿಯನ್ನು ಹೂಗಳಿಂದ ಅಲಂಕರಿಸಲಾಗಿದೆ. ಅಪ್ಪು ಸಮಾಧಿಗೆ ನಮನ ಸಲ್ಲಿಸೋದಕ್ಕೆ ಮಧ್ಯರಾತ್ರಿಯಿಂದಲೇ ನೂರಾರು ಅಭಿಮಾನಿಗಳು ಕಂಠೀರವ (kanteerava studio) ಬಳಿ ಬರ್ತಿದ್ದಾರೆ.
ಅನ್ನದಾನ, ರಕ್ತದಾನದ (blood donation) ಜೊತೆ ಕಂಠೀರವ ಸ್ಟುಡಿಯೋದಲ್ಲಿರೋ ಅಪ್ಪು ಪುಣ್ಯಭೂಮಿಗೆ ಕುಟುಂಬಸ್ಥರು ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಇಂದು 10:30ಕ್ಕೆ ಅಪ್ಪು ಅಭಿಮಾನಿಗಳಿಂದ ಡಾ. ರಾಜ್ ಸ್ಮಾರಕದಿಂದ (Dr.Rajkumar) ಪ್ರಸನ್ನ ಥಿಯೇಟರ್ ವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಅಪ್ಪು ಹಾಡುಗಳಿಗೆ ಡಿಜೆ ಸೌಂಡ್ (D) sound) ಸಿಸ್ಟಮ್‌ನೊಂದಿಗೆ ವಿಶೇಷ ನೃತ್ಯ ಪ್ರದರ್ಶನ ಮಾಡುತ್ತಾ ಚಿತ್ರಮಂದಿರದ ಒಳಗೆ 101 ತೆಂಗಿನಕಾಯಿ ಒಡೆದು ಅಭಿಮಾನಿಗಳು ಸಂಭ್ರಮಿಸಲಿದ್ದಾರೆ.
ಅಪ್ಪು ಸಮಾಧಿಗೆ ನಮನ ಸಲ್ಲಿಸಲು ಬರುವ ಅಭಿಮಾನಿಗಳಿಗೆ ಅನ್ನದಾನ ಮಾಡಲು ನಿರ್ಧರಿಸಿರುವ ದೊಡ್ಡನೆ ಕುಟುಂಬ ಮೂರೂವರೆ ಸಾವಿರ ಕೆಜಿ (3500 kg) ಚಿಕನ್ ಬಿರಿಯಾನಿ(chicken biriyani) ತಯಾರಿಸಲು ಮುಂದಾಗಿದೆ. ಸುಮಾರು ಒಂದು ಲಕ್ಷ ಮಂದಿಗೆ (one lakh people) ಅನ್ನದಾನದ ವ್ಯವಸ್ಥೆ ನಡೆದಿದ್ದು, ಯುವರಾಜ್ ಕುಮಾರ್ (yuva rajkumar) ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ.