ಬೆಂಗಳೂರಲ್ಲಿ ವೀಲಿಂಗ್ (Bangalore boys wheeling) ಪುಂಡರ ಹಾವಳಿ ಹೆಚ್ಚಾಗಿದೆ.ಪ್ರತಿ ವೀಕೆಂಡ್ ನಲ್ಲಿ (Weekend plan) ಇದೇ ರೀತಿ ಪುಂಡರು ವೀಲಿಂಗ್ ಹಾವಳಿ ಶುರು ಮಾಡ್ತಿದ್ದರು. ಆದ್ರೆ ಈಗ ಸದ್ಯ ವೀಕ್ ಡೇಸ್ ನಲ್ಲೂ ಈ ಪುಂಡರ ಹಾವಳಿ ಹೆಚ್ಚಾಗ್ತಿದೆ.
ಅದರಲ್ಲೂ ಪ್ರಮುಖವಾಗಿ ನಗರದ ಫ್ಲೈ ಓವರ್ ಗಳ (Flyover) ಮೇಲೆಯೇ ಪುಂಡರು ಈ ರೀತಿ ಹೆಚ್ಚಾಗಿ ವೀಲಿಂಗ್ ಮಾಡ್ತಿದ್ದಾರೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹೆಲ್ಮೆಟ್ (Helmet) ಧರಿಸದೇ, ನಂಬರ್ ಪ್ಲೇಟ್ (Number plate) ಇಲ್ಲದೇ ಇರೋ ಬೈಕ್ ಗಳಲ್ಲಿ ಈ ರೀತಿ ವೀಲಿಂಗ್ ಮಾಡಲಾಗ್ತಿದೆ.
ಡಿಯೋ, ಹೋಂಡಾ ಆಕ್ಟಿವಾ, ಆರ್.ಎಕ್ಸ್ ಯಮಹಾ ಬೈಕ್ ಗಳಲ್ಲೆ ಪುಂಡರು ಈ ರೀತಿಯಾಗಿ ಹೆಚ್ಚಿನ ವೀಲಿಂಗ್ ಮಾಡ್ತಿದ್ದಾರೆ.ಇಷ್ಟು ಮಾತ್ರವಲ್ಲದೇ ಬೈಕ್ ಹಿಂದೆ ಕೆಲವರು ಗರ್ಲ್ ಫ್ರೆಂಡ್ (Girlfriend) ಕೂರಿಸ್ಕೋಂಡು ಅಪಾಯಕಾರಿ ಬೈಕ್ ವೀಲಿಂಗ್ ಮಾಡ್ತಿದ್ದಾರೆ.
ಈ ಪುಂಡರ ಕೈನಲ್ಲಿ ಡ್ಯಾಗರ್ ಲಾಂಗ್ ಹಿಡಿದು ವೀಲಿಂಗ್ ಮಾಡೋದು,ಮಾರಕಾಸ್ತ್ರ ಬಳಸಿ ವೀಲಿಂಗ್ ಮಾಡ್ತಿರೋರು ಹಾಗೂ ಗರ್ಲ್ ಫ್ರೆಂಡ್ ಹಿಂದೆ ಕೂರಿಸ್ಕೊಂಡು ವೀಲಿಂಗ್ ಮಾಡುತ್ತಾ ಪುಂಡಾಟ ಮೆರೆದವರಿಗಾಗಿ ಪೊಲೀಸ್ ತಲಾಶ್ ನಡೆಸುತ್ತಿದ್ದಾರೆ. ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಸಂಚಾರಿ ಪೊಲೀಸರು ಸಿದ್ದತೆ ನಡೆಸಿದ್ದಾರೆ.