ಮಂಡ್ಯ(Mandya) ಲೋಕಸಭಾ(Loka Saba) ಕ್ಷೇತ್ರದಿಂದ ನನಗೆ ಟಿಕೆಟ್(Ticket) ಸಿಗುವುದರಲ್ಲಿ ಡೌಟೇ ಇಲ್ಲ, ನನಗೆ ಮೈತ್ರಿ ಟಿಕೆಟ್ ಸಿಗುತ್ತೆ ಎಂದು ಸಂಸದೆ ಸುಮಲತಾ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದ್ದು, ಸುಮಲತಾ(Sumalatha) ಅವರ ಈ ಹೇಳಿಕೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಮಂಡ್ಯದಲ್ಲಿ ಈ ಸಂಬಂಧ ಮಾತನಾಡಿರುವ ಅವರು, ನಿನ್ನೆಯ ಸಭೆಯಲ್ಲಿ ಐದು ವರ್ಷದ ಜರ್ನಿಯಲ್ಲಿ ಏನಾಯಿತು, ಮುಂದಿನ ನಡೆ ಏನಾಗಿರಬೇಕು ಎಂಬ ಚರ್ಚೆಗಳು ಆಗಿದೆ. ಸಭೆಯಲ್ಲಿ ತುಂಬಾ ಪಾಸಿಟಿವ್ ಅಂಶಗಳು ಹೊರ ಬಂದಿದ್ದು, ಸಭೆಯಲ್ಲಿ ಬಿಜೆಪಿಯಿಂದ ಟಿಕೆಟ್ ತೆಗೆದುಕೊಂಡು ನಿಲ್ಲುವಂತೆ ಹೇಳಿದ್ರು. ಮಂಡ್ಯವನ್ನು ಬಿಡಬೇಡಿ, ನಾವು ನಿಮ್ಮನ್ನು ನಂಬಿದ್ದೇವೆ ಎಂದಿದ್ದಾರೆ. ಹೀಗಾಗಿ ಟಿಕೆಟ್ ಸಿಗುತ್ತೆ ಎಂಬ ಡೌಟ್ ನನಗಿಲ್ಲ, ನನಗೆ ಮೈತ್ರಿ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸ ಇದೆ. ಸಿಗುತ್ತೋ ಸಿಗಲ್ಲ ಅನ್ನೋ ಡೌಟೇ ಇಲ್ಲ.

ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಆದರೆ ನನ್ನ ಜೊತೆ ದ್ವೇಷ ಇರುತ್ತಾ. ಜೆಡಿಎಸ್(JDS) ಎನ್‌ಡಿಎ(NDA) ಒಂದು ಭಾಗ. ಅದೇ ರೀತಿ ನಾನು ಸಹ ಎನ್‌ಡಿಎ ಒಂದು ಭಾಗ. ಮಹಿಳಾ ಮಿಸಲಾತಿ ತಂದಿದ್ದು ಬಿಜೆಪಿ(BJP). ಹೀಗಾಗಿ ನನಗೆ ಮಂಡ್ಯ ಟಿಕೆಟ್‌ನ್ನು ಬಿಜೆಪಿ ನೀಡುತ್ತೆ ಎಂಬು ವಿಶ್ವಾಸ ಇದೆ. ಮೈತ್ರಿ ಅಂತ ಬಂದ ಮೇಲೆ ಜೆಡಿಎಸ್ ಅವರು ವಿಶ್ವಾಸ ತೋರಿಸುತ್ತಾರೆ. ನಾನು ಅಭ್ಯರ್ಥಿ ಆದ್ರೆ ಜೆಡಿಎಸ್ ಅವರನ್ನು ಹೋಗಿ ಕೇಳ್ತೀನಿ ಮೈತ್ರಿ ವಿಶ್ವಾಸದಿಂದ ಇರಿ ಎಂದು. ಮೈತ್ರಿಯಲ್ಲಿ ಜೆಡಿಎಸ್ ವಿಶ್ವಾಸದಲ್ಲಿ ಇರುತ್ತೆ ಎಂಬ ನಂಬಿಕೆ ಇದೆ. ಯಾರಿಗೆ ಟಿಕೆಟ್ ಎಂದು ಹೇಳಬೇಕಿರೋದು ನಾಯಕರು. ಅವರು ಎಲ್ಲವನ್ನು ನೋಡಿ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ನೀಡ್ತಾರೆ. ಜೆಡಿಎಸ್ ಅವರಿಗೆ ಟಿಕೆಟ್ ಆದ್ರೆ ಅವರು ನನ್ನ ಕೇಳಿದ್ರೆ ವಿಶ್ವಾಸದಲ್ಲಿ ಇರುತ್ತೇನೆ. ಇದು ಕೊನೆಯಲ್ಲಾ, ಮುಂದೆ ಏನಾಗುತ್ತೆ ನೋಡಿ ಎಂದಿದ್ದಾರೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲ ಕೇಳ್ತೀನಿ. ಅವರ ಕ್ಷೇತ್ರಕ್ಕೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಪುಟ್ಟಣ್ಣಯ್ಯ ಅವರ ಮೇಲೆ ಅಪಾರ ಗೌರವ ಇದೆ. ಪಾಂಡವಪುರದಲ್ಲಿ ನಾನು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಫೋರ್ಟ್ ಮಾಡಿದ್ದೆ. ಅವರಿಗೂ ಮನಸಾಕ್ಷಿ ಇರಬೇಕು ಅಲ್ವ? ಅಕ್ರಮ ಗಣಿಗಾರಿ ಪರ ನಾನು ಹೋರಾಡಿದ್ದೆ, ಆಗ ರೈತ ಸಂಘದ ಜೊತೆ ನಾನು ನಿಂತಿದ್ದೆ. ಈಗ ಸಪೋರ್ಟ್ ಮಾಡಿ ಎಂದು ನಾನು ಕೇಳುತ್ತೇನೆ ಎಂದು ತಿಳಿಸಿದ್ದಾರೆ.
#Mandya #LokaSaba #SumalathAmbreesh #BJPJDS #MPmandya