ಸಾರ್ವಜನಿಕರ ದೂರಿನ ಹಿನ್ನೆಲೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ರವರು ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೆಕಾರ್ಡ್ ರೂಂ, ಸಬ್ ರಿಜಿಸ್ಟ್ರಾರ್ ಕಚೇರಿ, ಸರ್ವೇ ಕಚೇರಿಗೆ ಭೇಟಿ ನೀಡಿದ್ದು ರೆಕಾರ್ಡ್ ರೂಂನಲ್ಲಿ ದಾಖಲೆ ಡಿಜಿಟಲೀಕರಣದ ಬಗ್ಗೆ ಮಾಹಿತಿ ಪಡೆದರು. ಡಿಜಿಟಲೀಕರಣ ಆಗದ ದಾಖಲೆಗಳ ಶೀಘ್ರ ಡಿಜಿಟಲೀಕರಣಕ್ಕೆ ಸೂಚನೆ ನೀಡಿದರು.

ಭೂ ಮಾಪನ ಕಚೇರಿಗೆ ಭೇಟಿ
ಭೂ ಮಾಪನ ಕಚೇರಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಭಾರೀ ದೂರಿನ ಹಿನ್ನೆಲೆ ಸಬ್ ರಿಜಿಸ್ಡ್ರಾರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ನೋಂದಾಣಿ ವಿಳಂಬದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಪ್ರತೀ ಬಾರಿ ಸರ್ವರ್ ಡೌನ್ ಎನ್ನುತ್ತಿರೋ ಕಚೇರಿ ಸಿಬ್ಬಂದಿ ಹೀಗಾಗಿ ಸ್ವತಃ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು

ಸರ್ಕಾರದ ಮಟ್ಟದಲ್ಲಿ ಸರ್ವರ್ ಸಮಸ್ಯೆ ಇದ್ಯಾ ಅಂತ ಪ್ರಶ್ನೆ ಮಾಡಿದ್ದಾರೆ. ನಮ್ಮಲ್ಲಿ ಸರ್ವರ್ ಸಮಸ್ಯೆ ಇಲ್ಲ ಅಂತ ಅಧಿಕಾರಿಗಳಿಗೆ ಹೇಳಿದ ಮಿನಿಸ್ಟರ್. ಇಲ್ಲಿ ನೋಂದಾಣಿ ತಡವಾಗಲು ಕಾರಣ ಏನು ಅಂತ ಪ್ರಶ್ನೆ ಅಪ್ಲೋಡ್ ಹಾಗೂ ಪೇಮೆಂಟ್ ವೇಳೆ ಹೆಚ್ಚಾಗಿ ಸರ್ವರ್ ಸಮಸ್ಯೆ ಆದರೆ ಹೊರಗಿನ ನೆಟ್ ವರ್ಕ್ ಕಾರಣಕ್ಕೆ ಸಮಸ್ಯೆ ಅಂತ ಅಧಿಕಾರಿಗಳ ಸಮಾಜಾಯಿಷಿ ತಾಂತ್ರಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಡಿಸಿಗೆ ಸಚಿವರರು ಸೂಚನೆ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಸರ್ವರ್ ಸಮಸ್ಯೆ ಇಲ್ಲ, ನಿಮ್ಮ ಸಮಸ್ಯೆ ಸರಿ ಮಾಡಿ ಜನರು ಹೊರಗೆ ಅಪ್ಲೋಡ್ ಮಾಡುವಾಗ ಸಮಸ್ಯೆ ಇದ್ದರೆ ಅವರಿಗೆ ಮನವರಿಕೆ ಮಾಡಿ ಅಂತ ಸಚಿವರ ಸೂಚನೆ ಸಾರ್ವಜನಿಕರಿಂದಲೂ ತಾಲೂಕು ಕಚೇರಿ ಸಮಸ್ಯೆಗಳ ದೂರು ಆಲಿಸಿದ್ದಾರೆ ಸಚಿವ ಕೃಷ್ಣ ಭೈರೇಗೌಡ













