ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಅಪಘಾತ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಅಧಿಕಾರಿಗಳು ಹಾಗೂ ಆಡಳಿತ ವರ್ಗ ಕೊಂಚಮಟ್ಟಿಗೆ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ ಇದೀಗ ಇದಕ್ಕೆ ಪೂರಕ ಎಂಬಂತೆ ಇಂದು ಸಂಸದ ಸುಮಲತಾ ಅಂಬರೀಶ್ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ
ದಿಶಾ ಸಭೆಯಲ್ಲಿ ಅಧಿಕಾರಿಗೆ ಸಂಸದೆ ಕ್ಲಾಸ್ ತೆಗೆದುಕೊಂಡಿದ್ದು, ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದಂತಹ ಸಭೆಯಲ್ಲಿ ಈ ಘಟನೆ ನಡೆದಿದೆ ದಿನೇ ದಿನೇ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಸರಿಯಾದ ಇಲ್ಲ ಚರಂಡಿ ಕಾಮಗಾರಿಗಳು ಅಲ್ಲಲ್ಲಿ ಇನ್ನೂ ಬಾಕಿ ಇದೆ ಇದರ ನಡುವೆ ದಿನೇ ದಿನೇ ಅಪಘಾತಗಳಾಗಿ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ
ಮೊನ್ನೆ ಚೆನ್ನಪಟ್ಟಣದ ಬಳಿ ಒಂದು ಟ್ರಕ್ ನ ದೃಶ್ಯ ನೋಡಿದ್ರೆ ಮೈ ನಡುಗುತ್ತೆ, ರಸ್ತೆ ಇರದು ಜನರ ಅನುಕೂಲಕ್ಕೆ ಜನ ಪ್ರಾಣ ಕಳೆದುಕೊಳ್ಳುವುದಕಲ್ಲ ಆದಷ್ಟು ಬೇಗ ಹೆದ್ದಾರಿ ಸಮಸ್ಯೆಗಳನ್ನು ಸರಿಪಡಿಸಿ ಇಲ್ಲವಾದರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು
ಇದಾದ ಬಳಿಕ ಕೆಲ ಅಧಿಕಾರಿಗಳು ಸಬೂಬು ನೀಡಿದ್ದು ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುತ್ತೇವೆ. ಇದಕ್ಕೆ ಪೂರಕವಾಗಿ ಪೋಲಿಸ್ ಇಲಾಖೆ ಸ್ಪಂದಿಸುತ್ತಿದೆ ಅಪಘಾತ ತಡೆಯುವಲ್ಲಿ ನಾವು ಸಫಲರಾಗುತ್ತಿದ್ದೇವೆ, ಇನ್ನು ಮುಂದಿನ ದಿನಗಳಲ್ಲಿ ಜನರು ಪ್ರಾಣ ಕಳೆದುಕೊಳ್ಳುವ ಸಂಧಿಘ್ನ ಪರಿಸ್ಥಿತಿಗಳು ಬರುವುದು ತೀರ ಕಡಿಮೆಯಾಗಲಿದೆ ಎಂದು ಹೇಳಿಕೆಯನ್ನು ನೀಡಿದ್ದಾರೆ
ಒಟ್ಟಾರೆಯಾಗಿ ಇದೀಗ ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವಿಚಾರ ರಾಜ್ಯದ ಸಂಸದರು ಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಹೇಗಾದರೂ ಮಾಡಿ ಇಲ್ಲಿ ಅಪಘಾತ ನಡೆಯುತ್ತಿರುವ ಪ್ರಮಾಣವನ್ನು ತಾಗಿಸಬೇಕು ಎಂಬಂತ ನಿಟ್ಟಿನಲ್ಲಿ ಹಲವು ರೀತಿಯಾಗಿ ಆಲೋಚನೆಗಳನ್ನ ರೂಪಿಸುತ್ತಿದ್ದು ಈಗ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆದಷ್ಟು ಬೇಗ ಈ ಸಮಸ್ಯೆಗಳನ್ನ ಬಗೆಹರಿಸುವಂತೆ ಆಗಲಿ ಎಂಬುದಷ್ಟೇ ಸಾರ್ವಜನಿಕರ ಆಶಯವಾಗಿದೆ