
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮೊಬೈಲ್ ಬಳಕೆ ವಿಚಾರಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗರಂ ಆಗಿದ್ದಾರೆ. ಜೈಲು ಅಧಿಕಾರಿಗಳ ವಿರುದ್ಧ ಕಿಡಿಕಾರಿರುವ ಗೃಹ ಸಚಿವ ಇಂತ ನಾನ್ಸೆನ್ ಗಳನ್ನ ಸಹಿಸಲ್ಲ. ತಕ್ಷಣವೇ ಸಭೆ ಕರೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್, ಪದೇಪದೇ ಜೈಲಿನಲ್ಲಿ ಹೀಗಾಗುತ್ತದೆ ಎಂದು ಹಿಂದೆಯೂ ಕ್ರಮ ತೆಗೆದುಕೊಂಡಿದ್ದೆವು. ಈ ಬಗ್ಗೆ ಕಾರಗೃಹ ಎಡಿಜಿಪಿ ದಯಾನಂದ್ ಜತೆ ನಿನ್ನೆ ಮಾತನಾಡಿದ್ದೇನೆ. ಪದೇ ಇದೇ ಇದು ನಡೆಯುತ್ತಿದೆ. ಯಾರು ಉಸ್ತುವಾರಿ ಇದ್ದಾರೆ ಅವರ ವಿರುದ್ಧ ಕ್ರಮ ಆಗಲೇಬೇಕು. ಇದು ನಾನ್ಸೆನ್ಸ್, ಇದನ್ನೆಲ್ಲ ಸಹಿಸಲು ಸಾಧ್ಯವಿಲ್ಲ ಎಂದರು

ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದು ದಯಾನಂದ್ ಅವರಿಂದ ವರದಿ ಕೇಳಿದ್ದೇನೆ. ನಾನೇ ಅಧಿಕಾರಿಗಳ ಸಭೆ ಕರೆಯುತ್ತೇನೆ. ದಯಾನಂದ್ ಅವರು ವರದಿ ಕೊಟ್ಟ ಮೇಲೆ ಪರಿಶೀಲನೆ ನಡೆಸುತ್ತೇವೆ. ವರದಿ ನಮಗೆ ಸಮಾಧಾನ ಆಗದೇ ಇದ್ದರೆ ಉನ್ನತ ಮಟ್ಟದ ತನಿಖೆ ಮಾಡುತ್ತೇವೆ. ಬೇರೆ ಬೇರೆ ಅಧಿಕಾರಿಗಳ ತಂಡದಿಂದ ತನಿಖೆಗೆ ಸಮಿತಿ ರಚನೆ ಮಾಡುತ್ತೇವೆ ಎಂದು ತಿಳಿಸಿದರು.

ಇನ್ನು ಜೈಲಿನಲ್ಲಿ ಸಿಬ್ಬಂದಿ ಕಡಿಮೆ ಇದ್ದಾರೆ ಎಂದು ಹೇಳುತ್ತಾರೆ. ಆದರೆ ಇದು ಕಾರಣವಲ್ಲ. ಕೇವಲ ಉಗ್ರನ ಕೈಯಲ್ಲಿ ಮಾತ್ರವಲ್ಲ, ಯಾರ ಕೈಯಲ್ಲೂ ಮೊಬೈಲ್ ಇರಬಾರದು. ಇದನ್ನ ಗಂಭೀರವಾಗಿ ತೆಗೆದುಕೊಂಡಿದ್ದೇನೆ
ತುರ್ತಾಗಿ ನಾನೇ ಒಂದು ಸಭೆ ನಡೆಸಿ ಲೋಪದೋಷಗಳಿಗೆ ಸಂಬಂಧಿದಂತೆ ಚರ್ಚೆ ಮಾಡುತ್ತೇನೆ. ಹಿಂದೆ ಕೂಡ ಅನೇಕ ಕಡೆ ಈ ರೀತಿ ಆದಾಗ ಅಧಿಕಾರಿಗಳು, ಸಿಬ್ಬಂದಿ ಅಮಾನತು ಮಾಡಿದ್ದೇವೆ. ಅದೇ ರೀತಿ ಈಗಲೂ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕಾರಾಗೃಹ ಎಡಿಜಿಪಿ ದಯಾನಂದ್ ಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.







