ಸುಲ್ತಾನ್ಪುರಿಯಲ್ಲಿ ಹೊಸವರ್ಷದ ದಿನವೇ 20ವರ್ಷದ ಯುವತಿಯೊಬ್ಬಳು ಅತ್ಯಂತ ದಾರುಣವಾಗಿ ಮೃತಪಟ್ಟಿದ್ದಳು.
ನವದೆಹಲಿ;ಸುಲ್ತಾನ್‌ಪುರಿ ಕಾರು ಅಪಘಾತ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಮನೋಜ್ ಮಿತ್ತಲ್ ಅವರು ಬಿಜೆಪಿ ಮುಖಂಡರಾಗಿದ್ದು, ಅವರ ಚಿತ್ರವಿರುವ ಹೋರ್ಡಿಂಗ್ ಸ್ಥಳೀಯ ಪೊಲೀಸ್ ಠಾಣೆಯ ಪಕ್ಕದಲ್ಲೇ ನೇತಾಡುತ್ತಿದೆ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಸೋಮವಾರ ಆರೋಪಿಸಿದ್ದಾರೆ.
ಆರೋಪಿಯ ಕಾರಿನ ಕೆಳಗೆ ಎಳೆದೊಯ್ದ ಮಹಿಳೆಯು ಬೆತ್ತಲೆಯಾಗಿ ಕಂಡುಬಂದಿದ್ದಾಳೆ ಎಂದು ಆರೋಪಿಸಿರುವ ಅವರು, ಆಕೆಯ ಮೇಲೆ ಅತ್ಯಾಚಾರ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸುಲ್ತಾನ್ಪುರಿಯಲ್ಲಿ ಹೊಸವರ್ಷದ ದಿನವೇ 20ವರ್ಷದ ಯುವತಿಯೊಬ್ಬಳು ಅತ್ಯಂತ ದಾರುಣವಾಗಿ ಮೃತಪಟ್ಟಿದ್ದಳು.
ಅಮಾನ್ ವಿಹಾರ್ ನಿವಾಸಿಯಾದ 20 ವರ್ಷದ ಯುವತಿ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಸುಲ್ತಾನ್ಪುರಿಯಲ್ಲಿ ಕಾರೊಂದು ಡಿಕ್ಕಿಯಾಗಿತ್ತು. ಆಕೆ ಬಿದ್ದಿದ್ದನ್ನು ನೋಡದ ಚಾಲಕ ಕಾರನ್ನು ಮುಂದೆ ಚಲಾಯಿಸಿದ್ದ. ಯುವತಿ ಕಾರಿನಡಿಗೆ ಸಿಲುಕಿ ಸುಮಾರು 12-18 ಕಿಮೀ ದೂರ ಎಳೆಯಲ್ಪಟ್ಟಿದ್ದಳು. ಬಳಿಕ ಕಂಝಾವಲ್ ಬಳಿ ನಗ್ನ ಸ್ಥಿತಿಯಲ್ಲಿ ರಸ್ತೆ ಮೇಲೆ ಬಿದ್ದಿದ್ದಳು ಎಂದು ಹೇಳಲಾಗಿತ್ತು.
ಈ ಅಮಾನುಷ ಕೃತ್ಯಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕ ಅಮಿತ್ ಮಿತ್ತಲ್ರನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ಇದ್ದ ಐವರಲ್ಲಿ ಇವರೂ ಒಬ್ಬರು ಎಂದು ಖಚಿತವಾದ ಹಿನ್ನೆಲೆಯಲ್ಲಿ ಅಮಿತ್ ಮಿತ್ತಲ್ ಅರೆಸ್ಟ್ ಆಗಿದ್ದಾರೆ. ಹಾಗೇ, ಉಳಿದ ನಾಲ್ವರೂ ಬಂಧಿತರಾಗಿದ್ದಾರೆ. ಅದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಕಿಡಿ ಕಾರಿದೆ. ಅರೆಸ್ಟ್ ಆದವನು ಬಿಜೆಪಿ ಸದಸ್ಯ ಆಗಿದ್ದರಿಂದ ಪೊಲೀಸರು ಈ ಕೇಸ್ನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆಪ್ ವಕ್ತಾರ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.